ಕನ್ನಡಪ್ರಭವಾರ್ತೆ ಮಧುಗಿರಿ
ದಲಿತ ಕವಿ ಸಿದ್ದಲಿಂಗಯ್ಯರವರ ಜನ್ಮದಿನದ ಅಂಗವಾಗಿ ದಲಿತ ಸಂಘರ್ಷ ಸಮಿತಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು. ಕಪ್ಪುಮುಖದ ಬಿಳಿ ಗಡ್ಡ ಉರಿಯುತ್ತಿರುವ ಕಣ್ಣುಗಳು ಎಂಬ ಕವನ ಓದುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಂಘರ್ಷ ಸಮಿತಿ ಉಚ್ಛಾಯ ಸ್ಥಿತಿಯಲ್ಲಿದ್ದ ಸಂದರ್ಭ ದಲಿತರ ಮೇಲಿನ ಶೋಷಣೆ,ಕೊಲೆ,ಅತ್ಯಾಚಾರ ನಡೆಯುತ್ತಿದ್ದನ್ನು ಕಣ್ಣಾರೆ ಕಂಡ ಸಿದ್ದಲಿಂಗಯರವರ ಕವಿತೆಗಳು ಹಾಡುಗಳಾಗಿ ಸಂಘಟಕರ ಬಾಯಲ್ಲಿ ಛಲದ ಕಿಚ್ಚನ್ನು ಹೊತ್ತಿಸಿದವು. ಬೀದಿ ನಾಟಕಗಳಲ್ಲಿ ಸಿದ್ದಲಿಂಗಯರವರ ಜನಪದ ಕವಿತೆಗಳು ದಲಿತರಿಗೆ ಬೆಂಗಾವಲಾಗಿದ್ದವು ಎಂದರು. ಮುಖ್ಯ ಅತಿಥಿ ವಕೀಲ ಹೇಮಸುಧಾರೆಡ್ಡಿ ಮಾತನಾಡಿ, ಸಿದ್ದಲಿಂಗಯ್ಯರವರ ಕವಿತೆಗಳು ಆ ಕಾಲಕ್ಕೆ ಸಂಘಟನೆಯ ಚಲನೆಗೆ ಮುಖ್ಯವಾಗಿದ್ದವು ಎಂದರು.ಅಧ್ಯಕ್ಷತೆ ವಹಿಸಿದ್ದ ದಲಿತ ಸಂಘರ್ಷ ಸಮಿತಿ ಪ್ರಧಾನ ಕಾರ್ಯದರ್ಶಿ ಬೆಲ್ಲದಮಡು ಕೃಷ್ಣಪ್ಪ ಮಾತನಾಡಿ, ಸಿದ್ದಲಿಂಗಯ್ಯರವರ ಕವಿತೆಗಳು ದಲಿತ ಚಳುವಳಿ ದಿಕ್ಕು ಬದಲಾಯಿಸಲು ಕಾರಣವಾಗಿದ್ದವು. ಅವರ ಬೆಂಕಿ ಭಾಷಣಗಳು ನಮ್ಮಲ್ಲಿ ಛಲ ಮೂಡಿಸಿದ್ದವು. ದಲಿತ ಸಂಘರ್ಷ ಸಮಿತಿ ಎಂದಿಗೂ ಆಲದ ಮರವಿದ್ದ ಹಾಗೆ ಎಂದರು.
ಕಾರ್ಯಕ್ರಮದಲ್ಲಿ ತೆರಿಯೂರು ಶಿವಣ್ಣ,ಜಯರಾಮಯ್ಯ,ರವಿಕುಮಾರ್,ವಕೀಲ ಶ್ರೀನಿವಾಸ್, ಅಡವೀಶ್, ಮುನಿರಾಜು, ಬೆಟ್ಟಪ್ಪ, ಮರಡಿರಂಗನಾಥ್, ನಾಗರಾಜು, ಶಿವಣ್ಣ, ಮಂಜುನಾಥ್, ಕಾರ್ತಿಕ್ ಇತರರಿದ್ದರು.