ಮಂಡ್ಯ ಮಂಜುನಾಥ
ಈ ಬಾರಿಯ ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ೪೧೨೪ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರತಿ ವರ್ಷವೂ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆಯಲ್ಲಿ ಶೇ.೦.೫ರಷ್ಟು ಹೆಚ್ಚಳವಾಗುತ್ತಿದೆ. ಈ ಬಾರಿಯ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆ ಮೇಲೆ ಹದ್ದಿನ ಕಣ್ಣಿಡಲು ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ನೂರಾರು ಸೀಸಿ ಕ್ಯಾಮೆರಾ, ಡ್ರೋನ್‌ಗಳ ಕಣ್ಗಾವಲು ಇರಿಸಲಾಗಿದೆ.
೨೦೨೪ರಲ್ಲಿ ನಾಗಮಂಗಲ ಪಟ್ಟಣದಲ್ಲಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ವೇಳೆ ಕೋಮುಗಲಭೆ ಸೃಷ್ಟಿಯಾಗಿದ್ದರೆ, ೨೦೨೫ರಲ್ಲಿ ಮದ್ದೂರಿನಲ್ಲಿ ಗಲಭೆ ಮರುಕಳಿಸಿತ್ತು. ೨೦೨೬ರಲ್ಲಿ ಗಲಭೆ ನಡೆದಿದ್ದ ಸ್ಥಳವಾದ ನಾಗಮಂಗಲದಲ್ಲಿ ಭಾವೈಕ್ಯತೆಯ ಗಣೇಶೋತ್ಸವ ನಡೆದಿರುವುದು ಉತ್ತಮ ಬೆಳವಣಿಗೆಯಾಗಿದೆ. ಅದೇ ರೀತಿ ಮದ್ದೂರಿನಲ್ಲಿ ೧೦೮ ಸಾಮೂಹಿಕ ಗಣೇಶಮೂರ್ತಿಗಳ ವಿಸರ್ಜನಾ ಮೆರವಣಿಗೆಯೂ ಶಾಂತಿಯುತವಾಗಿ ನಡೆದಿರುವುದು ಸಮಾಧಾನವನ್ನು ತಂದಿದೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಕ್ಕಾಂ:
ಮದ್ದೂರಿನಲ್ಲಿ ನಡೆದ ಗಣೇಶಮೂರ್ತಿಗಳ ಮೆರವಣಿಗೆ ಸಮಯದಲ್ಲೂ ಮಸೀದಿಗಳ ಎದುರು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕರ್ಪೂರ ಹಚ್ಚಿ, ಪಟಾಕಿ ಸಿಡಿಸುವ ಪ್ರಯತ್ನ ನಡೆಸಿದರೂ ಅದಕ್ಕೆ ತಡೆಯೊಡ್ಡಿ ಸಮಾಧಾನದಿಂದ ಮುನ್ನಡೆಸಿದರು. ಪೊಲೀಸರ ಕ್ರಮವನ್ನು ಖಂಡಿಸಿ ಪ್ರತಿಭಟನೆಗಿಳಿದ ಹಿಂದೂ ಕಾರ್ಯಕರ್ತರ ಮನವೊಲಿಸಿ ತೆರಳುವಂತೆ ಮಾಡಿದರು.
ಸಾಮೂಹಿಕ ಗಣೇಶಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯುವ ಸ್ಥಳಗಳಲ್ಲಿ ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ನೂರಾರು ಸೀಸಿ ಕ್ಯಾಮೆರಾ, ಡ್ರೋನ್‌ಗಳ ಅಳವಡಿಸಲಾಗುತ್ತಿದೆ. ಭಾನುವಾರ ನಾಗಮಂಗಲದಲ್ಲಿ ನಡೆಯುವ ಸಾಮೂಹಿಕ ಗಣೇಶಮೂರ್ತಿಗಳ ವಿಸರ್ಜನಾ ಮೆರವಣಿಗೆ ವೇಳೆ ೪೦ ಕಡೆಗಳಲ್ಲಿ ೧೨೦ ಸೀಸಿ ಕ್ಯಾಮೆರಾ, ಡ್ರೋನ್ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಎಲ್ಲಾ ಕಡೆಗಳಿಂದಲೂ ದೃಶ್ಯಾವಳಿಗಳು ಕ್ಯಾಮೆರಾದಲ್ಲಿ ಸೆರೆಯಾಗುವಂತೆ ಅಳವಡಿಸಲಾಗಿದೆ. ಶಾಂತಿಗೆ ಭಂಗ ಉಂಟುಮಾಡುವ ಚಟುವಟಿಕೆಗಳು ನಡೆದಲ್ಲಿ ಅದು ಕ್ಮಾಮೆರಾಗಳ ಹದ್ದಿನ ಕಣ್ಣಿನಲ್ಲಿ ಸೆರೆಯಾಗುವಂತೆ ವ್ಯವಸ್ಥಿತವಾಗಿ ಅಳವಡಿಸಿರುವುದು ಈ ಬಾರಿಯ ಒಂದು ವಿಶೇಷವಾಗಿದೆ.
ನಾಗಮಂಗಲ ಮತ್ತು ಮದ್ದೂರು ಗಲಭೆ ಪ್ರಕರಣಗಳಿಂದ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆ ವೇಳೆ ಹೊರಗಿನಿಂದ ಬರುವವರ ಮೇಲೂ ನಿಗಾ ವಹಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಮೆರವಣಿಗೆಯ ಸಾಗುವ ಹಾದಿಯ ಸಂಪೂರ್ಣ ಚಿತ್ರಣವನ್ನು ಆಯೋಜಕರಿಂದ ಪಡೆದುಕೊಂಡಿದ್ದಾರೆ. ಮಸೀದಿ, ದರ್ಗಾಗಳ ಮುಂದೆ ಮೆರವಣಿಗೆ ಸಾಗುವುದಕ್ಕೆ ಯಾವುದೇ ಅಡ್ಡಿಪಡಿಸಿಲ್ಲ. ಆ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆಯನ್ನು ನಿಯೋಜಿಲಾಗಿದೆ. ಯಾರೂ ಸಹ ಪ್ರಚೋದನೆಗೆ ಒಳಗಾಗದಂತೆ, ಶಾಂತಿಗೆ ಭಂಗ ತರುವ ಚಟುವಟಿಕೆಗಳನ್ನು ನಡೆಸದಂತೆ ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದಾರೆ.
ವಿಭಾಗ ಸಂಖ್ಯೆ
ಮಂಡ್ಯ ೮೬೨
ಶ್ರೀರಂಗಪಟ್ಟಣ ೧೦೯೫
ಒಟ್ಟು ೪೧೨೪ಸಾಮೂಹಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಶಾಂತಿಯುತವಾಗಿ ನಡೆಯುವಂತೆ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಶಾಂತಿಗೆ ಭಂಗ ತರುವ ಚಟುವಟಿಕೆಗಳು ನಡೆಯದಂತೆ ಹಿಂದೂ-ಮುಸ್ಲಿಂ ಮುಖಂಡರೊಂದಿಗೆ ಶಾಂತಿಸಭೆ ನಡೆಸಿದ್ದೇವೆ. ಮದ್ದೂರಿನಲ್ಲಿ ಶಾಂತಿಯುತವಾಗಿ ಗಣೇಶಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆದಿದೆ. ನಾಗಮಂಗಲದಲ್ಲೂ ನಾಳಿನ ಮೆರವಣಿಗೆಗೆ ಸೀಸಿ ಕ್ಯಾಮೆರಾಗಳು, ಡ್ರೋನ್‌ಗಳ ಕಣ್ಗಾವಲು ಇಟ್ಟಿದ್ದೇವೆ. ಈಗಾಗಲೇ ಅಲ್ಲಿ ಭಾವೈಕ್ಯತೆಯ ಗಣೇಶೋತ್ಸವ ನಡೆದು ಹೊಸ ವಾತಾವರಣ ಸೃಷ್ಟಿಯಾಗಿದೆ. ಆದರೂ ಎಲ್ಲೆಡೆ ಬಿಗಿಭದ್ರತೆಯೊಂದಿಗೆ ಶಾಂತಿಯುತ ಗಣೇಶ ವಿಸರ್ಜನೆಗೆ ಪಣ ತೊಟ್ಟಿದ್ದೇವೆ.
- ಡಾ.ವಿ.ಜೆ.ಶೋಭಾರಾಣಿ, ಜಿಲ್ಲಾ ಪೊಲೀಸ್ ಅಧೀಕ್ಷಕರು, ಮಂಡ್ಯ