ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯ 2023ರ ಏಪ್ರಿಲ್‌ನಿಂದ 2024ರ ಜನವರಿ ವರೆಗೆ 40.96 ಮಿಲಿಯನ್ ಟನ್ ಸರಕು ಸಾಗಣಿ ಮಾಡಿದೆ. ಇದು ಹಿಂದಿನ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ.8.76ರಷ್ಟು ಹೆಚ್ಚಾಗಿದೆ. ಇದರಿಂದಾಗಿ ₹4055.32 ಕೋಟಿ ಸರಕು ಆದಾಯಗಳಿಸಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಗಳಿಸಿದ ಆದಾಯಕ್ಕೆ ಹೋಲಿಸಿದರೆ ಶೇ.10.36ರಷ್ಟು ಹೆಚ್ಚಳವಾಗಿದೆ.
ಜನವರಿ 31ರಂದು 3431 ವ್ಯಾಗನ್‌ಗಳನ್ನು ಲೋಡ್ ಮಾಡುವ ಮೂಲಕ ಹಿಂದಿನ ಅತ್ಯುತ್ತಮ ದಾಖಲೆಯನ್ನು ಮೀರಿ ಎರಡನೇ ಅತಿ ಹೆಚ್ಚು ಏಕದಿನದ ಲೋಡಿಂಗ್ ಅನ್ನು ಸಾಧಿಸಿದೆ.
ಸರಕು ಸಾಗಣೆ ಘಟಕ ಅಂದರೆ ಏನ್.ಟಿ.ಕೆ.ಎಂ (ನೆಟ್ ಟನ್ ಕಿಲೋಮೀಟರ್) ಸಹ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.4.4% ರಷ್ಟು ಹೆಚ್ಚಳವಾಗಿದೆ.ನೈರುತ್ಯ ರೈಲ್ವೆಯು ಆಟೋಮೊಬೈಲ್ ವಲಯದಲ್ಲಿ ಗಮನಾರ್ಹ ತಯಾರಕರಾದ ಟಿವಿಎಸ್, ಕೆಐಎ, ಮಾರುತಿ ಸುಜುಕಿ, ಟಾಟಾ, ಟೊಯೊಟಾ ಕಂಪನಿಗಳಿಗೆ ಆದ್ಯತೆಯ ಸಾರಿಗೆ ಆಯ್ಕೆಯಾಗಿ ಹೊರಹೊಮ್ಮಿದೆ.
ಇದಲ್ಲದೆ ಕಬ್ಬಿಣದ ಅದಿರು, ಸಿಮೆಂಟ್, ಉಕ್ಕು, ಖನಿಜ ತೈಲ, ರಸಗೊಬ್ಬರ, ಆರ್‌ಎಂಎಸ್‌ಪಿ, ಕಲ್ಲಿದ್ದಲು, ಆಹಾರ ಧಾನ್ಯಗಳು, ಕಂಟೇನರ್ ಮತ್ತು ಇತರ ಸರಕುಗಳ ಗಣನೀಯ ಸಾಗಣೆಯನ್ನು ಸಾಧಿಸಿದೆ. ಇದರಿಂದಾಗಿ ವಲಯ 2024ರ ಜನವರಿ ವರೆಗೆ ₹4055.32 ಕೋಟಿ ಸರಕು ಆದಾಯ ಗಳಿಸಿದೆ, ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಗಳಿಸಿದ ಆದಾಯಕ್ಕೆ ಹೋಲಿಸಿದರೆ ಶೇ. 10.36ರಷ್ಟು ಹೆಚ್ಚಳವಾಗಿದೆ.
ಮಹಾಪ್ರಬಂಧಕ ಸಂಜೀವ್ ಕಿಶೋರ್, ಅಧಿಕಾರಿಗಳ ಮತ್ತು ಸಿಬ್ಬಂದಿಯ ಪ್ರಯತ್ನಗಳನ್ನು ಅಭಿನಂದಿಸಿದ್ದಾರೆ.