ಬೆಂಗಳೂರು : ಮಾಜಿ ಶಾಸಕ ಎನ್. ಸಂಪಂಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಗಾ ಸುಲ್ತಾನ್, ಎಂ.ಎ. ಗಫೂರ್ ಸೇರಿದಂತೆ 39 ಮಂದಿಗೆ ಕಾಂಗ್ರೆಸ್ ಹೈಕಮಾಂಡ್ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಅಂತಿಮಗೊಳಿಸಿದೆ.
ಈ ಪಟ್ಟಿಯಲ್ಲಿ ಶಾಸಕ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಅವರು ಸ್ಥಾನ ಪಡೆದಿದ್ದಾರೆ. ಧಾರವಾಡ ಜಿ.ಪಂ. ಮಾಜಿ ಸದಸ್ಯ ಯೋಗೀಶ್ ಗೌಡ ಕೊಲೆ ಆರೋಪದ ಮೇಲೆ ಶಾಸಕ ವಿನಯ್ ಕುಲಕರ್ಣಿ ಅವರು ಜೈಲಿನಲ್ಲಿರುವ ಕಾರಣಕ್ಕೆ ಅವರ ಪತ್ನಿಗೆ ವಿನಯ್ ಅವರು ನಿರ್ವಹಿಸುತ್ತಿದ್ದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು 37 ಮಂದಿಯ ಪಟ್ಟಿಯನ್ನು ಕೆ.ಸಿ. ವೇಣುಗೋಪಾಲ್ ಅವರಿಗೆ ಸಲ್ಲಿಸಿದ್ದರು. ಅವರು ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪಟ್ಟಿ ಕಳುಹಿಸಿದ್ದು, ಖರ್ಗೆ ಅವರು ಈ ಪಟ್ಟಿಗೆ ಹೆಚ್ಚುವರಿಯಾಗಿ ಎರಡು ಹೆಸರನ್ನು ಸೇರ್ಪಡೆ ಮಾಡಿ 39 ಮಂದಿಯ ಪಟ್ಟಿಗೆ ಒಪ್ಪಿಗೆ ನೀಡಿದ್ದಾರೆ.
ಖರ್ಗೆ ಅವರಿಂದ ಅನುಮೋದನೆ ಪಡೆದ ಪಟ್ಟಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರವಾನಿಸಿದ್ದಾರೆ. ಬಿಹಾರ ಪ್ರವಾಸದಿಂದ ಹಿಂತಿರುಗಿದ ಕೂಡಲೇ ಮುಖ್ಯಮಂತ್ರಿಗಳು ನೀಡುವ ಸೂಚನೆ ಮೇರೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ನೇಮಕಾತಿ ಆದೇಶ ಹೊರಡಿಸಲಿದೆ.
ಇನ್ನು ಎನ್. ಸಂಪಂಗಿ ಅವರಿಗೆ ಕರ್ನಾಟಕ ರಾಜ್ಯ ಉಗ್ರಾಣ ನಿಗಮ, ವೈ. ಸೈಯೀದ್ ಅಹ್ಮದ್ ಅವರಿಗೆ ದೇವರಾಜ ಅರಸು ಟ್ರಕ್ ಟರ್ಮಿನಲ್, ಕರಾವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಎಂ.ಎ. ಗಫೂರ್, ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಅಗಾ ಸುಲ್ತಾನ್, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣೀಕರಣ ಏಜೆನ್ಸಿ ಅಧ್ಯಕ್ಷೆಯಾಗಿ ಲಾವಣ್ಯ ಬಲ್ಲಾಳ್ ಜೈನ್ ಅವರಿಗೆ ಅವಕಾಶ ನೀಡಲಾಗಿದೆ.
ನಿಗಮ, ಮಂಡಳಿ ಮತ್ತು ಅಧ್ಯಕ್ಷರ ಹೆಸರು:
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗ- ಸಿ.ರಘು, ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ- ಅರುಣ್ ಪಾಟೀಲ್, ಜೀವ ವೈವಿಧ್ಯತೆ ಮಂಡಳಿ- ವಡ್ನಾಳ್ ಜಗದೀಶ್, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ- ಮುರಳಿ ಅಶೋಕ್, ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪಂಗಡಗಳ ಆಯೋಗ- ಡಾ. ಮೂರ್ತಿ, ಮಾಜಿ ಸೈನಿಕರ ಕಲ್ಯಾಣ ಮಂಡಳಿ ಮಲ್ಲಿಕಾರ್ಜುನ್, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ- ಡಾ.ಬಿ.ಸಿ. ಮುದ್ದುಗಂಗಾಧರ್, ಕರ್ನಾಟಕ ಇಕೋ ಟೂರಿಸಂ ಅಭಿವೃದ್ಧಿ ಮಂಡಳಿ- ಶಾರ್ಲೆಟ್ ಪಿಂಟೋ, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ- ಮರಿಯೋಜಿ ರಾವ್, ಮಂಗಳೂರು ವಿದ್ಯುತ್ ಸರಬರಾಜು ಕಂಪನಿ- ಕೆ. ಹರೀಶ್ ಕುಮಾರ್, ಕಾಡುಗೊಲ್ಲ ಅಭಿವೃದ್ಧಿ ನಿಗಮ- ಮಹೇಶ್, ಬಯಲುಸೀಮೆ ಅಭಿವೃದ್ಧಿ ಮಂಡಳಿ ಚಿತ್ರದುರ್ಗ- ಮಂಜಪ್ಪ, ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ- ದರಮಣ್ಣ ಉಪ್ಪಾರ, ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ- ಅಂಜನಪ್ಪ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ- ನೀಲಕಂಠ ಮುಳ್ಗೆ, ಕಮಾಂಡ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕಲಬುರ್ಗಿ- ಬಾಬು ಹೊನ್ನಾ ನಾಯಕ್, ಮಲಪ್ರಭ ಮತ್ತು ಘಟಪ್ರಭ ಯೋಜನೆ ಕಮಾಂಡ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಳಗಾವಿ- ಯುವರಾಜ್ ಕದಂ, ಕರ್ನಾಟಕ ತೊಗರಿ ಬೇಳೆ ಅಭಿವೃದ್ಧಿ ನಿಗಮ- ಅನಿಲ್‌ಕುಮಾರ್ ಜಾಮಬಾರ್, ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ- ಪ್ರವೀಣ್ ಹಾರ್ವಾಳ್, ನಾರಾಯಣ ಗುರು ಅಭಿವೃದ್ಧಿ ನಿಗಮ- ಮಂಜುನಾಥ್ ಪೂಜಾರಿ, ಕರ್ನಾಟಕ ರಾಜ್ಯ ಧಾನ್ಯಗಳ ಅಭಿವೃದ್ಧಿ ಮಂಡಳಿ- ಸಯ್ಯದ್ ಮೆಹ್ಮೂದ್ ಕಿಸ್ಟಿ, ಕರ್ನಾಟಕ ಸವಿತಾ ಸಮಾಜ ಅಭಿವೃದ್ದಿ ನಿಗಮ- ಎಂ.ಎಸ್. ಮುತ್ತುರಾಜ್, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ- ನಂಜಪ್ಪ, ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ- ವಿಶ್ವಾಸ್ ದಾಸ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ- ಆರ್. ಸತ್ಯನಾರಾಯಣ, ಕರ್ನಾಟಕ ರೇಷ್ಮೆ ಮಾರುಕಟ್ಟೆ ಮಂಡಳಿ- ಗಂಗಾಧರ್, ಹಾಸನ ನಗರಾಭಿವೃದ್ಧಿ ಪ್ರಾಧಿಕಾರ- ಶಿವಪ್ಪ, ಕರ್ನಾಟಕ ನಿಂಬೆ ಅಭಿವೃದ್ಧಿ ಮಂಡಳಿ- ಬಿ.ಎಸ್. ಕಾವಲಗಿ, ಕುಂಬಾರ ಅಭಿವೃದ್ದಿ ನಿಗಮ- ಡಾ.ಶ್ರೀನಿವಾಸ ವೇಲು, ಕರ್ನಾಟಕ ರಾಜ್ಯ ಕನಿಷ್ಠ ವೇತನ ಮಂಡಳಿ- ಟಿ.ಎಂ. ಶಾಹೀದ್ ತೆಕ್ಕಿಲ್, ಕರ್ನಾಟಕ ರಾಜ್ಯ ಕೈಮಗ್ಗ ಮೂಲಸೌಕರ್ಯ ಮಂಡಳಿ- ಚೇತನ್ ಕೆ. ಗೌಡ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ಮಂಡಳಿ- ಶರಣಪ್ಪ ಸಲಾದ್‌ಪುರ್.
ಸಿದ್ದರಾಮಯ್ಯ, ಡಿಕೆಶಿ, ಸುರ್ಜೇವಾಲಾ ನಡುವಿನ ಚರ್ಚೆ ಬಳಿಕ ಅಂತಿಮವಾಗಿದ್ದ ಪಟ್ಟಿಗೆ ಪಕ್ಷದ ಅಧ್ಯಕ್ಷ ಖರ್ಗೆ ಅನುಮೋದನೆ
ರಾಜ್ಯದಿಂದ ರವಾನೆಯಾಗಿದ್ದ 37 ಹೆಸರುಗಳಿಗೆ ಮತ್ತೆ ಎರಡು ಹೆಸರು ಸೇರಿ ನಿಗಮ ಮಂಡಳಿ ಹುದ್ದೆ ಅಂತಿಮಗೊಳಿಸಿದ ಖರ್ಗೆ
ಪಟ್ಟಿಯಲ್ಲಿ ಹಲವು ಹಾಲಿ, ಮಾಜಿ ಶಾಸಕರು, ಪಕ್ಷದ ಹಿರಿಯ ನಾಯಕರು, ಕಾರ್ಯಕರ್ತರಿಗೆ ಸ್ಥಾನ ನೀಡಿದ ಕೈ ಹೈಕಮಾಂಡ್
ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಂದ ಅನುಮೋದನೆ ಪಡೆದ ಪಟ್ಟಿ ಸಿಎಂಗೆ ರವಾನಿಸಿದ ಪಕ್ಷದ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್
ಬಿಹಾರ ಪ್ರವಾಸದಿಂದ ಹಿಂತಿರುಗಿದ ಕೂಡಲೇ ಸಿಎಂ ಆದೇಶದ ಅನ್ವಯ ಸಿಬ್ಬಂದಿ ಇಲಾಖೆಯಿಂದ ನೇಮಕಾತಿ ಆದೇಶದ ಪ್ರಕಟಣೆ