ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪ್ರವಾಸಿ ಮಂದಿರದಲ್ಲಿ ತಾಲೂಕಿನ ದಲಿತ ಸಮಾಜದ ಮುಖಂಡರು, ಗಣ್ಯರ ಸಮ್ಮುಖದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಅನೇಕ ಮುಖಂಡರು ಮಾತನಾಡಿ, 4 ದಿನಗಳ ಕಾರ್ಯಕ್ರಮ ಉತ್ತಮ ರೀತಿ ನಡೆಯಲು ಸಹಕರಿಸುವ ಭರವಸೆ ನೀಡಿದರು.
11 ರಂದು ಸಂಜೆ 5 ಗಂಟೆಗೆ ಮಾತೆ ಸಾವಿತ್ರಿಬಾಯಿಪುಲೆ ಜ್ಞಾನ ಮಂದಿರದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿಯಿಂದ ಕಾನೂನು ಅರಿವು ಕಾರ್ಯಕ್ರಮ, ಏ.12 ರಂದು ಬೆಳಗ್ಗೆ 9 ಗಂಟೆಗೆ ಭೀಮನಗರದ ವೈದ್ಯರ ಬಳಗದಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಅಯೋಜಿಸಲಾಗಿದೆ ಎಂದರು. ಅಲ್ಲದೆ ಬೆಂಗಳೂರು ಮುಖ್ಯ ರಸ್ತೆಯಲ್ಲಿರುವ ಭೀಮನಗರದ ಆದಿ ಕರ್ನಾಟಕ ಜನಾಂಗದ ನಿವೇಶನದಲ್ಲಿ ಏ.13 ರಂದು ಸಂಜೆ 4 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ರಂಗಕರ್ಮಿ ಗಿರೀಶ್ ಮಾಚಳ್ಳಿ ಅವರ ತಂಡದಿಂದ ಮನಸ್ಮೃತಿ ವಿರುದ್ಧ ಸಂವಿಧಾನ ಎಂಬ ನಾಟಕ, ಏ.14 ರಂದು ಬೆಳಗ್ಗೆ ರಂಗೋಲಿ ಸ್ಪರ್ಧೆ, ಸಂಜೆ 5 ಗಂಟೆಗೆ ಭೀಮ ಗೀತಾ ಗಾಯನ, ಪ್ರತಿಭಾ ಪುರಸ್ಕಾರ, ಭೀಮನಗರದ ಜಾನಪದ ಕಲಾವಿದರಿಗೆ, ಅತಿಥಿ ಗಣ್ಯರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಸೇರಿದಂತೆ ಅನೇಕ ಕಾರ್ಯಕ್ರಮಗಳು ಸಾಂಘವಾಗಿ ಜರುಗಲಿದೆ ಎಂದರು.ತಾಲೂಕಿನ ಎಲ್ಲಾ ಗ್ರಾಮದ ದಲಿತ ಮುಖಂಡರು ತಪ್ಪದೇ ಈ ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ದೊಡ್ಡ ಯಜಮಾನ ಚಿಕ್ಕಮಾಳಿಗೆ ಮನವಿ ಮಾಡಿದರು.
ಸಭೆಯಲ್ಲಿ ಅಂಬೇಡ್ಕರ್ ಜಯಂತಿ ಸಮಿತಿಯ ಆಚರಣಾ ಸಂಚಾಲಕ ಎಲ್.ಲಿಂಗರಾಜು, ವರದರಾಜು, ಸನತ್‌ಕುಮಾರ್, ಸಿದ್ಧಾರ್ಥ, ನಟರಾಜ್ ಮಾಳಿಗೆ, ಎಂ.ನಟರಾಜು, ಪುಟ್ಟಬುದ್ಧಿ, ಸಿ.ನಾಗರಾಜು, ನಿಂಪು ರಾಜೇಶ್, ಶಿವರಾಳ, ಎಸ್.ಆನಂದಮೂರ್ತಿ, ಎಸ್.ದಿಲಿಪ್, ಎಸ್.ಸಿದ್ದಪ್ಪಾಜಿ, ಶಂಕರ್, ಕಿರಣ್, ದೇವಾನಂದ್, ದಲಿತ ಮುಖಂಡರಾದ ಬಸ್ತಿಪುರ ಪ್ರಕಾಶ್, ಎಂ.ಪ್ರಸನ್ನ, ರವಿ, ಕುಣಗಳ್ಳಿ ಶ್ರೀನಿವಾಸಮೂರ್ತಿ, ಹೊಂಡರಬಾಳು ಚನ್ನರಾಜು, ಸಿದ್ದಯ್ಯನಪುರದ ಲಕ್ಷ್ಮಣಮೂರ್ತಿ, ಮುರಳಿ, ಸತ್ತೇಗಾಲದ ಅವಿನಾಶ್, ಸರಗೂರು ಶಿವಶಂಕರ್, ಧನಗೆರೆ ಮಹದೇವ, ಹರಳೆ ಮಹದೇವ, ಮುಳ್ಳೂರು ಪ್ರಭು, ಗುಂಡೇಗಾಲದ ಪುಟ್ಟಸ್ವಾಮಿ, ಹಳೇ ಹಂಪಾಪುರದ ನಿಂಗರಾಜು, ಹೊಸ ಅಣಗಳ್ಳಿ ಬಸವರಾಜು, ಜಗದೀಶ ಇನ್ನಿತರರಿದ್ದರು.