೩೭೧(ಜೆ) ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ಜು.೪ ಕಾರಟಗಿ ಬಂದ್

KannadaprabhaNewsNetwork |  
Published : Jun 25, 2024, 12:31 AM IST
ಸಮರ್ಪಕ ೩೭೧(ಜೆ) ಅನುಷ್ಠಾನಕ್ಕೆ ಆಗ್ರಹಿಸಿ ಜು.೪ ಕಾರಟಗಿ ಬಂದ್ . | Kannada Prabha

ಸಾರಾಂಶ

ಜಾಗೃತ ಯುವಕ ಸಂಘ ಮತ್ತು ಸರ್ವ ಸಂಘಟನೆಗಳ ಒಕ್ಕೂಟದ ಪೂರ್ವಭಾವಿ ಸಭೆ ಪಟ್ಟಣದ ಶರಣಬಸವೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಕಾರಟಗಿ

ಜಾಗೃತ ಯುವಕ ಸಂಘ ಮತ್ತು ಸರ್ವ ಸಂಘಟನೆಗಳ ಒಕ್ಕೂಟದ ಪೂರ್ವಭಾವಿ ಸಭೆ ಪಟ್ಟಣದ ಶರಣಬಸವೇಶ್ವರ ದೇವಸ್ಥಾನದಲ್ಲಿ ನಡೆಯಿತು.೩೭೧(ಜೆ) ಕಲಂ ಜಾರಿ ರದ್ದಿಗೆ ಆಗ್ರಹಿಸಿರುವ ಹಸಿರು ಪ್ರತಿಷ್ಠಾನದ ನಡೆ ಖಂಡಿಸಿ ಮತ್ತು ಸಮರ್ಪಕ ಹಾಗೂ ಪರಿಣಾಮಕಾರಿ ೩೭೧(ಜೆ) ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಜು. ೪ರಂದು ನಡೆಯುವ ಕಾರಟಗಿ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತವಾಯಿತು.ಸಭೆಯಲ್ಲಿ ಪಟ್ಟಣದ ಅಕ್ಕಿಗಿರಣಿ, ದಲಾಲಿ, ಕಿರಾಣಿ ವರ್ತಕರ ಸಂಘಟನೆಗಳು, ರೈತ, ದಲಿತ, ಕನ್ನಡ, ಕಾರ್ಮಿಕ, ವಿದ್ಯಾರ್ಥಿಪರ, ಮಹಿಳಾ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು ಒಕ್ಕೂರಿಲಿನಿಂದ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದವು.

ಈ ಸಂದರ್ಭ ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಎನ್. ಶ್ರೀನಿವಾಸ್, ಜಿಪಂ ಮಾಜಿ ಸದಸ್ಯ ವೀರೇಶ್ ಸಾಲೋಣಿ ಮಾತನಾಡಿ, ಕಲ್ಯಾಣ ಕರ್ನಾಟಕ ನೀರಾವರಿ, ಕೈಗಾರಿಕೆ, ವಾಣಿಜ್ಯ, ರಸ್ತೆ, ಸಾರಿಗೆ, ಶಿಕ್ಷಣ, ಉದ್ಯೋಗ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೊನೆಯ ಸ್ಥಾನದಲ್ಲಿದೆ. ಈ ಮೀಸಲಾತಿ ಸದುಪಯೋಗವಾಗಿಲ್ಲ ಎನ್ನುವುದಕ್ಕೆ ಜ್ವಲಂತ ಸಾಕ್ಷಿ. ಇಂಥದ್ದರಲ್ಲಿ ಅವಿರತವಾದ ಹೋರಾಟದ ಫಲವಾಗಿ ಸಿಕ್ಕಿರುವ ೩೭೧(ಜೆ) ವಿಶೇಷ ಸ್ಥಾನಮಾನ ರದ್ಧತಿಗೆ ಆಗ್ರಹಿಸಿರುವ ಹಸಿರು ಪ್ರತಿಷ್ಠಾನವನ್ನು ನಿಷೇಧಿಸಬೇಕು ಎಂದರು.

ಪ್ರಮುಖರಾದ ಶಿವಶರಣೇಗೌಡ ಯರಡೋಣಾ, ಪ್ರಹ್ಲಾದ್ ಜೋಷಿ ಮಾತನಾಡಿದರು.

ಈ ವೇಳೆ ನಾಗರಾಜ್ ಬಿಲ್ಗಾರ್, ಬಸವರಾಜ್ ಶಿಕ್ಷಕ ಬಸವರಾಜ್ ರ್‍ಯಾವಳದ್, ವಕೀಲ ಸೋಮನಾಥ್ ಹೆಬ್ಬಡದ್, ರೈತ ಮುಖಂಡರಾದ ಮರಿಯಪ್ಪ ಸಾಲೋಣಿ, ನಾರಾಯಣ ಈಡಿಗೇರ್, ಖಾಜಾ ಹುಸೇನ್ ಮುಲ್ಲಾ, ವಿಜಯಲಕ್ಷ್ಮೀ ಮೇಲಿನಮನಿ, ವಿರುಪಾಕ್ಷೇಶ್ವರ ಕಾವಿ, ಹನುಮೇಶ್ ವಡ್ಡರಟ್ಟಿ, ಪತ್ರಕರ್ತ ಕೆ. ಮಲ್ಲಿಕಾರ್ಜುನ ಜು. ೪ರಂದು ಕರೆ ನೀಡಿರುವ ಪ್ರತಿಭಟನೆಗೆ ಬೆಂಬಲ ಘೋಷಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಈಶಪ್ಪ ಇಟ್ಟಂಗಿ, ಜಿ. ಅರುಣಾದೇವಿ, ದೊಡ್ಡ ಬಸವರಾಜ ಬೂದಿ, ಬಸವರಾಜ ಕೊಪ್ಪದ್, ಸೌಮ್ಯ ಕಂದಗಲ್, ಸುಪ್ರಿಯಾ ಅರಳಿ, ಸಂಗನಗೌಡ, ಶ್ರೀನಿವಾಸ್ ಕಾನುಮಲ್ಲಿ, ರಾಮಣ್ಣ ಕೊರವರ್ ಪ್ರಮುಖರಾದ ಯಂಕಾರೆಡ್ಡೆಪ್ಪ ಚನ್ನಳ್ಳಿ, ಜಿ. ಯಂಕನಗೌಡ, ಜಗದೀಶ್ ಅವರಾದಿ, ಎಚ್. ಚಾಂದಸಿಂಗ್ ರಜಪೂತ, ಜಮದಗ್ನಿ ಚೌಡಕಿ, ತಿಪ್ಪೇಶ ಉಪನಾಳ, ಪರಸಪ್ಪ ದಾರಿಮನಿ, ತಾಯಪ್ಪ ಕೋಟ್ಯಾಳ, ಟಿ. ಶಂಕರ್‌ಸಿಂಗ್ ಹಳೇಮನಿ, ವೀರೇಶ ಪತ್ತಾರ, ರಮೇಶ ಮಾವಿನಮಡಗು, ವೀರೇಶ್ ಶೆಟ್ಟರ್, ಜಗದೀಶ್ ಭಜಂತ್ರಿ, ನೀಲಮ್ಮ, ಸುಜಾತಾ ಹಡಪದ್ ಇತರರಿದ್ದರು.

ಸಂಘದ ಗೌರವಾಧ್ಯಕ್ಷ ಶರಣಪ್ಪ ಕೋಟ್ಯಾಳ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಶರಣಪ್ಪ ಕಾಯಿಗಡ್ಡಿ, ಉಪಾಧ್ಯಕ್ಷರಾದ ಅಯ್ಯಪ್ಪ ಉಪ್ಪಾರ, ರುದ್ರೇಶ್ ಮಂಗಳೂರು ಕಾರ್ಯಕ್ರಮ ನಿರ್ವಹಿಸಿದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ