ಜಿಬಿಎ ಬಜೆಟ್‌ಗೆ ರಾಜ್ಯ, ಕೇಂದ್ರ ಸರ್ಕಾರದಿಂದ ₹4196 ಕೋಟಿ ನೀರಿಕ್ಷೆ

KannadaprabhaNewsNetwork |  
Published : Mar 30, 2026, 04:00 AM ISTUpdated : Mar 30, 2026, 05:28 AM IST
 Greater Bengaluru Authority

ಸಾರಾಂಶ

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯಾದ ಬಳಿಕ ಐದು ಪಾಲಿಕೆಗಳ ಬಹುನಿರೀಕ್ಷೆಯ ಆದಾಯ ಮತ್ತು ವೆಚ್ಚಗಳ ಅಂದಾಜು ಬಜೆಟ್‌ನಲ್ಲಿ ಶೇ.21ರಷ್ಟು ಹಣ ಅಂದರೆ ₹4,196 ಕೋಟಿಯನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ನಿರೀಕ್ಷಿಸಲಾಗಿದೆ.

 ಬೆಂಗಳೂರು :  ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯಾದ ಬಳಿಕ ಐದು ಪಾಲಿಕೆಗಳ ಬಹುನಿರೀಕ್ಷೆಯ ಆದಾಯ ಮತ್ತು ವೆಚ್ಚಗಳ ಅಂದಾಜು ಬಜೆಟ್‌ನಲ್ಲಿ ಶೇ.21ರಷ್ಟು ಹಣ ಅಂದರೆ ₹4,196 ಕೋಟಿಯನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ನಿರೀಕ್ಷಿಸಲಾಗಿದೆ.

ನಗರದ ರಸ್ತೆ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳ ನಿರ್ಮಾಣ, ಅಭಿವೃದ್ಧಿ ಮತ್ತು ಮೇಲ್ದರ್ಜೆಗೆ ಏರಿಸಲು ಸರ್ಕಾರಗಳೇ ದೊಡ್ಡ ಮೊತ್ತದ ಅನುದಾನವನ್ನು ಒದಗಿಸಬೇಕಿದೆ. ಅದರಲ್ಲಿ ಸಿಂಹಪಾಲು ಅನುದಾನವನ್ನು ರಾಜ್ಯ ಸರ್ಕಾರವೇ ಒದಗಿಸಬೇಕಿದೆ. ರಾಜ್ಯ ಸರ್ಕಾರ ₹3,922.81 ಕೋಟಿ ಒದಗಿಸಬೇಕಿದ್ದು, ಕೇಂದ್ರ ಸರ್ಕಾರ ₹794.15 ಬಿಡುಗಡೆ ಮಾಡಬೇಕಾಗಿದೆ.

ಐದು ಪಾಲಿಕೆಗಳ ಪೈಕಿ ಪಶ್ಚಿಮ ನಗರ ಪಾಲಿಕೆಯು ಸರ್ಕಾರಗಳ ಅನುದಾನವನ್ನು ಗರಿಷ್ಠ ಪ್ರಮಾಣದಲ್ಲಿ ನೆಚ್ಚಿಕೊಂಡಿದೆ. ಒಟ್ಟಾರೆ ಆದಾಯದಲ್ಲಿ ₹1,196.72 ಕೋಟಿಯನ್ನು (ಶೇ.30) ಸರ್ಕಾರಗಳು ಒದಗಿಸಬೇಕಿದೆ. ನಂತರದಲ್ಲಿ ಉತ್ತರ ನಗರ ಪಾಲಿಕೆಯಿದ್ದು, ತನ್ನ ಒಟ್ಟು ಅಂದಾಜು ಆದಾಯದಲ್ಲಿ ₹886.24 ಕೋಟಿಯನ್ನು (ಶೇ.23.93) ಸರ್ಕಾರಗಳಿಂದ ನಿರೀಕ್ಷಿಸಿದೆ.

ದಕ್ಷಿಣ ನಗರ ಪಾಲಿಕೆಗೆ ₹837.28 ಕೋಟಿ (ಶೇ.21.73), ಕೇಂದ್ರ ನಗರ ಪಾಲಿಕೆಗೆ ₹741.58 ಕೋಟಿ (ಶೇ.26) ಹಾಗೂ ಪೂರ್ವ ಪಾಲಿಕೆಯು ಸರ್ಕಾರಗಳಿಂದ ₹534.37 ಕೋಟಿ (ಶೇ.14) ಅನುದಾನವನ್ನು ಬಯಸಿದೆ.

 ದಕ್ಷಿಣ ನಗರ ಪಾಲಿಕೆಒಟ್ಟು ನಿರೀಕ್ಷಿತ ಆದಾಯ: 3,826 ಕೋಟಿ ರು.

ಕೇಂದ್ರ ಸರ್ಕಾರ: 159.29 ಕೋಟಿ ರು. (ಶೇ.4.01)

ರಾಜ್ಯ ಸರ್ಕಾರ: 677.99 ಕೋಟಿ ರು. (ಶೇ.17.72)

ಕೇಂದ್ರ ಮತ್ತು ರಾಜ್ಯದ ಒಟ್ಟು ಅನುದಾನ: 837.28 ಕೋಟಿ ರು. (ಶೇ.21.73)

ಪೂರ್ವ ನಗರ ಪಾಲಿಕೆಒಟ್ಟು ನಿರೀಕ್ಷಿತ ಆದಾಯ: 3,888 ಕೋಟಿ ರು. 

ಕೇಂದ್ರ ಸರ್ಕಾರ: 114.09 ಕೋಟಿ ರು. (ಶೇ. 3)​ರಾಜ್ಯ ಸರ್ಕಾರ: 420.28 ಕೋಟಿ ರು. (ಶೇ. 11)​ 

ಕೇಂದ್ರ ಮತ್ತು ರಾಜ್ಯದ ಒಟ್ಟು ಅನುದಾನ: 534.37 ಕೋಟಿ ರು. (ಶೇ. 14)

ಪಶ್ಚಿಮ ನಗರ ಪಾಲಿಕೆಒಟ್ಟು ನಿರೀಕ್ಷಿತ ಆದಾಯ: 4,732.81 ಕೋಟಿ ರು.

ಕೇಂದ್ರ ಸರ್ಕಾರದ ಅನುದಾನ: 224.56 ಕೋಟಿ ರು. (ಶೇ. 5) 

​ರಾಜ್ಯ ಸರ್ಕಾರದ ಒಟ್ಟು ಅನುದಾನ: 1,196.72 ಕೋಟಿ ರು. (ಶೇ. 25)

ಕೇಂದ್ರ ಮತ್ತು ರಾಜ್ಯದ ಒಟ್ಟು ಅನುದಾನ: 1,196.72 (ಶೇ.30)

ಉತ್ತರ ನಗರ ಪಾಲಿಕೆ​ಒಟ್ಟು ನಿರೀಕ್ಷಿತ ಆದಾಯ: 4,344 ಕೋಟಿ ರೂ.

ಕೇಂದ್ರ ಸರ್ಕಾರದ ಅನುದಾನ: 153.29 ಕೋಟಿ ರು. (ಶೇ. 3.54)​ 

ರಾಜ್ಯ ಸರ್ಕಾರದ ಅನುದಾನ: 886.24 ಕೋಟಿ ರು. (ಶೇ. 20.39)

ಕೇಂದ್ರ ಮತ್ತು ರಾಜ್ಯದ ಒಟ್ಟು ಅನುದಾನ: 886.24 ಕೋಟಿ ರು. (ಶೇ.23.93)

ಕೇಂದ್ರ ನಗರ ಪಾಲಿಕೆ

ಒಟ್ಟು ನಿರೀಕ್ಷಿತ ಆದಾಯ: 3,427 ಕೋಟಿ ರು.

ಕೇಂದ್ರ ಸರ್ಕಾರದ ಅನುದಾನ: 142.92 ಕೋಟಿ ರು. (ಶೇ. 4)​ 

ರಾಜ್ಯ ಸರ್ಕಾರದ ಅನುದಾನ: 741.58 ಕೋಟಿ ರು. (ಶೇ. 22)

ಕೇಂದ್ರ ಮತ್ತು ರಾಜ್ಯದ ಒಟ್ಟು ಅನುದಾನ: 741.58 ಕೋಟಿ ರು. (ಶೇ.26)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕಾದಂಬರಿಗಳು ಕನ್ನಡ ಸಾಹಿತ್ಯ ಲೋಕದ ವಿಶೇಷ ಕೊಡುಗೆ
ಸದನದಲ್ಲಿ ಐಪಿಎಲ್‌ ಟಿಕೆಟ್‌ ಚರ್ಚೆ ಅನಗತ್ಯ