ತಮ್ಮ 47ನೇ ಜನ್ಮದಿನದ ಅಂಗವಾಗಿ ಸದ್ಗುರು ಮಧುಸೂದನ ಸಾಯಿಯವರು ಭಾನುವಾರ ''ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ (ಎಸ್‌ಎಂಎಸ್‌ಐಎಂಎಸ್‌ಆರ್)’ದಲ್ಲಿ ನಾಲ್ಕು ನೂತನ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ವಿಭಾಗಗಳನ್ನು ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಮುದ್ದೇನಹಳ್ಳಿ (ಚಿಕ್ಕಬಳ್ಳಾಪುರ):
ತಮ್ಮ 47ನೇ ಜನ್ಮದಿನದ ಅಂಗವಾಗಿ ಸದ್ಗುರು ಮಧುಸೂದನ ಸಾಯಿಯವರು ಭಾನುವಾರ ''''ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ (ಎಸ್‌ಎಂಎಸ್‌ಐಎಂಎಸ್‌ಆರ್)’ದಲ್ಲಿ ನಾಲ್ಕು ನೂತನ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ವಿಭಾಗಗಳನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ‘ಮೈ ಹ್ಯಾಪಿ ಹೆಲ್ತ್ ಮೊಬೈಲ್ ಆ್ಯಪ್’ ಅನ್ನು ಕೂಡ ಲೋಕಾರ್ಪಣೆ ಮಾಡಲಾಯಿತು. ಜೊತೆಗೆ, ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ’ ಮಿಷನ್‌ನ ನೂತನ ವೆಬ್‌ಸೈಟ್, ಲೋಗೋ ಹಾಗೂ ಸುವರ್ಣ ಮಹೋತ್ಸವದ ಸ್ಮಾರಕ ನಾಣ್ಯವನ್ನು ಅನಾವರಣಗೊಳಿಸಲಾಯಿತು.ನಿಸ್ವಾರ್ಥದಿಂದ ದೈವತ್ವ ಅನಾವರಣ:
ಸಮಾರಂಭದಲ್ಲಿ ಆಶೀರ್ವಚನ ನೀಡಿದ ಸಾಯಿಯವರು, ಪ್ರೇಮಿಸುವುದು ಹಾಗೂ ಪ್ರೇಮಿಸಲ್ಪಡುವುದೇ ಬದುಕಿನ ಉದ್ದೇಶ. ದೈವಪ್ರೇಮ ಅಪರಿಮಿತವಾದದ್ದು. ಅದು ಎಲ್ಲರ ಬದುಕನ್ನೂ ಪ್ರಕಾಶಮಾನಗೊಳಿಸುತ್ತದೆ. ಸ್ವಾರ್ಥವು ಕ್ಯಾನ್ಸರ್‌ನಂತೆ ಮನುಷ್ಯನನ್ನು ಒಳಗಿನಿಂದಲೇ ನಾಶಗೊಳಿಸುತ್ತದೆ. ಮನುಷ್ಯ ನಿಸ್ವಾರ್ಥಿಯಾದಾಗಲೇ ಅವನೊಳಗಿನ ದೈವತ್ವ ಅನಾವರಣಗೊಳ್ಳುತ್ತದೆ. ತನ್ನನ್ನು ತಾನು ಗೆದ್ದವನು ಇಡೀ ಜಗತ್ತನ್ನೇ ಗೆಲ್ಲಬಲ್ಲ ಎಂದು ಹೇಳಿದರು.
ಪ್ರಶಾಂತಿ ಬಾಲಮಂದಿರ ಟ್ರಸ್ಟ್‌ನ ಅಧ್ಯಕ್ಷ ಬಿ.ಎನ್.ನರಸಿಂಹಮೂರ್ತಿ ಮಾತನಾಡಿ, ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಸಂಕಲ್ಪದಿಂದ ವಿಶ್ವದಾದ್ಯಂತ ಗುರುತಿಸಿಕೊಂಡ ಸಿದ್ಧಭೂಮಿಯೇ ಸತ್ಯಸಾಯಿ ಗ್ರಾಮ. ಅವರು ಇಲ್ಲಿ ನೆಲೆಸಿದ ಬಳಿಕ ಕೇವಲ ಮುದ್ದೇನಹಳ್ಳಿಯಲ್ಲಿ ಮಾತ್ರವೇ ಅಲ್ಲ, ವಿಶ್ವದಾದ್ಯಂತ ಶಿಕ್ಷಣ, ಆರೋಗ್ಯ ಹಾಗೂ ಅನ್ನಸೇವೆಯ ಮೂಲಕ ಪರಿವರ್ತನೆಯ ಹೊಸ ಅಧ್ಯಾಯವೇ ಆರಂಭವಾಗಿದೆ ಎಂದರು.4 ಹೊಸ ಸೂಪರ್ ಸ್ಪೆಷಾಲಿಟಿ ವಿಭಾಗಗಳು:
* ಜೀನೋಮಿಕ್ಸ್ ಮತ್ತು ಇಮ್ಯುನೊಥೆರಪಿ
* ಹೃದಯ ಮತ್ತು ರಕ್ತನಾಳ ವಿಜ್ಞಾನ
* ರೊಬೊಟಿಕ್ ಮೂಳೆ ಮತ್ತು ಕೀಲು ಚಿಕಿತ್ಸೆ
* ವೆಲ್‌ನೆಸ್ ಮತ್ತು ಲಾಂಜಿಟಿವಿಟಿ
''''ಮೈ ಹ್ಯಾಪಿ ಹೆಲ್ತ್'''' ಎಐ ಆ್ಯಪ್ ಲೋಕಾರ್ಪಣೆ:ಮಧುಸೂದನ ಸಾಯಿ ಅವರು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ''''ಮೈ ಹ್ಯಾಪಿ ಹೆಲ್ತ್'''' ಮೊಬೈಲ್ ಆ್ಯಪ್ ಅನ್ನು ಲೋಕಾರ್ಪಣೆ ಮಾಡಿದರು. ಶಾ ಹ್ಯಾಪಿನೆಸ್ ಫೌಂಡೇಶನ್ ಅಭಿವೃದ್ಧಿಪಡಿಸಿರುವ ಈ ಆ್ಯಪ್ 26 ಭಾಷೆಗಳಲ್ಲಿ ಲಭ್ಯವಿದೆ. ವೈಯಕ್ತಿಕ ಆರೋಗ್ಯ ಮಾಹಿತಿಯ ಆಧಾರದ ಮೇಲೆ ಚಿಕಿತ್ಸಾ ಮಾರ್ಗದರ್ಶನ ನೀಡುವ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಲಾಗಿದೆ.ವೆಬ್‌ಸೈಟ್, ಲಾಂಛನ, ಸ್ಮಾರಕ ನಾಣ್ಯ ಅನಾವರಣ:
‘ಒನ್ ವರ್ಲ್ಡ್ ಒನ್ ಫ್ಯಾಮಿಲಿ’ ಮಿಷನ್‌ನ ನೂತನ ಲಾಂಛನ ಹಾಗೂ ವೆಬ್‌ಸೈಟ್ ನ್ನು ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು. ಸತ್ಯಸಾಯಿ ಗ್ರಾಮವು 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವದ ಸ್ಮರಣಾರ್ಥ ವಿಶೇಷ ಸ್ಮಾರಕ ನಾಣ್ಯವನ್ನು ಬಿಡುಗಡೆ ಮಾಡಲಾಯಿತು.ಜೊತೆಗೆ, ಮಧುಸೂದನ ಸಾಯಿ ಅವರ ಕುರಿತು 26 ಮಂದಿ ಬರೆದ ಅನುಭವ ಲೇಖನಗಳ ಸಂಕಲನವಾದ ‘ಶ್ರೀ ಮಧುಸೂದನ ಸಾಯಿ ಆ್ಯಸ್ ಐ ನೋ ಹಿಮ್’ (ನಾನು ಕಂಡಂತೆ ಶ್ರೀ ಮಧುಸೂದನ ಸಾಯಿ) ಇಂಗ್ಲಿಷ್ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಇಂಗ್ಲೀಷ್ ಸೇರಿ 26 ಭಾಷೆಗಳಲ್ಲಿ ಪ್ರಕಟವಾಗಿರುವ ಈ ಕೃತಿಯಲ್ಲಿ ವಿವಿಧ ದೇಶಗಳ ಭಕ್ತರು ಹಾಗೂ ಸೇವಕರ ಅನುಭವಗಳನ್ನು ದಾಖಲಿಸಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.