ಕನ್ನಡಪ್ರಭ ವಾರ್ತೆ ಅಥಣಿ ಸಮಾಜದಲ್ಲಿನ ಕೆಲವು ಸಮಸ್ಯೆಗಳನ್ನು ತೋರಿಸುವುದಲ್ಲದೆ ಸಾಮಾಜಿಕ ಬದಲಾವಣೆಯ ಆಲೋಚನೆಗಳನ್ನು ಓದುಗರಿಗೆ ಮನಮುಟ್ಟುವಂತೆ ರಚಿಸುವ ಕಥೆ ಮತ್ತು ಕಾದಂಬರಿಗಳು ಕನ್ನಡ ಸಾಹಿತ್ಯ ಲೋಕದ ವಿಶೇಷ ಕೊಡುಗೆಯಾಗಿದೆ. ನಾಡಿನ ಹಿರಿಯ ಸಾಹಿತಿ ಮತ್ತು ಕಾದಂಬರಿಕಾರ ಡಾ.ಬಾಳಾಸಾಹೇಬ ಲೋಕಪುರ ಅವರ ಕಾದಂಬರಿಗಳಲ್ಲಿ ಗ್ರಾಮೀಣ ಜನತೆಯ ಜ್ವಲಂತ ಸಮಸ್ಯೆಗಳನ್ನು ಮತ್ತು ಮೌಲ್ಯಗಳನ್ನು ಬಿಂಬಿಸುವ ಪಾತ್ರಗಳು ಓದುಗರ ಗಮನ ಸೆಳೆಯುತ್ತವೆ ಎಂದು ಸಂಸ್ಕೃತ ಚಿಂತಕ ಅರವಿಂದರಾವ್ ದೇಶಪಾಂಡೆ ಹೇಳಿದರು.
ಕನ್ನಡಪ್ರಭ ವಾರ್ತೆ ಅಥಣಿ
ಸಮಾಜದಲ್ಲಿನ ಕೆಲವು ಸಮಸ್ಯೆಗಳನ್ನು ತೋರಿಸುವುದಲ್ಲದೆ ಸಾಮಾಜಿಕ ಬದಲಾವಣೆಯ ಆಲೋಚನೆಗಳನ್ನು ಓದುಗರಿಗೆ ಮನಮುಟ್ಟುವಂತೆ ರಚಿಸುವ ಕಥೆ ಮತ್ತು ಕಾದಂಬರಿಗಳು ಕನ್ನಡ ಸಾಹಿತ್ಯ ಲೋಕದ ವಿಶೇಷ ಕೊಡುಗೆಯಾಗಿದೆ. ನಾಡಿನ ಹಿರಿಯ ಸಾಹಿತಿ ಮತ್ತು ಕಾದಂಬರಿಕಾರ ಡಾ.ಬಾಳಾಸಾಹೇಬ ಲೋಕಪುರ ಅವರ ಕಾದಂಬರಿಗಳಲ್ಲಿ ಗ್ರಾಮೀಣ ಜನತೆಯ ಜ್ವಲಂತ ಸಮಸ್ಯೆಗಳನ್ನು ಮತ್ತು ಮೌಲ್ಯಗಳನ್ನು ಬಿಂಬಿಸುವ ಪಾತ್ರಗಳು ಓದುಗರ ಗಮನ ಸೆಳೆಯುತ್ತವೆ ಎಂದು ಸಂಸ್ಕೃತ ಚಿಂತಕ ಅರವಿಂದರಾವ್ ದೇಶಪಾಂಡೆ ಹೇಳಿದರು.ಇಲ್ಲಿನ ಪ್ರಾರ್ಥನಾ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಸಾಹಿತ್ಯ ಸಾoಸ್ಕೃತಿಕ ಸಂಘ, ಕ್ರಿಯೇಟಿವ್ ಪುಸ್ತಕ ಮನೆ ಕಾರ್ಕಳ, ಹಾಗೂ ಪ್ರಾರ್ಥನಾ ವಿಜ್ಞಾನ ಕಾಲೇಜು ಅಥಣಿ ಇವರ ಸಂಯುಕ್ತ ಆಶ್ರಯದಲ್ಲಿ ಡಾ.ಬಾಳಾಸಾಹೇಬ ಲೋಕಾಪುರವರ ದೇಹಿ ಮತ್ತು ಕೃಷ್ಣ ಹರಿದಳು ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಬಾಳಾಸಾಹೇಬ ಲೋಕಾಪುರ ಅವರ ಸಾಹಿತ್ಯ ವಿಭಿನ್ನ ಶೈಲಿಯಿಂದ ಕೂಡಿದ್ದು. ಅಲ್ಲಿಯ ಹಳ್ಳಿಯ ಸೊಗಡು ಹಳ್ಳಿಯಲ್ಲಿ ಬರುವ ಅನೇಕ ಪಾತ್ರಗಳು ಓದುಗರ ಗಮನವನ್ನು ಸೆಳೆಯುವ ಆಸೆಯೊಂದಿಗೆ ಕಾದಂಬರಿಯ ಕೆಲವು ಪಾತ್ರದ ಅನುಭವಗಳನ್ನು ವಿವರಿಸಿದರು.ಹಂಪಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ವೆಂಕಟಗಿರಿ ದಳವಾಯಿ ಮಾತನಾಡಿ, ದೇಹಿ ಕಾದಂಬರಿಯಲ್ಲಿ ಕೆಲವು ಮೌಲ್ಯಗಳನ್ನು ತಿಳಿದುಕೊಳ್ಳಬಹುದು. ವಿಭಿನ್ನ ಪಾತ್ರ ವಿಭಿನ್ನ ವಿಚಾರಗಳು ಈ ಕಾದಂಬರಿಯಲ್ಲಿ ಮೂಡಿಬಂದಿವೆ. ಓದುಗರನ್ನು ಪ್ರಾದೇಶಿಕತೆಗೆ ಕೊಂಡೊಯ್ಯುವ ಗುಣ ಈ ಲೇಖಕರಲ್ಲಿದೆ ಎನ್ನುವುದನ್ನು ತಿಳಿಸಿದರು.
ಡಾ.ವೀರೇಶ್ ಬಡಿಗೇರ ಮಾತನಾಡಿ, ಶಿರಹಟ್ಟಿ ಗ್ರಾಮದಲ್ಲಿಯೇ ಗ್ರಾಮೀಣ ಪರಿಸರದ ಜೊತೆಗೆ ಕೃಷ್ಣೆಯ ಹರಿವನ್ನು ಜ್ಞಾನದ ಸಾಗರದ ರೀತಿಯಲ್ಲಿ ಈ ಕಾದಂಬರಿಯಲ್ಲಿ ವ್ಯಕ್ತಪಡಿಸು ವ್ಯಕ್ತಪಡಿಸಿದರು.ಲೇಖಕ ಡಾ.ಬಾಳಾಸಾಹೇಬ ಲೋಕಾಪುರ ಮಾತನಾಡಿ, ಎರಡು ಪುಸ್ತಕಗಳು ಲೋಕಾರ್ಪಣೆ ಗೊಳ್ಳುವುದು ನನಗೆ ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ವಿಶಿಷ್ಟವಾದ ಪ್ರತಿಯೊಂದಿಗೆ ನಿಮ್ಮ ಮುಂದೆ ಇಡಲಿದ್ದೇನೆ.ತಮ್ಮ ಸಹಾಯ ಸಹಕಾರ ನನ್ನೊಂದಿಗೆ ಇರುವುದರಿಂದ ಮತ್ತೆ ಬರೆಯಲು ನನಗೆ ಶಕ್ತಿಯನ್ನು ನೀಡಿದ್ದೀರಿ ಎಂದು ಸಹಕಾರ ಕೋರಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾರ್ಥನಾ ಕಾಲೇಜಿನ ಪ್ರಾಚಾರ್ಯ ಪುರುಷೋತ್ತಮ.ಬಿ.ಎನ್ ಮಾತನಾಡಿದರು. ಸಾಹಿತ್ಯ ಸಾoಸ್ಕೃತಿಕ ಸಂಘದ ಅಧ್ಯಕ್ಷ ಎನ್.ಬಿ.ಝರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಸಾಹಿತಿ ಡಾ.ಜೆ.ಪಿ.ದೊಡಮನಿ, ಬಾಳೇಶ ಬೊಮ್ಮನಾಳೆ, ಬಿ.ಪಿ.ಗುಂಡ, ಡಿ.ಡಿ ಮೇಕನಮರಡಿ, ಅಪ್ಪಾಸಾಹೇಬ ಅಲಿಬಾದಿ, ದೇವೇಂದ್ರ ಬಿಸ್ವಾಗರ, ಮಹಾವೀರ ಕಾಳೆ, ಜಿ.ಎಂ.ಕುಲಕರ್ಣಿ, ಕೆ.ಎಲ್.ಕುಂದರಗಿ, ಸದಾಶಿವ ಹರಪಾಳೆ. ಸೋಮಶೇಖರ ಝರೆ, ಪ್ರಕಾಶ್ ಬಿರಾದಾರ, ಸಿಕಂದರ್ ಮುಜಾವರ, ಮನೋಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪಿ ಎಲ್ ಪೂಜಾರಿ ನಿರೂಪಿಸಿದರು. ಆರ್ ಎ ಜೋಶಿ ಸ್ವಾಗತಿಸಿದರು. ಡಾ. ಆರ್ ಎ ಬಡಿಗೇರ ವಂದಿಸಿದರು.