ವರ್ತಕರ ಹಾಗೂ ರೈತ ಮುಖಂಡರ ಸಭೆ । ಬಿತ್ತನೆ ಸಂದರ್ಭದಲ್ಲಿ ರೈತರು ಎಚ್ಚರಿಕೆ ವಹಿಸಬೇಕು
ರೈತರಿಗೆ ಗುಣ್ಣಮಟ್ಟದ ಬಿತ್ತನೆ ಬೀಜ ನೀಡಬೇಕೆಂದು ಏಜೆನ್ಸಿಗಳ ವರ್ತಕರಿಗೆ ಸೂಚನೆ ನೀಡಲಾಗಿದೆ. ಹಾಗೆಯೇ ಬಿತ್ತನೆಗೂ ಮುನ್ನ ಸರಿಯಾದ ಕ್ರಮದಲ್ಲಿ ಬಿಜೋಪಚಾರ ಮಾಡಬೇಕೆಂದು ರೈತರಿಗೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು.
ಬಿತ್ತನೆ ಬೀಜ ಖರೀದಿ ಮಾಡಿದ ತಕ್ಷಣ ಬಿತ್ತನೆ ಮಾಡುವುದು ಸರಿಯಲ್ಲ, ಮುಂದಿನ ದಿನಗಳಲ್ಲಿ ಗಿಡಗಳಿಗೆ ಯಾವುದೇ ರೀತಿ ರೋಗಗಳು ಬರದಂತೆ ಹಾಗೆಯೇ ನೆಲವನ್ನು ಹದಗೊಳಿಸುವ, ಬಿತ್ತನೆ ಮಾಡುವ ಕ್ರಮವನ್ನು ಸರಿಯಾದ ರೀತಿ ಯಲ್ಲಿ ನಿರ್ವಹಣೆ ಮಾಡಿದರೆ ಮಾತ್ರ ಅದು ಸಸಿಯಾಗಿ ಹುಟ್ಟಲು ಸಾಧ್ಯ, ಕೃಷಿ ವಿಜ್ಞಾನಿಗಳು ನೀಡಿರುವ ಈ ಸಲಹೆ ಗಳನ್ನು ರೈತರಿಗೆ ತಿಳಿಸಿಕೊಡಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ವರ್ತಕರು, ಬಿತ್ತನೆ ಬೀಜ ಖರೀದಿ ಸಂದರ್ಭದಲ್ಲಿ ರೈತರಿಗೆ ಬಿಲ್ ಕೊಡಬೇಕು, ಯಾವ ಕಂಪನಿಗೆ ಸೇರಿದೆ ಎಂಬ ಲೇಬಲ್ ಹಾಕಿರಬೇಕು ಎಂದು ವರ್ತಕರ ಹಾಗೂ ರೈತ ಮುಖಂಡರ ಸಭೆಯಲ್ಲಿ ರೈತರು ಆಗ್ರಹಿಸಿದರು.
ಕೆಂಪೇಗೌಡರ ಜಯಂತಿ- ಇಂದು, ನಾಳೆ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಚಿಕ್ಕಮಗಳೂರು: ನಗರದ ಕುವೆಂಪು ಕಲಾಮಂದಿರದಲ್ಲಿ ಜೂ. 27 ರಂದು ಕೆಂಪೇಗೌಡರ ಜಯಂತಿ ಆಚರಿಸಲಾಗುತ್ತಿದ್ದು, ಅವರ ವ್ಯಕ್ತಿತ್ವ, ಕಾರ್ಯ ಸಾಧನೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.
ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಜೂ.25 ಮತ್ತು 26 ರಂದು ಸ್ಪರ್ಧೆಗಳು ನಡೆಯಲಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಬಹುದು. ಪ್ರಥಮ ಬಹುಮಾನ 3 ಸಾವಿರ, ದ್ವಿತೀಯ ಬಹುಮಾನ 2 ಸಾವಿರ ರು., ತೃತೀಯ ಬಹುಮಾನ ಒಂದು ಸಾವಿರ ರು. ನಗದು ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿ ಗಳಿಗೆ ಪ್ರಶಂಸನಾ ಪತ್ರ ನೀಡಲಾಗುವುದು ಎಂದರು.
ಕೆಂಪೇಗೌಡರು ಮುಂದಾಲೋಚನೆಯಿಂದ ರಾಜಧಾನಿಯನ್ನು ನಿರ್ಮಿಸಿದ್ದಾರೆ. ನೀರಾವರಿ ಮತ್ತು ಪರಿಸರಕ್ಕೂ ಹೆಚ್ಚಿನ ಒತ್ತು ನೀಡಿದ್ದಾರೆ. ನಾವುಗಳು ಸ್ಥಳೀಯವಾಗಿ ಪರಸರಕ್ಕೆ ಸಂಬಂಧಿಸಿದಂತೆ ಯೋಜನೆಗಳನ್ನು ರೂಪಿಸಿಕೊಳ್ಳಲು ಸಾಧ್ಯ ವಿದೆ. ಕಳೆದ ವರ್ಷ ಬರ ಪರಿಸ್ಥಿತಿಯನ್ನು ನೋಡಿದ್ದೇವೆ. ಹಾಗಾಗಿ ಕಾರ್ಯಯೋಜನೆಯನ್ನು ರೂಪಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.