ಮಹಿಳೆಯ ಹೊಟ್ಟೆಯಲ್ಲಿದ್ದ 4.5 ಕೆಜಿ ಗೆಡ್ಡೆ ಶಸ್ತ್ರಚಿಕಿತ್ಸೆ ಮೂಲಕ ಹೊರಕ್ಕೆ

KannadaprabhaNewsNetwork |  
Published : Jun 13, 2025, 03:01 AM ISTUpdated : Jun 13, 2025, 03:02 AM IST
53 | Kannada Prabha

ಸಾರಾಂಶ

ಬಳಿಕ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ ತಜ್ಞ ವೈದ್ಯೆ ಡಾ. ಶ್ರೀನಿಧಿ ಹಾಗೂ ಅರಳವಳಿಕೆ ತಜ್ಞ ವೈದ್ಯೆ ಡಾ. ಸಾಯಿ ಸುಶ್ಮಿತಾ ನೇತೃತ್ವದ ತಜ್ಞ ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ 4.5 ಕೆಜಿ ಗೆಡ್ಡೆಯನ್ನು ಮಹಿಳೆಯ ದೇಹದಿಂದ ಹೊರತೆಗೆದಿದ್ದಾರೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ಪಟ್ಟಣದ ಕೃಷ್ಣ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ 4.5 ಕೆಜಿ ಗೆಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರ ತೆಗೆಯಲಾಗಿದ್ದು, ಇದೀಗ ಮಹಿಳೆ ಆರೋಗ್ಯದಲ್ಲಿ ಚೇತರಿಕೆಯಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೃಷ್ಣ ಆಸ್ಪತ್ರೆಯ ಸಂಸ್ಥಾಪಕರಾದ ಡಾ. ಗೀತಾ ಗುರುವಾರ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ಹಂಚಿಕೊಂಡರು.

ತಾಲೂಕಿನ ಗ್ರಾಮೀಣ ಪ್ರದೇಶದ 41 ವರ್ಷ ವಯಸ್ಸಿನ ಮಹಿಳೆಯೋರ್ವರು ಹೊಟ್ಟೆನೋವು ತಾಳಲಾರದೆ ಆಸ್ಪತ್ರೆಗೆ ದಾಖಲಾಗಿದ್ದರು, ಈ ಸಂದರ್ಭ ಸ್ಕ್ಯಾನಿಂಗ್ ಮೂಲಕ ಮಹಿಳೆಯ ಅಂಡಾಶಯದಲ್ಲಿ ಗೆಡ್ಡೆಯಿರುವುದು ಪತ್ತೆಯಾಗಿದೆ. ಬಳಿಕ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ ತಜ್ಞ ವೈದ್ಯೆ ಡಾ. ಶ್ರೀನಿಧಿ ಹಾಗೂ ಅರಳವಳಿಕೆ ತಜ್ಞ ವೈದ್ಯೆ ಡಾ. ಸಾಯಿ ಸುಶ್ಮಿತಾ ನೇತೃತ್ವದ ತಜ್ಞ ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ 4.5 ಕೆಜಿ ಗೆಡ್ಡೆಯನ್ನು ಮಹಿಳೆಯ ದೇಹದಿಂದ ಹೊರತೆಗೆದಿದ್ದಾರೆ. ಇದೀಗ ಮಹಿಳೆ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆಯಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು ಮಹಿಳೆಯರ ಗರ್ಭಕೋಶ ಹಾಗೂ ಅಂಡಾಶಯಗಳಲ್ಲಿ ಸಣ್ಣ ಪ್ರಮಾಣದ ಗೆಡ್ಡೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾದರೂ ಅಚ್ಚರಿ ಎಂಬಂತೆ ಮಹಿಳೆಯ ಹೊಟ್ಟೆಯಲ್ಲಿ 4.5 ಕೆಜಿ ಗೆಡ್ಡೆ ಪತ್ತೆಯಾಗಿದೆ. ಇನ್ನು ಮಹಿಳೆ ಹೊಟ್ಟೆಯಲ್ಲಿದ್ದ ಗೆಡ್ಡೆಯನ್ನು ಪತ್ತೆ ಹಚ್ಚಿ ಯಶಸ್ವಿಯಾಗಿ ಹೊರ ತೆಗಿದಿದ್ದರಿಂದ ಮಹಿಳೆಯ ಸಂಬಂಧಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಅದೇ ದಿನ ಆಸ್ಪತ್ರೆಗೆ ದಾಖಲಾಗಿದ್ದ 51 ವರ್ಷದ ಮಹಿಳೆಯ ಹೊಟ್ಟೆಯಲ್ಲಿದ್ದ 2.5 ಕೆ.ಜಿ ಗೆಡ್ಡೆಯನ್ನು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯ ಡಾ. ಪ್ರಭಾಕರ್ ನಾಯಕ್ ಹಾಗೂ ಡಾ. ಸಾಯಿ ಸುಶ್ಮಿತಾ ನೇತೃತ್ವದ ತಜ್ಞ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.

ವೈದ್ಯರಾದ ಡಾ. ಕುಶಲ್, ಡಾ. ಜಸ್ವಂತ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ