ಕನ್ನಡಪ್ರಭ ವಾರ್ತೆ ಬೆಂಗಳೂರು
ಬಾಣಸವಾಡಿ-87, ಜೆ.ಬಿ.ನಗರ-81, ಗೋವಿಂದಪುರ-35, ಕೆ,ಜಿ.ಹಳ್ಳಿ-30, ಡಿ.ಜೆ.ಹಳ್ಳಿ-29, ಹೆಣ್ಣೂರು-9, ಕಮರ್ಷಿಯಲ್ ಸ್ಟ್ರೀಟ್-16, ಪುಲಿಕೇಶಿನಗರ-15, ಇಂದಿರಾನಗರ-12, ರಾಮಮೂರ್ತಿನಗರ-10, ಬೈಯಪ್ಪನಹಳ್ಳಿ-8, ಶಿವಾಜಿನಗರ-8 ಹಾಗೂ ಭಾರತಿನಗರ-5 ಸೇರಿದಂತೆ ಒಟ್ಟು ಪೂರ್ವ ವಿಭಾಗದ 14 ಠಾಣೆಗಳ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಮೊಬೈಲ್ ಕಳೆದುಕೊಂಡ ಕೂಡಲೇ ಸಿಇಐಆರ್ ಪೋರ್ಟಲ್‌ನಲ್ಲಿ ಮೊಬೈಲ್ ವಿವರ ದಾಖಲಿಸಿದರೆ ಅಥವಾ ಪೊಲೀಸರಿಗೆ ದೂರು ನೀಡಿದರೆ ಮೊಬೈಲ್‌ಗಳನ್ನು ಪತ್ತೆ ಮಾಡಲು ಅನುಕೂಲವಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಕಳೆದ ಬಾರಿ ಸಹ ನಾಲ್ಕು ಕೋಟಿ ರು. ಮೌಲ್ಯದ ಮೊಬೈಲ್‌ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಈಗ 1.15 ಕೋಟಿ ರು. ಬೆಲೆಯ ಮೊಬೈಲ್ ಸಿಕ್ಕಿವೆ. ಮೊಬೈಲ್ ಕಳ್ಳತನ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇದರ ಹಿಂದಿರುವ ಜಾಲವನ್ನು ಭೇದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಆಯುಕ್ತರು ಹೇಳಿದ್ದಾರೆ.