ಚಿಕ್ಕ ಮಕ್ಕಳಿಗೆ ಸಕ್ಕರೆ ಅಂಶವುಳ್ಳ ಸಿಹಿ ಪದಾರ್ಥಗಳು, ಬೇಕರಿ ಫುಡ್, ಫಾಸ್ಟ್‌ಫೂಡ್, ಜಂಕ್‌ಫುಡ್ ನೀಡುವುದರಿಂದಲೂ ಕೂಡ ಮಧುಮೇಹ ಹೆಚ್ಚಾಗುತ್ತಿದೆ ವ್ಯಾಯಾಮ ಇಲ್ಲದ ಜೀವನ ಶೈಲಿಯಿಂದ ಸಕ್ಕರೆ ಕಾಯಿಲೆ ಮತ್ತು ಬೊಜ್ಜಿನ ಪ್ರಮಾಣ ಉಲ್ ಬಣ್ಣಗೊಳ್ಳಲು ಸಾಧ್ಯವಾಗುತ್ತಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿನ ವರದಿ ಪ್ರಕಾರ ೨೦೩೫ ಕ್ಕೆ ೪೦೦ ಕೋಟಿ ಜನರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಾರೆ. ನೂರು ಕೋಟಿ ಮಂದಿ ಮಧುಮೇಹಿಗಳ ಸಂಖ್ಯೆ ದ್ವಿಗುಣಗೊಳ್ಳಲಿದೆ. ಬಹಳ ವೇಗವಾಗಿ ಮಧುಮೇಹ ಮತ್ತು ಬೊಜ್ಜು, ಏರಿಕೆಯಾಗುತ್ತಿದೆ ಎಂದು ಮಾಹಿತಿ ಅಂತಾರಾಷ್ಟ್ರೀಯ ಅಲೆಯನ್ಸ್ ಸಂಸ್ಥೆ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ನೀಡಿದರು.
ನಗರದ ಆಕೃತಿ ಆಸ್ಪತ್ರೆ ಆವರಣದಲ್ಲಿ ಸ್ನೇಹ ಬಳಗ ಸಂಸ್ಥೆ, ಅಲೆಪ್ಪಿ ಅಲಯನ್ ಸಂಸ್ಥೆ, ಸಕ್ಕರೆ ನಾಡು ಅಲಯನ್ಸ್ ಸಂಸ್ಥೆ ಆಯೋಜಿಸಿದ್ದ ಮಧುಮೇಹ ಹಾಗೂ ಬೊಜ್ಜು ತಪಾಸಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಬದಲಾಗುತ್ತಿರುವ ಜೀವನ ಶೈಲಿಯಿಂದ ಜಾಗತಿಕವಾಗಿ ಮಧುಮೇಹ ಮತ್ತು ಸ್ಥೂಲಕಾಯ ದೇಹದಿಂದ ಸಾಕಷ್ಟು ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಸ್ತುತ ಪ್ರಪಂಚದಲ್ಲಿ ೭೩ ಕೋಟಿ ಮಂದಿ ಮಧುಮೇಹಿಗಳಿದ್ದು ೧೩೬ ಕೋಟಿ ಜನ ಸ್ತೂಲಕಾಯ ದೇಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ, ಅನಾರೋಗ್ಯವಂತ ಸಮಾಜ ನಿರ್ಮಾಣವಾಗಲು ಮನುಷ್ಯನೇ ಕಾರಣವಾಗುತ್ತಿದ್ದಾನೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಕ್ಕರೆ ಕಾಯಿಲೆ ತಜ್ಞೆ ಡಾ.ಬಿ.ಶೃತಿ ಮಾತನಾಡಿ, ಪೂರ್ವಿಕರ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳದ ನಾಗರೀಕರಿಗೆ ಸಾಕಷ್ಟು ಕಾಯಿಲೆಗಳು ಹೆಚ್ಚಾಗುತ್ತಿವೆ ಮಾನಸಿಕ ಒತ್ತಡದಿಂದ ಅನಾರೋಗ್ಯ ಸಮಸ್ಯೆಗಳು ಉಲ್ಬಣ ಕೊಳ್ಳುತ್ತಿವೆ ಎಂದು ಸಲಹೆ ನೀಡಿದರು.
ಚಿಕ್ಕ ಮಕ್ಕಳಿಗೆ ಸಕ್ಕರೆ ಅಂಶವುಳ್ಳ ಸಿಹಿ ಪದಾರ್ಥಗಳು, ಬೇಕರಿ ಫುಡ್, ಫಾಸ್ಟ್‌ಫೂಡ್, ಜಂಕ್‌ಫುಡ್ ನೀಡುವುದರಿಂದಲೂ ಕೂಡ ಮಧುಮೇಹ ಹೆಚ್ಚಾಗುತ್ತಿದೆ ವ್ಯಾಯಾಮ ಇಲ್ಲದ ಜೀವನ ಶೈಲಿಯಿಂದ ಸಕ್ಕರೆ ಕಾಯಿಲೆ ಮತ್ತು ಬೊಜ್ಜಿನ ಪ್ರಮಾಣ ಉಲ್ ಬಣ್ಣಗೊಳ್ಳಲು ಸಾಧ್ಯವಾಗುತ್ತಿದೆ ಎಂದು ಎಚ್ಚರಿಸಿದರು.
ಥೈರಾಯಿಡ್ ಹಾಗೂ ಸಕ್ಕರೆ ಕಾಯಿಲೆ ತಜ್ಞ ವೈದ್ಯ ಡಾ.ಬಿ.ಶೃತಿ, ಪ್ಲಾಸ್ಟಿಕ್ ತಜ್ಞರಾದ ಡಾ.ಸೋನಾಲಿ ಉಚ್ಚಿಲ್, ಆಕೃತಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಕೆ.ಸಿ.ಸುಹಾಸ್ ಸೇರಿದಂತೆ ಹಲವರು ತಪಾಸಣೆ ನಡೆಸುವರು.
ಕಾರ್ಯಕ್ರಮದಲ್ಲಿ ಅಲಯನ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಕೆ.ಆರ್.ಶಶಿಧರ ಈಚಗೆರೆ, ಒಂದನೇ ಉಪ ರಾಜ್ಯಪಾಲ ಚಂದ್ರಶೇಖರ್, ಜಿಲ್ಲಾ ಸಂಪುಟ ಕಾರ್ಯದರ್ಶಿ ಧನಂಜಯ್ ಧರಸಗುಪ್ಪೆ, ಪದಾಧಿಕಾರಿಗಳಾದ ನಿತಿನ್, ರಾಮು, ಜೋಗಿಗೌಡ, ಪವಿತ್ರನಾಗರಾಜ್, ಉದಯಶಂಕರ್, ಲೋಕೇಶ್ ಇತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.