ಸಿಆರ್‌ಪಿಎಫ್‌ಗೆ ಸ್ವದೇಶಿ ನಿರ್ಮಿತ200 ಸ್ನೈಪರ್‌ ರೈಫಲ್‌ ಪೂರೈಕೆ

KannadaprabhaNewsNetwork |  
Published : Sep 25, 2025, 01:00 AM IST
ರೈಫಲ್‌  | Kannada Prabha

ಸಾರಾಂಶ

ಎಡ್ಜ್‌ ಘಟಕ ಕಾರಾಕಲ್ ಹಾಗೂ ಮೆಘಾ ಎಂಜಿನಿಯರಿಂಗ್‌ ಮತ್ತು ಇನ್‌ಫ್ರಾಸ್ಟ್ರಕ್ಚರ್ಸ್‌ ಸಮೂಹ ಗುಂಪಿನ ಐಕಾಮ್‌ ಟೆಲಿ ಲಿಮಿಟೆಡ್, ಭಾರತದ ಕೇಂದ್ರ ಮೀಸಲು ಪಡೆಗಾಗಿ (ಸಿಆರ್‌ಪಿಎಫ್) 200 ಅತ್ಯಾಧುನಿಕ ಸಿ‌ಎಸ್‌ಆರ್–338 ಸ್ನೈಪರ್‌ ರೈಫಲ್‌ಗಳನ್ನು ಪೂರೈಸುವ ಅವಕಾಶವನ್ನು ತನ್ನದಾಗಿಸಿಕೊಂಡಿದೆ.

 ಬೆಂಗಳೂರು :  ಭಾರತ–ಯುಎಇ ರಕ್ಷಣಾ ಸಹಭಾಗಿತ್ವದಲ್ಲಿ ಮಹತ್ವದ ಹೆಜ್ಜೆಯಾಗಿ, ಎಡ್ಜ್‌ ಘಟಕ ಕಾರಾಕಲ್ ಹಾಗೂ ಮೆಘಾ ಎಂಜಿನಿಯರಿಂಗ್‌ ಮತ್ತು ಇನ್‌ಫ್ರಾಸ್ಟ್ರಕ್ಚರ್ಸ್‌ ಸಮೂಹ ಗುಂಪಿನ ಐಕಾಮ್‌ ಟೆಲಿ ಲಿಮಿಟೆಡ್, ಭಾರತದ ಕೇಂದ್ರ ಮೀಸಲು ಪಡೆಗಾಗಿ (ಸಿಆರ್‌ಪಿಎಫ್) 200 ಅತ್ಯಾಧುನಿಕ ಸಿ‌ಎಸ್‌ಆರ್–338 ಸ್ನೈಪರ್‌ ರೈಫಲ್‌ಗಳನ್ನು ಪೂರೈಸುವ ಅವಕಾಶವನ್ನು ತನ್ನದಾಗಿಸಿಕೊಂಡಿದೆ.

ಈ ಸ್ನೈಪರ್ ರೈಫಲ್‌ಗಳನ್ನು ಹೈದರಾಬಾದ್‌ನಲ್ಲಿರುವ ಐಕಾಮ್–ಕಾರಾಕಲ್ ಸಣ್ಣ ಶಸ್ತ್ರಾಸ್ತ್ರ ಘಟಕದಲ್ಲಿ ತಯಾರಿಸಿ ಹಸ್ತಾಂತರಿಸಲು ಉದ್ದೇಶಿಸಲಾಗಿದೆ. ಕಳೆದ ಏಪ್ರಿಲ್‌ನಲ್ಲಿ ಉದ್ಘಾಟನೆಯಾದ ಈ ಘಟಕವು ಭಾರತೀಯ ಸಶಸ್ತ್ರ ಪಡೆಗಳು ಹಾಗೂ ಕೇಂದ್ರೀಯ ಸಶಸ್ತ್ರ ಪಡೆಗಳಿಗೆ ಶಸ್ತ್ರಾಸ್ತ್ರ ಪೂರೈಕೆಯ ಪ್ರಮುಖ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ.

ಈ ಕುರಿತು ಮಾತನಾಡಿರುವ ಕಾರಾಕಲ್ ಸಿಇಒ ಹಮಾದ್ ಅಲಾಮೇರಿ ಅವರು, ಈ ತಂತ್ರಜ್ಞಾನ ವರ್ಗಾವಣೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ‘ಮೇಕ್ ಇನ್ ಇಂಡಿಯಾ’ ಉಪಕ್ರಮಕ್ಕೆ ಮಹತ್ವದ ಬೆಂಬಲವಾಗಿದ್ದು, ಯುಎಇ–ಭಾರತ ರಕ್ಷಣಾ ಸಹಭಾಗಿತ್ವದ ಐತಿಹಾಸಿಕ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ.

ಐಕಾಮ್ ನಿರ್ದೇಶಕ ಸುಮಂತ್ ಪಾಟೂರು ಹರ್ಷ ಅವರು, ‘ಈ ಒಪ್ಪಂದವು ಹೈದರಾಬಾದ್‌ನಲ್ಲಿ ಗುಣಮಟ್ಟದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜೊತೆ, ಭಾರತದ ರಕ್ಷಣಾ ಕೈಗಾರಿಕಾ ಪರಿಸರವನ್ನು ಬಲಪಡಿಸುತ್ತದೆ’ ಎಂದು ವ್ಯಕ್ತಪಡಿಸಿದ್ದಾರೆ.

ಸಿ‌ಎಸ್‌ಆರ್–338 ಸ್ನೈಪರ್ ರೈಫಲ್‌ಗಳನ್ನು 2025ರ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಪೂರೈಸಲಾಗುವುದು. ಈ ಅತ್ಯಾಧುನಿಕ ಬೋಲ್ಟ್–ಆಕ್ಷನ್ ರೈಫಲ್ 338 ಲಾಪುವ ಮ್ಯಾಗ್ನಮ್‌ನಲ್ಲಿ ಚೇಂಬರ್ ಮಾಡಲ್ಪಟ್ಟಿದ್ದು, 27 ಇಂಚಿನ ಬ್ಯಾರೆಲ್ ಮತ್ತು 10 ರೌಂಡ್ ಮ್ಯಾಗಜೀನ್, ಟೆಲಿಸ್ಕೋಪ್‌ ನಂತಹ ಆಧುನಿಕ ಸಾಮಗ್ರಿಗಳನ್ನು ಹೊಂದಿರಲಿದೆ ಎಂದು ಐಕಾಮ್‌ ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ