ಮಾಹೆಯಲ್ಲಿ 3ನೇ ರಾಷ್ಟ್ರೀಯ ಮಣಿಪಾಲ್‌ ಫಾರ್ಮಾಸ್ಯುಟಿಕ್ಸ್‌ ಸಮಾವೇಶ ಸಂಪನ್ನ

KannadaprabhaNewsNetwork |  
Published : Sep 03, 2024, 01:34 AM IST
ಮಾಹೆ2 | Kannada Prabha

ಸಾರಾಂಶ

ಸಮಾವೇಶದ ಕೊನೆಗೆ ಉಡುಪಿ ಜಿಲ್ಲೆಯ ವೈಶಿಷ್ಟ್ಯಪೂರ್ಣ ಆಚರಣೆಗಳಾದ ಮೊಸರು ಕುಡಿಕೆ, ಪಿಲಿನಲಿಕೆ, ಧೋಲ್‌ ತಾಸೆ ಸೇರಿದಂತೆ ‘ವ್ಯಾಘ್ರ ಲೀಲಾ’ ಸಾಂಸ್ಕೃತಿಕ ವೈವಿಧ್ಯವನ್ನು ಎಂಕಾಪ್ಸ್‌ ಪ್ರಸ್ತುತಿಪಡಿಸಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ವತಿಯಿಂದ ಮಣಿಪಾಲ್‌ ಕಾಲೇಜ್‌ ಆಫ್‌ ಫಾರ್ಮಾಸ್ಯುಟಿಕಲ್‌ ಸಾಯನ್ಸಸ್‌ (ಎಂಕಾಪ್ಸ್‌) ವತಿಯಿಂದ ರಾಷ್ಟ್ರೀಯ ಮಣಿಪಾಲ್‌ ಫಾರ್ಮಾಸ್ಯುಟಿಕ್ಸ್‌ ಸಮಾವೇಶ- ಎಂಪಿಕಾನ್‌ 2024 ಇತ್ತೀಚೆಗೆ ನಡೆಯಿತು.

‘ಫಾರ್ಮಾಸ್ಯುಟಿಕಲ್ಸ್‌ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನದ ಒಲವುಗಳು’ ಎಂಬ ಬಗ್ಗೆ ಕೇಂದ್ರಿತವಾದ ಸಮಾವೇಶದಲ್ಲಿ, ಔಷಧ ಉದ್ಯಮವನ್ನು ರೂಪಿಸುತ್ತಿರುವ ಇತ್ತೀಚೆಗಿನ ಸುಧಾರಿತ ತಂತ್ರಜ್ಞಾನದ ಬಗ್ಗೆ ಸಮಗ್ರ ಅವಲೋಕನ ಮಾಡಲಾಯಿತು. ವಿವಿಧ ಔಷಧೀಯ ವಿಜ್ಞಾನ ಸಂಸ್ಥೆಗಳ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಉದ್ಯಮಗಳ ಪ್ರತಿನಿಧಿಗಳು ಸೇರಿದಂತೆ 200 ಮಂದಿ ಪ್ರಮುಖರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.ಎಂಕಾಪ್ಸ್‌ನ ಪ್ರಾಂಶುಪಾಲ ಡಾ. ಶ್ರೀನಿವಾಸ ಮುತಾಲಿಕ್‌, ಸಮಾವೇಶದಲ್ಲಿ ಭಾಗವಹಿಸಿದವರು ಔಷಧ ವಿಜ್ಞಾನ ಕ್ಷೇತ್ರದಲ್ಲಿ ಪ್ರಸ್ತುತ ಕಾಲಘಟ್ಟದ ನಾವೀನ್ಯ ಮತ್ತು ಪರಿವರ್ತನೀಯ ಪ್ರಗತಿಗಳ ಕುರಿತ ಅನುಭವಗಳನ್ನು ಗಳಿಸುತ್ತಾರೆ. ಈ ಸಮಾವೇಶವು ಔಷಧ ಸಂಶೋಧನ ಕ್ಷೇತ್ರದಲ್ಲಿ ಮಹತ್ವದ ಪರಿಣಾಮ ಬೀರಲಿದೆ ಎಂಬ ಆಶಯ ವ್ಯಕ್ತಪಡಿಸಿದರು.ಸಮಾವೇಶದ ಸಂಯೋಜನಾ ಕಾರ್ಯದರ್ಶಿ ಡಾ.ಶೈಲಾ ಲೂಯಿಸ್‌, ಈ ಸಮಾವೇಶವು ಶೈಕ್ಷಣಿಕ - ಔದ್ಯಮಿಕ ಕ್ಷೇತ್ರಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಹತ್ವದ ಉಪಕ್ರಮವಾಗಿ ಆಯೋಜನೆಗೊಂಡಿದೆ. ಫಾರ್ಮಾಸ್ಯುಟಿಕಲ್ಸ್‌ನ ಹೊಸ ತಂತ್ರಜ್ಞಾನದ ಸಂಶೋಧನೆ -ಅನ್ವಯಗಳಿಗೆ ಸಂಬಂಧಿಸಿ ಸಹಭಾಗಿತ್ವದ ಬೆಳವಣಿಗೆಗಳಿಗೆ ಪೂರಕವಾದ ಸಮಾನವೇದಿಕೆಯನ್ನು ಈ ಸಮಾವೇಶ ಕಲ್ಪಿಸಿಕೊಟ್ಟಿದೆ ಎಂದರು. ಫಾರ್ಮಾಸ್ಯುಟಿಕಲ್‌ ತಂತ್ರಜ್ಞಾನದ ವ್ಯಾಪಕ ಪ್ರಗತಿಯನ್ನು ಪ್ರತಿಬಿಂಬಿಸುವಲ್ಲಿ ಈ ಸಮಾವೇಶವು ಯಶಸ್ವಿಯಾಯಿತು ಮತ್ತು ಎಂಕಾಪ್ಸ್‌ ಸಂಸ್ಥೆಯು ಜ್ಞಾನಪ್ರಸರಣ ಮತ್ತು ಸಹಭಾಗಿತ್ವದ ಮೂಲಕ ಔಷಧೀಯ ವಿಜ್ಞಾನ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತರುವ ಬದ್ಧತೆಯನ್ನು ಹೊಂದಿದ್ದು, ಈ ಆಶಯಕ್ಕೆ ಪೂರಕವಾಗಿ ಸಮಾವೇಶ ಸಂಪನ್ನಗೊಂಡಿತು.ಸಮಾವೇಶದ ಕೊನೆಗೆ ಉಡುಪಿ ಜಿಲ್ಲೆಯ ವೈಶಿಷ್ಟ್ಯಪೂರ್ಣ ಆಚರಣೆಗಳಾದ ಮೊಸರು ಕುಡಿಕೆ, ಪಿಲಿನಲಿಕೆ, ಧೋಲ್‌ ತಾಸೆ ಸೇರಿದಂತೆ ‘ವ್ಯಾಘ್ರ ಲೀಲಾ’ ಸಾಂಸ್ಕೃತಿಕ ವೈವಿಧ್ಯವನ್ನು ಎಂಕಾಪ್ಸ್‌ ಪ್ರಸ್ತುತಿಪಡಿಸಿತು.ಮಾಹೆಯ ಎಂಕಾಪ್ಸ್‌ ಸಂಸ್ಥೆಯು ಎನ್‌ಐಆರ್‌ಎಫ್‌ನ 2024 ಶ್ರೇಯಾಂಕದಲ್ಲಿ ಭಾರತದ ಅತ್ಯುನ್ನತ ಫಾರ್ಮಸಿ ಸಂಸ್ಥೆಗಳಲ್ಲಿ 8ನೇ ಸ್ಥಾನವನ್ನು ಪಡೆದಿರುವುದು ಇಲ್ಲಿ ಉಲ್ಲೇಖಾರ್ಹವಾಗಿದೆ.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ