ಗಿರಿಯಾಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವದಲ್ಲಿ ಶಾಸಕ ಆನಂದ್
ಕಡೂರು ತಾಲೂಕಿನ 2ನೇ ಹಂತದ ಭದ್ರಾ ಉಪ ಕಣಿವೆ ಕುಡಿಯುವ ನೀರಿನ ಯೋಜನೆಗೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಒಮ್ಮೆಲೇ ₹400 ಕೋಟಿ ಬಿಡುಗಡೆ ಮಾಡಿದ್ದಾರೆಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.
ಕಡೂರು ತಾಲೂಕಿನ ಗಿರಿಯಾಪುರದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಗಿರಿಯಾಪುರದಲ್ಲಿ ಕಾರ್ಯಕ್ರಮವೆಂದರೆ ಮಾದರಿ ಕಾರ್ಯಕ್ರಮ ಎಂಬುದನ್ನು ಬಿಡಿಸಿ ಹೇಳ ಬೇಕಿಲ್ಲ. ಗ್ರಾಮದ ಸಹಕಾರ ಸಂಘ ಆರಂಭವಾಗಿ 104 ವರ್ಷ ಕಳೆದ ಹಿನ್ನಲೆಯಲ್ಲಿ ಹಬ್ಬದಂತೆ ಕಾರ್ಯಕ್ರಮ ಆಚರಿಸುತ್ತಿ ರುವುದು ಸಂತಸದ ಸಂಗತಿ ಎಂದರು.ಕೆಲವೆಡೆ ಸಹಕಾರಿ ಕ್ಷೇತ್ರದ ಸಂಘಗಳು ಮುಚ್ಚಿರುವುದನ್ನು ನೋಡಿದ್ದೇನೆ ಆದರೆ ಗಿರಿಯಾಪುರದಲ್ಲಿ ಕೇವಲ ₹75 ರಿಂದ ಆರಂಭವಾಗಿ ಕೋಟ್ಯಾಂತರ ರು. ವಹಿವಾಟು, ರೈತರ ಅಗತ್ಯ ವಸ್ತುಗಳನ್ನು ಮಾರಾಟ ಮಾಡಿ ಸಹಕಾರಿ ಕ್ಷೇತ್ರಕ್ಕೆ ಮಾದರಿ ಯಾಗಿದೆ ಎಂದರು.
ಸಂಘದ ಮಾಜಿ ನಿರ್ದೇಶಕರು ಹಾಗು ಹಿರಿಯರಿಗೆ ಸನ್ಮಾನಿಸಿದ ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಸ್ಥಳೀಯ ಶಾಸಕರು ಮತ್ತು ಮುಖಂಡರ ಸಲಹೆ ಸಹಕಾರದ ಜೊತೆ ಈ ಭಾಗದ ಸಮಸ್ಯೆಗಳಿಗೆ ಪರಿಹಾರ ನೀಡುವ ಕಾರ್ಯ ಮಾಡುತ್ತೇನೆ ಎಂದರು.
ಕೃಷಿ ಮತ್ತು ಅರಣ್ಯ ವಲಯ ಮಾಡುವ ಮೂಲಕ ಇ-ಸ್ವತ್ತಿಗೆ ಪರಿಹಾರ ಕಂಡುಹಿಡಿಯಬೇಕು.ಸಂಸದ ಶ್ರೇಯಸ್ ಪಟೇಲ್ ರವರು ಸಂಸತ್ತಿನಲ್ಲಿ ಸರಕಾರದ ಗಮನ ಸೆಳೆದು ಶಾಶ್ವತ ಪರಿಹಾರ ಕೊಡಿಸಬಹುದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರ ಸಂಘದ ಜಿ.ಎನ್.ಚನ್ನಮಲ್ಲಿಕಾರ್ಜುನ ವಹಿಸಿದ್ದರು. ಉಪಾಧ್ಯಕ್ಷ ಸಿ.ಇ,ಶೇಖರಪ್ಪ, ಕಾಶೀನಾಥ್, ನೀಲಲೋಚನಸ್ವಾಮಿ, ಪಿ.ಡಿ ಲೋಕನಾಥ್, ಗೌರಮ್ಮ, ಆರ್ ಶಿವಕುಮಾರ್, ಉಮಾಮಹೇಶ್ವರಪ್ಪ, ಏಕಾಂತಯ್ಯ, ಶ್ರೀಮತಿ ಸುಧಾ,ಮಹಾಬಲ,ಜಿ.ಪಿ ಪ್ರಭುಕುಮಾರ್, ಜಿ.ಎಸ್. ಸತೀಶ್, ,ಜಿ.ಹಾಲಪ್ಪ, ಮಮತಾ, ವಿಜಯ, ಓಂಕಾರಮ್ಮ, ಲೋಕೇಶಾಚಾರ್,ಸಿ.ಜಯಪ್ಪ,ಬಿ.ರಾಮಪ್ಪ, ಸಿ ತಿಮ್ಮೇಶ್, ಷಡಾಕ್ಷರಿ, ಗುರು ಶಾಂತಪ್ಪ ಮತ್ತಿತರರು ಇದ್ದರು.
ಕಡೂರಿನ ಗಿರಿಯಾಪುಪರದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭವನ್ನು ಶಾಸಕ ಕೆ.ಎಸ್. ಆನಂದ್ ಉದ್ಘಾಟಿಸಿದರು.
ಕಡೂರು ತಾಲೂಕು ಗಿರಿಯಾಪುರದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಮಾಜಿ ಶಾಸಕ ವೈ.ಎಸ್.ವಿ.ದತ್ತ ಶತಮಾನೋತ್ಸವ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.