ಜಿಲ್ಲೆಯ ಪ್ರತಿಯೊಂದು ಕಾಲೇಜು, ಪ್ರೌಢ ಶಾಲೆ ವಿದ್ಯಾರ್ಥಿಗಳನ್ನು ಡ್ರಗ್ಸ್ ಸೇವನೆ ಪತ್ತೆ ಪರೀಕ್ಷೆ
ಕನ್ನಡಪ್ರ ಭ ವಾರ್ತೆ ಚಿಕ್ಕಮಗಳೂರು
ಪ್ರವಾಸಿಗರ ಸ್ವರ್ಗವಾಗಿರುವ ಕಾಫಿನಾಡು ಚಿಕ್ಕಮಗಳೂರು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬೆಳೆದಂತೆ ಅದರ ನೆರಳಿನಲ್ಲಿ ದೊಡ್ಡ ಮಟ್ಟದಲ್ಲಿ ಬೇರು ಬಿಡುತ್ತಿರುವ ಮಾದಕ ವಸ್ತುಗಳ ಜಾಲಗಳನ್ನು ಬೇರು ಸಹಿತ ಕಿತ್ತು ಹಾಕುವುದಕ್ಕೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಡ್ರಗ್ಸ್ ಸೇವನೆ ಪತ್ತೆಗೆ ಕಾರ್ಯತಂತ್ರ ರೂಪಿಸಿದೆ.ಯುವಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವುದರಿಂದ ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯ ಪ್ರತಿಯೊಂದು ಕಾಲೇಜು, ಪ್ರೌಢ ಶಾಲೆ ವಿದ್ಯಾರ್ಥಿಗಳನ್ನು ಡ್ರಗ್ಸ್ ಸೇವನೆ ಪತ್ತೆ ಪರೀಕ್ಷೆಗೆ ಒಳಪಡಿಸುವುದಕ್ಕೆ ಮುಂದಾಗಿದೆ.
ಸದ್ಯ ಚಿಕ್ಕಮಗಳೂರು ನಗರದ ಸುಮಾರು 8 ರಿಂದ 10 ಶಾಲಾ- ಕಾಲೇಜಿನ ಸುಮಾರು 80 ರಿಂದ 100 ವಿದ್ಯಾರ್ಥಿಗಳನ್ನು ಡ್ರಗ್ಸ್ ಸೇವನೆ ಪತ್ತೆಗೆ ಒಳಪಡಿಸಲಾಗಿದ್ದು, ಈವರೆಗೆ ಯಾವುದೇ ಗ್ರಡ್ಸ್ ಸೇವನೆ ಪ್ರಕರಣ ಪತ್ತೆಯಾಗಿಲ್ಲ. ಮುಂದಿನ ಹಂತದಲ್ಲಿ ತಾಲೂಕು ಹಾಗೂ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸುವುದಕ್ಕೆ ಯೋಜನೆ ಸಿದ್ಧಪಡಿಸಿಕೊಳ್ಳಲಾಗಿದೆ.
ಜಿಲ್ಲೆಯ ಖಾಸಗಿ ಮತ್ತು ಸರ್ಕಾರಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಆದರೆ, ಶಾಲಾ -ಕಾಲೇಜಿನ ಎಲ್ಲ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸುತ್ತಿಲ್ಲ. ರ್‍ಯಾಂಡ್ ಪದ್ಧತಿಯಲ್ಲಿ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ.10 ರಷ್ಟು ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಒಂದು ವೇಳೆ ಪತ್ತೆಯಾದರೆ, ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗುತ್ತದೆ, ಜತೆಗೆ, ಡ್ರಗ್ಸ್ ಸೇವನೆ ಮಾಡುತ್ತಿರುವ ವಿದ್ಯಾರ್ಥಿಗೆ ಸೂಕ್ತ ಸಲಹೆ, ಮಾರ್ಗದರ್ಶ ಕೊಡಿಸಿ ವ್ಯಸನ ಮುಕ್ತಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರಗ್ಸ್ ಸೇವನೆ ಪತ್ತೆಗೆ ವಿದ್ಯಾರ್ಥಿಗಳ ಮೂತ್ರದ ಮಾದರಿಯಲ್ಲಿ ಸಂಗ್ರಹಿಸಲಾಗುತ್ತದೆ. ಮೂತ್ರವಲ್ಲಿ ಡ್ರಗ್ಸ್ ಪತ್ತೆ ಕಿಟ್‌ಗೆ ಹಾಕಿದ ತಕ್ಷಣ ಸುಮಾರು 15 ರಿಂದ 20 ನಿಮಿಷದಲ್ಲಿ ಫಲಿತಾಂಶ ಲಭ್ಯವಾಗಲಿದೆ. ಸೂಕ್ಷ್ಮವಾಗಿ ವಿದ್ಯಾರ್ಥಿಗಳಿಂದ ಮಾದರಿ ಸಂಗ್ರಹಿಸಲಾಗುತ್ತಿದೆ. ಸುಮಾರು ₹40 ರಿಂದ 50 ವಚ್ಚದಲ್ಲಿ ಈ ಕಿಟ್ ಲಭ್ಯವಾಗಲಿದೆ. ಸದ್ಯ ಲಭ್ಯವಿರುವ ಕಿಟ್‌ನಲ್ಲಿ ಪರೀಕ್ಷೆ ನಡೆಸಲಾಗಿದೆ. ಕಿಟ್ ಖರೀದಿಗೆ ಕ್ರಮ ವಹಿಸಲಾಗಿದೆ. ಕಿಟ್ ಖರೀದಿ ಬಳಿಕ ಮುಂದಿನ ಹಂತದ ಪರೀಕ್ಷೆ ಕಾರ್ಯ ಆರಂಭಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ವಿಭಾಗದ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.ಡ್ರಗ್ಸ್ ಪ್ರಕರಣದಲ್ಲಿ ಟಾಪ್ 10ರಲ್ಲಿ ಜಿಲ್ಲೆ
---ಕೋಟ್---
- ಡಾ.ಅಶ್ವಥ್ ಬಾಬು, ಡಿಎಚ್‌ಒ ಚಿಕ್ಕಮಗಳೂರು
ಕಳೆದ ಮೂರು ವರ್ಷದಲ್ಲಿ ಜಿಲ್ಲೆಯಲ್ಲಿ ದಾಖಲಾದ ಡ್ರಗ್ಸ್ ಪ್ರಕರಣ
ವರ್ಷಪ್ರಕರಣಕಾರಿನಲ್ಲಿ ಪತ್ತೆಬೈಕ್‌ನಲ್ಲಿ ಪತ್ತೆಇತರೆ ವಾಹನದಲ್ಲಿ ಪತ್ತೆ2023224382
20242273422025270251
ಒಟ್ಟು72108175(ಸೂಕ್ತ ಫೋಟೋ ಬಳಸುವುದು)