ಕನ್ನಡಪ್ರಭ ವಾರ್ತೆ ಮಂಗಳೂರು
ಕರಾವಳಿಯಲ್ಲಿ ಮೊದಲ ಬಾರಿಗೆ ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಟೆಕ್ನಾಲಜಿ ಅಸಿಸ್ಟೆಡ್ ರೀಕನ್‌ಸ್ಟ್ರಕ್ಟಿವ್ ಸರ್ಜರಿಯ 3ಡಿ ಡಿಸೈನಿಂಗ್ ಮತ್ತು ಪ್ರಿಂಟಿಂಗ್ ಲ್ಯಾಬ್‌ನ್ನು ಮಾಹೆ, ಟೀಚಿಂಗ್ ಹಾಸ್ಪಿಟಲ್ಸ್‌ನ ಚೀಫ್ ಆಪರೇಟಿಂಗ್ ಆಫೀಸರ್ ಡಾ.ಆನಂದ್ ವೇಣುಗೋಪಾಲ್ ಉದ್ಘಾಟಿಸಿದರು.ಬಳಿಕ ಮಾತನಾಡಿದ ಡಾ.ಆನಂದ್, 3ಡಿ ಡಿಸೈನ್ ಮತ್ತು ಪ್ರಿಂಟಿಂಗ್ ಆಗಮನವು ಆರೋಗ್ಯ ಕ್ಷೇತ್ರದಲ್ಲಿ ಗೇಮ್ ಚೇಂಜರ್ ಆಗಿದೆ. ಈ ತಂತ್ರಜ್ಞಾನವು ರೋಗದ ಗ್ರಹಿಕೆಯನ್ನು ಹೆಚ್ಚಿಸುವುದಲ್ಲದೆ, ಹೇಗೆ ರೋಗ ನಿರ್ಣಯ ಮಾಡುತ್ತೇವೆ ಮತ್ತು ಚಿಕಿತ್ಸೆಯ ಯೋಜನೆಯನ್ನು ಹೇಗೆ ರೂಪಿಸುತ್ತೇವೆ ಎಂಬುದರಲ್ಲಿ ಕ್ರಾಂತಿ ಉಂಟು ಮಾಡಲಿದೆ ಎಂದು ಹೇಳಿದರು. ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡೀನ್ ಡಾ.ಬಿ. ಉನ್ನಿಕೃಷ್ಣನ್ ಮಾತನಾಡಿ, ಸಿಟಿಎಆರ್‌ಎಸ್ ಸಹಯೋಗದೊಂದಿಗೆ ಆರಂಭವಾಗಿರುವ ಈ ಸೌಲಭ್ಯವು ಕರಾವಳಿ ಕರ್ನಾಟಕ ಮತ್ತು ಉತ್ತರ ಕೇರಳದಲ್ಲಿ ಪ್ರಥಮವಾಗಿದ್ದು, ಆರೋಗ್ಯ ಕ್ಷೇತ್ರದ ಕ್ರಿಯಾಶೀಲತೆಗೆ ಸಹಾಯವಾಗಲಿದೆ. ಪೂರ್ವ ಶಸ್ತ್ರಚಿಕಿತ್ಸಾ ಯೋಜನೆ, ನಿರ್ದಿಷ್ಟ ಕಟ್ಟಿಂಗ್ ರಚನೆ ಮತ್ತು ಡ್ರಿಲ್ಲಿಂಗ್ ಮಾರ್ಗದರ್ಶಿ ಮತ್ತು ಕಸ್ಟಮೈಸ್ ಮಾಡಿದ ಇಂಪ್ಲಾಂಟ್‌ಗಳು ಮತ್ತು ಇಂಪ್ಲಾಂಟ್ ಅಚ್ಚುಗಳ ಅಭಿವೃದ್ಧಿ ಒಳಗೊಂಡು ಸುಧಾರಿತ ವೈದ್ಯಕೀಯ 3ಡಿ ಡಿಸೈನ್ (ವಿನ್ಯಾಸ) ಮತ್ತು ಪ್ರಿಂಟಿಂಗ್ (ಮುದ್ರಣ) ಸೇವೆಗಳನ್ನು ಇದು ಒದಗಿಸುತ್ತದೆ ಎಂದರು.ಮಾಹೆಯ ಮಂಗಳೂರು ಕ್ಯಾಂಪಸ್‌ನ ವೈಸ್ ಚಾನ್ಸೆಲರ್ ಪ್ರೊ.ಡಾ. ದಿಲೀಪ್ ನಾಯ್ಕ್, ಮಂಗಳೂರು ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಸಗೀರ್ ಸಿದ್ದಿಕಿ, ಸಿಟಿಎಆರ್‌ಎಸ್ ನಿರ್ದೇಶಕ ಡಾ.ಎನ್. ಜಾನ್ ನೇಸನ್, ಆಸ್ಪತ್ರೆಯ ಕನ್ಸಲ್ಟೆಂಟ್ ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜನ್ ಡಾ. ಅಭಯ್ ಕಾಮತ್, ಕನ್ಸಲ್ಟೆಂಟ್ - ಆರ್ಥೋಪಿಡಿಷಿಯನ್ ಡಾ.ಆತ್ಮಾನಂದ ಹೆಗ್ಡೆ, ಕಾರ್ಡಿಯೋಥೋರಾಸಿಕ್ ವಾಸ್ಕ್ಯುಲಾರ್ ಸರ್ಜರಿಯ ಕನ್ಸಲ್ಟೆಂಟ್ ಡಾ. ಮಾಧವ್ ಕಾಮತ್ ಇದ್ದರು.