4 ಕೋಟಿ ರು. ವೆಚ್ಚದ ಕಾಮಗಾರಿಗೆ ಚಾಲನೆ: ಶಾಸಕ ರಮೇಶ ಬಂಡಿಸಿದ್ದೇಗೌಡ

KannadaprabhaNewsNetwork |  
Published : Sep 21, 2024, 02:06 AM IST
20ಕೆಎಂಎನ್ ಡಿ28 | Kannada Prabha

ಸಾರಾಂಶ

ಜಂಬೂ ಸವಾರಿ ಹೋಗುವ ರಸ್ತೆಗೆ ಮೊದಲು ಅಭಿವೃದ್ಧಿ, ನಂತರದಲ್ಲಿ ಪ್ರವಾಸಿ ತಾಣಗಳ ರಸ್ತೆಗಳು, ಪಟ್ಟಣದಿಂದ ಜೋಡಿ ರಸ್ತೆವರೆಗೆ 2 ಕೋಟಿ ಅನುದಾನದಲ್ಲಿ ಈಗಾಗಲೇ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದರ ಜೊತೆ ಗೋಸಾಯಿಘಾಟ್, ಗುಂಬಸ್, ಕಾವೇರಿ ಸಂಗಮ್ ಹಾಗೂ ನಿಮಿಷಾಂಬ ದೇವಾಲಯಗಳಿಗೆ ಹೋಗುವ ರಸ್ತೆಗಳ ಅಭಿವೃದ್ಧಿಗೊಳಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ದಸರಾ ಆಚರಣೆ ಹಿನ್ನೆಲೆಯಲ್ಲಿ ಪಟ್ಟಣದ ರಸ್ತೆಗಳ ಅಭಿವೃದ್ಧಿಗೆ 4 ಕೋಟಿ ರು. ಅನುದಾನದ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಹಾಗೂ ಸೆಸ್ಕಾಂ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ ಚಾಲನೆ ನೀಡಿದರು.

ಪಟ್ಟಣದ ಪುರಸಭಾ ವ್ಯಾಪ್ತಿಯ ಗಂಜಾಂನ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಈಗಾಗಲೇ ದಸರಾ ಪ್ರಯುಕ್ತ ಸರ್ಕಾರದಿಂದ 4 ಕೋಟಿ ಮಂಜುರಾತಿಗೆ ಕಳುಹಿಸಲಾಗಿದೆ. ಅನುದಾನ ಬಿಡುಗಡೆಯಾದ ನಂತರ ಇನ್ನು 15 ದಿನದಲ್ಲಿ ಕಾಮಗಾರಿಗಳು ನಡೆಯಲಿದೆ ಎಂದರು.

ಜಂಬೂ ಸವಾರಿ ಹೋಗುವ ರಸ್ತೆಗೆ ಮೊದಲು ಅಭಿವೃದ್ಧಿ, ನಂತರದಲ್ಲಿ ಪ್ರವಾಸಿ ತಾಣಗಳ ರಸ್ತೆಗಳು, ಪಟ್ಟಣದಿಂದ ಜೋಡಿ ರಸ್ತೆವರೆಗೆ 2 ಕೋಟಿ ಅನುದಾನದಲ್ಲಿ ಈಗಾಗಲೇ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ಇದರ ಜೊತೆ ಗೋಸಾಯಿಘಾಟ್, ಗುಂಬಸ್, ಕಾವೇರಿ ಸಂಗಮ್ ಹಾಗೂ ನಿಮಿಷಾಂಬ ದೇವಾಲಯಗಳಿಗೆ ಹೋಗುವ ರಸ್ತೆಗಳ ಅಭಿವೃದ್ಧಿಗೊಳಿಸಲಾಗುತ್ತದೆ ಎಂದರು.

ದಸರಾ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೆ ಮೊದಲು ಅವಕಾಶ ನೀಡಲಾಗುತ್ತದೆ. ಹಲವು ಮಂದಿ ಕಲಾವಿದರೂ ತಾಲೂಕು ಕಚೇರಿಗೆ ಕಲಾ ಪ್ರದರ್ಶನ ಮಾಡಲು ಅರ್ಜಿಗಳ ನೀಡಬೇಕು. ಇದಕ್ಕಾಗಿಯೇ ಒಂದು ಕೌಂಟರ್ ತೆರೆಯಲಾಗಿದೆ. ಸ್ಥಳೀಯ ಕಲಾವಿದರು ಯಾವುದೇ ಸಂಶಯ ಪಡದೆ ತಾಲೂಕು ಕಚೇರಿಯಲ್ಲಿ ಅರ್ಜಿಗಳ ಸಲ್ಲಿಸಬೇಕು ಎಂದರು.ದಸರಾ ಬನ್ನಿಮಂಟಪ ವೀಕ್ಷಿಸಿದ ಸಚಿವ, ಶಾಸಕರು

ಶ್ರೀರಂಗಪಟ್ಟಣ:ದಸರಾ ಹಿನ್ನೆಲೆಯಲ್ಲಿ ಕಿಗಂಗೂರಿನ ದಸರಾ ಬನ್ನಿಮಂಟಪಕ್ಕೆ ಕೃಷಿ ಹಾಗೂ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಶಾಸಕ ರಮೇಶ ಬಂಡಿಸಿದ್ದೇಗೌಡ ಮಂಡ್ಯ ಶಾಸಕ ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇತಿಹಾಸ ಪ್ರಸಿದ್ಧ ದಸರಾ ಬನ್ನಿ ಮಂಟಪವನ್ನು ತ್ವರಿತವಾಗಿ ಸ್ವಚ್ಛತೆ ಮಾಡಿ ಮಂಟಪಕ್ಕೆ ಬಣ್ಣ ಬಳಿಯವುದು ಸೇರಿದಂತೆ ಇತರ ಸಣ್ಣ ಕಾಮಗಾರಿಗಳ ನಡೆಸಿ ಬರುವ ಸಾರ್ವಜನಿಕರಿಗೆ ಮೂಲ ಸೌಕರ್ಯಗಳ ಒದಗಿಸಲು ಸ್ಥಳೀಯ ಪಂಚಾಯ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ವೇಳೆ ಪುರಸಭೆ ಸದಸ್ಯರಾದ ಎಂ.ಎಲ್.ದಿನೇಶ್, ಎಂ.ನಂದೀಶ್, ಮುಖಂಡರಾದ ಚನ್ನಪ್ಪ, ಟಿ.ಕೃಷ್ಣ, ಎಂ.ಲೋಕೇಶ್ ಸೇರಿದಂತೆ ಇತರರ ಪಂಚಾಯ್ತಿ ಸದಸ್ಯರು ಜನಪ್ರತಿನಿಧಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಬೀದಿ ನಾಯಿಗಳು ಶೀಘ್ರ ಶೆಲ್ಟರ್‌ಗೆ : ರಾವ್‌
ಸಿದ್ದು ಅಹಿಂದ ಲೀಡರ್‌ ಆಗಿದ್ದರೆ ಪುತ್ರ ಕ್ಷೇತ್ರ ಆಯ್ಕೆ ಏಕೆ?: ಗೌಡ