ಕಡೂರು ಪಟ್ಟಣದ ಅಭಿವೃದ್ಧಿಗೆ ₹41 ಕೋಟಿ ಅನುದಾನ: ಶಾಸಕ ಕೆ.ಎಸ್.ಆನಂದ್

KannadaprabhaNewsNetwork |  
Published : Nov 14, 2026, 01:15 AM IST
 | Kannada Prabha

ಸಾರಾಂಶ

ಕಡೂರುಕ್ಷೇತ್ರದ ಅಭಿವೃದ್ಧಿಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಕಡೂರು ಪುರಸಭೆ ವ್ಯಾಪ್ತಿಯ ಅಭಿವೃದ್ಧಿಗೂ ನೀಡಿದ್ದು, ಪಟ್ಟಣದ ಸಮಗ್ರ ಅಭಿವೃದ್ಧಿಗೆ ವಿಶೇಷ ಗಮನ ಹರಿಸಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಕಡ್ಡಾಯವಾಗಿ ಚನ್ನಾಗಿ ಬಳಸಿ.....

ಅಮೃತ್ 2.0 ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮ ಗಾರಿ, ವೇದಾ ಪಾರ್ಕ್‌ನಲ್ಲಿ ₹50 ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ

ಕನ್ನಡಪ್ರಭ ವಾರ್ತೆ, ಕಡೂರುಕ್ಷೇತ್ರದ ಅಭಿವೃದ್ಧಿಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಕಡೂರು ಪುರಸಭೆ ವ್ಯಾಪ್ತಿಯ ಅಭಿವೃದ್ಧಿಗೂ ನೀಡಿದ್ದು, ಪಟ್ಟಣದ ಸಮಗ್ರ ಅಭಿವೃದ್ಧಿಗೆ ವಿಶೇಷ ಗಮನ ಹರಿಸಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಪಟ್ಟಣದ ಅಮೃತ್ 2.0 ಯೋಜನೆಯಡಿ 4ರಿಂದ 10ನೇ ವಾರ್ಡ್ ವ್ಯಾಪ್ತಿಯಲ್ಲಿ ₹97 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮ ಗಾರಿಗಳಿಗೆ ಹಾಗೂ ವೇದಾ ಪಾರ್ಕ್‌ನಲ್ಲಿ ₹50 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.ಸುಸಜ್ಜಿತ ಉದ್ಯಾನವನದ ಕೊರತೆ ಕಡೂರು ಪಟ್ಟಣದಲ್ಲಿತ್ತು. ವೇದಾ ಪಾರ್ಕ್ ನಿರ್ಮಾಣದಿಂದ ಈ ಕೊರತೆ ನೀಗಿ ದಂತಾಗಿದೆ. ಉದ್ಯಾನವನದಲ್ಲಿ ಈಜುಕೊಳ ನಿರ್ಮಿಸುವ ಪ್ರಯತ್ನವೂ ನಡೆಯುತ್ತಿದೆ. ಕಡೂರು ಪುರಸಭೆ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಹಾಗೂ ಶಾಸಕರ ಅನುದಾನ ಸೇರಿದಂತೆ ಒಟ್ಟು ₹41 ಕೋಟಿ ಅನುದಾನ ಒದಗಿಸಲಾಗಿದೆ. ಪಟ್ಟಣದ ಅಭಿವೃದ್ಧಿಗೆ ಪೂರಕವಾಗಿ ಹೊರವಲಯದಲ್ಲಿ ಗಾರ್ಮೆಂಟ್ಸ್ ಘಟಕ ಆರಂಭವಾಗಿದೆ. ಪಟ್ಟಣದ ಸಮಗ್ರ ಅಭಿವೃದ್ಧಿಗೆ ₹20 ಕೋಟಿ ಅನುದಾನ ತರಲು ಪ್ರಯತ್ನ ಆರಂಭಿಸಿದ್ದು, ಈ ಸಂಬಂಧ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಎಂದರು.ಅಗ್ನಿಶಾಮಕ ದಳದ ಠಾಣೆ ನಿರ್ಮಾಣಕ್ಕಾಗಿ ಈ ಹಿಂದೆ ನೀಡಲಾಗಿದ್ದ ಎರಡು ಜಾಗಗಳನ್ನು ಮತ್ತೆ ಪುರಸಭೆಗೆ ವಾಪಸ್ ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಈ ಜಾಗದಲ್ಲಿ ಸುಸಜ್ಜಿತ ಆಡಿಟೋರಿಯಂ ನಿರ್ಮಿಸುವ ಚಿಂತನೆ ಇದೆ ಎಂದು ತಿಳಿಸಿದರು.ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ ಕಡೂರು ಪಟ್ಟಣಕ್ಕೆ ನೀರು ಪೂರೈಸುವ ವೇದಾ ಪಂಪ್‌ಹೌಸ್ ಬಳಿ ಜಾಗದಲ್ಲಿ ಸುಸಜ್ಜಿತ ವೇದಾ ಪಾರ್ಕ್ ನಿರ್ಮಿಸುವುದು ನನ್ನ ಬಹುದಿನಗಳ ಕನಸಾಗಿತ್ತು. ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಎಲ್ಲ ಸದಸ್ಯರ ಸಹಕಾರ ಪಡೆದು, ಅಂದಿನ ಶಾಸಕ ಬೆಳ್ಳಿಪ್ರಕಾಶ್ ಅವರಿಂದ ಭೂಮಿಪೂಜೆ ನೆರವೇರಿಸಲಾಗಿತ್ತು. ಜಾಗ ದಲ್ಲಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿ ಪುರಸಭೆ ನಿಧಿಯಿಂದ ₹46 ಲಕ್ಷ ಮೀಸಲಿಟ್ಟು ಕಾಮಗಾರಿ ಆರಂಭಿಸಲಾಗಿತ್ತು. ವಾಕಿಂಗ್ ಪಾಥ್, ಚೈನ್‌ಲಿಂಕ್ ಮೆಶ್ ಹಾಗೂ ಶೌಚಾಲಯ ನಿರ್ಮಿಸಲಾಗಿತ್ತು. ನಂತರ 100 ಅಡಿ ಎತ್ತರದ ರಾಷ್ಟ್ರಧ್ವಜ ಸ್ತಂಭವನ್ನೂ ಸ್ಥಾಪಿಸಲಾಗಿದೆ ಎಂದರು.ಪ್ರಸ್ತುತ ₹50 ಲಕ್ಷ ವೆಚ್ಚದಲ್ಲಿ ಉದ್ಯಾನವನದ ಹಸಿರೀಕರಣ ಹಾಗೂ ಜಿಮ್ ಉಪಕರಣಗಳ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯಲಿವೆ. ಮುಂದಿನ ದಿನಗಳಲ್ಲಿ ಪಾರ್ಕ್‌ನ ಸಮಗ್ರ ಅಭಿವೃದ್ಧಿಗೆ ಶಾಸಕರು ಹೆಚ್ಚಿನ ಆದ್ಯತೆ ನೀಡ ಬೇಕು ಎಂದು ಮನವಿ ಮಾಡಿದರು.ಅಮೃತ್ 2.0 ಯೋಜನೆಯಡಿ ಕೋಟೆ ಕಲ್ಯಾಣಿ ಅಭಿವೃದ್ಧಿಗೆ ₹2.5 ಕೋಟಿ, ವೆಂಕಟೇಶ್ವರ ಪಾರ್ಕ್ ಅಭಿವೃದ್ಧಿಗೆ ₹10 ಲಕ್ಷ, ವಿವೇಕಾನಂದ ಬಡಾವಣೆ ಪಾರ್ಕ್ ಅಭಿವೃದ್ಧಿಗೆ ₹10 ಲಕ್ಷ ಹಾಗೂ ಹೊಸಹಳ್ಳಿ ಕಲ್ಯಾಣಿ ಅಭಿವೃದ್ಧಿಗೆ ₹70 ಲಕ್ಷ ಅನುದಾನ ಒದಗಿಸಿ ಕಾಮಗಾರಿ ಕೈಗೊಳ್ಳಲಾಗಿದೆ. ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿಯೂ ಅಗತ್ಯಕ್ಕೆ ಅನುಗುಣವಾಗಿ ಅಭಿವೃದ್ಧಿ ಕಾಮ ಗಾರಿ ಗಳನ್ನು ಕೈಗೊಳ್ಳಲಾಗುತ್ತಿದೆ. ಕಡೂರು ಮತ್ತು ಬೀರೂರು ಪಟ್ಟಣಗಳ ಅಭಿವೃದ್ಧಿಗೆ ತಲಾ ₹10 ಕೋಟಿ ವಿಶೇಷ ಅನುದಾನ ಒದಗಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.ಪುರಸಭೆ ಮಾಜಿ ಸದಸ್ಯರಾದ ಈರಳ್ಳಿ ರಮೇಶ್, ಕೆ.ಎಂ.ಮೋಹನ್ ಕುಮಾರ್, ಮರುಗುದ್ದಿ ಮನು, ಸಯ್ಯದ್ ಯಾಸೀನ್, ಕಾಂತರಾಜು, ತಿಪ್ಪೇಶ್, ದೇವೇಂದ್ರ, ಕೃಷ್ಣಪ್ಪ, ವಿನಯ್ ದಂಡಾವತೆ ಹಾಗೂ ಪುರಸಭೆ ಮುಖ್ಯಾಧಿಕಾರಿ ಶ್ರೇಯಸ್ ಇದ್ದರು.....ಕೋಟ್....ಚುನಾವಣೆ ಸಮಯದಲ್ಲಿ ಮಾತ್ರ ರಾಜಕಾರಣ; ನಂತರ ಎಲ್ಲ ಸದಸ್ಯರೂ ಒಗ್ಗಟ್ಟಿನಿಂದ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ತೃಪ್ತಿ ತಂದಿದೆ.– ಭಂಡಾರಿ ಶ್ರೀನಿವಾಸ್, ಪುರಸಭೆ ಮಾಜಿ ಅಧ್ಯಕ್ಷ

....ಬಾಕ್ಸ್.....ವೇದಾ ಪಾರ್ಕ್‌ನಲ್ಲಿ ನಡೆಯಲಿರುವ ಕಾಮಗಾರಿಗಳು* ಕೂರುವ ಮಂಟಪ – ₹5 ಲಕ್ಷ* ಮಣ್ಣಿನ ಪಾಥ್‌ವೇ – ₹23 ಸಾವಿರ* ಇಂಟರ್‌ಲಾಕ್ ಪಾಥ್‌ವೇ – ₹16.20 ಲಕ್ಷ* ಮಕ್ಕಳ ಆಟದ ಉಪಕರಣಗಳು – ₹11.94 ಲಕ್ಷ* ಜಿಮ್ ಯಂತ್ರೋಪಕರಣಗಳು – ₹13.49 ಲಕ್ಷ* ಮರಗಳ ನೆಡುವಿಕೆ – ₹4.34 ಲಕ್ಷ* ಗಿಡಗಳ ನೆಡುವಿಕೆ – ₹2.88 ಲಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ