ಕನ್ನಡಪ್ರಭ ವಾರ್ತೆ ಬೆಳಗಾವಿ ಭಗವಾನ ಮಹಾವೀರರು ಮಾನವ ಕಲ್ಯಾಣಕ್ಕಾಗಿ ಅನೇಕ‌ ತತ್ವಗಳನ್ನು ಬೋಧಿಸಿದ್ದಾರೆ. ಅವುಗಳಲ್ಲಿ ಸತ್ಯ, ಅಹಿಂಸೆ ಮತ್ತು ಅಪರಿಗ್ರಹ ಈ ಮೂರು ತತ್ವಗಳನ್ನು ನಾವೆಲ್ಲರೂ ಪಾಲಿಸಿದರೆ ವಿಶ್ವದೆಲ್ಲೆಡೆ ಶಾಂತಿ ನೆಲೆಸಲಿದೆ ಎಂದು ಪಂಜಾಬ್‌ ರಾಜ್ಯಪಾಲ ಗುಲಾಬಚಂದ ಕಟಾರಿಯಾ ಅವರು ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ ಭಗವಾನ ಮಹಾವೀರರು ಮಾನವ ಕಲ್ಯಾಣಕ್ಕಾಗಿ ಅನೇಕ‌ ತತ್ವಗಳನ್ನು ಬೋಧಿಸಿದ್ದಾರೆ. ಅವುಗಳಲ್ಲಿ ಸತ್ಯ, ಅಹಿಂಸೆ ಮತ್ತು ಅಪರಿಗ್ರಹ ಈ ಮೂರು ತತ್ವಗಳನ್ನು ನಾವೆಲ್ಲರೂ ಪಾಲಿಸಿದರೆ ವಿಶ್ವದೆಲ್ಲೆಡೆ ಶಾಂತಿ ನೆಲೆಸಲಿದೆ ಎಂದು ಪಂಜಾಬ್‌ ರಾಜ್ಯಪಾಲ ಗುಲಾಬಚಂದ ಕಟಾರಿಯಾ ಅವರು ಹೇಳಿದರು.ಬೆಳಗಾವಿಯಲ್ಲಿ ನಡೆದ ಭಗವಾನ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವದ ಅಂಗವಾಗಿ ಮಹಾವೀರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ‌ ಬಹುಮಾನ ವಿತರಣೆ ಸಮಾರಂಭ ಉದ್ಘಾಟಿಸಿ ಹಾಗೂ ಪದ್ಮಶ್ರೀ ಪ್ರಶಸ್ತಿ ವಿಜೇತ ಡಾ.ಪ್ರಭಾಕರ ಕೋರೆ ಅವರ ಸನ್ಮಾನ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ಇಂದು ವಿಶ್ವದ ಪ್ರಸ್ತುತ ಪರಿಸ್ಥಿತಿ ಅವಲೋಕಿಸಿದರೆ ಎಲ್ಲೆಡೆ ಅಶಾಂತಿಯ ವಾತಾವರಣ ಕಂಡು ಬರುತ್ತದೆ. ಇದಕ್ಕೆ ಕಾರಣ ಪ್ರಕೃತಿ ಅಲ್ಲ. ಮನುಷ್ಯನ ಆಸೆ. ಸುಮಾರು 2624 ವರ್ಷಗಳ ಹಿಂದೆ ಭಗವಾನ ಮಹಾವೀರರು ಮಾನವ ಕಲ್ಯಾಣಕ್ಕಾಗಿ ವಿಶ್ವ ಸಂದೇಶ ನೀಡಿದ್ದಾರೆ. ಈ ಸಂದೇಶ ಕೇವಲ ಜೈನ ಸಮಾಜಕ್ಕೆ ನೀಡಿಲ್ಲ. ಈ ಸಂದೇಶ ಸಂಪೂರ್ಣ ‌ಮಾನವರಿಗೆ ನೀಡಲಾಗಿದೆ. ಯಾರು ಮಹಾವೀರರ ತತ್ವ ಸಿದ್ದಾಂತ ಪಾಲಿಸುತ್ತಾರೋ ಅವರೆಲ್ಲರೂ ಜೈನರೇ ಆಗಿದ್ದಾರೆ ಎಂದು ತಿಳಿಸಿದರು. ‌

ಅಹಂಕಾರ, ಕ್ರೋಧ, ಮೋಹ, ಮಾಯೆ ಎಲ್ಲರಿಂದಲೂ ನಾವು ದೂರ ಇರಬೇಕು. ಸ್ವಯಂ ಅಹಂಕಾರ ಮನುಷ್ಯನನ್ನು ಅಂಧಕಾರಕ್ಕೆ ನೂಕುತ್ತದೆ. ನಾವೆಲ್ಲರೂ ನಮ್ಮ ಮನಸ್ಸಿನ ಮೇಲೆ ಹಿಡಿತ ಇಟ್ಟುಕೊಳ್ಳುಬೇಕು‌. ಆಗ ಮಾತ್ರ ನಾವೆಲ್ಲರೂ ಸಹ ಮಹಾವೀರರಂತೆ ಆಗಲು ಸಾಧ್ಯ. ಇಂದು ಭಾರತ ದೇಶ ಇಡೀ ವಿಶ್ವಕ್ಕೆ ಮಾನವತಾವಾದಿ ದಾರಿಯನ್ನು ತೋರಿಸುತ್ತಿದೆ. ಎಲ್ಲ ರಾಷ್ಟ್ರಗಳ ಜೊತೆ ಬಂಧುತ್ವದ ಭಾವನೆಗಳನ್ನು ಬೆಳೆಸುತ್ತಿದೆ. ಕೋರೋನಾ ಕಾಲದಲ್ಲಿ ಎರಡು ಲಸಿಕೆಗಳನ್ನು ‌ಕಂಡು ಹಿಡಿದು ಅವುಗಳನ್ನು ವಿಶ್ವಕ್ಕೆ ಉಚಿತವಾಗಿ ನೀಡಿ ಕೋಟ್ಯಾಂತರ ಜನರ ಜೀವನ ರಕ್ಷಣೆ ಮಾಡಿದೆ. ನಮ್ಮ ಭಾರತದ ವಿಜ್ಞಾನಿಗಳು ಅನೇಕ ಸಂಶೋಧನೆ ನಡೆಸಿದ್ದಾರೆ. ಈ ಸಂಶೋಧನೆಗಳು ಮಾನವ ಕಲ್ಯಾಣಕ್ಕಾಗಿ ಮೀಸಲಿಡಲಾಗಿದೆ ಎಂದರು.ಪದ್ಮಶ್ರೀ ಪ್ರಶಸ್ತಿ ವಿಜೇತ ಡಾ.‌ಪ್ರಭಾಕರ ಕೋರೆ ಸಾಧನೆ ಶ್ಲಾಘನೀಯವಾಗಿದೆ. ನಮ್ಮ ಭಾರತದ ವಿದ್ಯಾರ್ಥಿಗಳಲ್ಲಿ ಕೌಶಲಗಳ ಕೊರತೆ ಇಲ್ಲ. ಆದರೆ ಅವರ ಕೌಶಲ್ಯಕ್ಕೆ ಉತ್ತಮ ದಾರಿ ತೋರಬೇಕಾಗಿದೆ. ಈ ಕಾರ್ಯವನ್ನು ಡಾ.ಪ್ರಭಾಕರ ಕೋರೆ ಮಾಡುತ್ತಿರುವುದು ಸಂತಸದ ಸಂಗತಿ. ಜೈನ ಸಮಾಜದ ಅಭಿವೃದ್ಧಿಯಲ್ಲಿ ಜೊತೋ ಸಂಸ್ಥೆಯು ಸಹ ಉತ್ತಮ ಕಾರ್ಯ ಮಾಡುತ್ತಿದ್ದು, ನಿರೋ ಸಂಸ್ಥೆಯ ಕಾರ್ಯ ಪ್ರಶಂಸನೀಯವಾಗಿದೆ ಎಂದರು.ಸನ್ಮಾನ ಸ್ವೀಕರಿಸಿ ಮಾತನಾಡಿದ , ಎಂದರು.ವಕೀಲ ರವಿರಾಜ ಪಾಟೀಲ ಅತಿಥಿಗಳನ್ನು ಸ್ವಾಗತಿಸಿದರು. ಶಾಸಕ ಅಭಯ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ.‌ಪ್ರಭಾಕರ ಕೋರೆಯವರನ್ನು ಪರಿಚಯಿಸಿದರು. ರಾಜೇಂದ್ರ ಕಟಾರಿಯಾ ಜೈನ ಅವರು ರಾಜ್ಯಪಾಲ ಗುಲಾಬಚಂದ ಕಟಾರಿಯಾ ಅವರನ್ನು ಪರಿಚಯಿಸಿದರು. ‌ಈ ವೇಳೆ ರಾಜ್ಯಪಾಲರ ಪತ್ನಿ ಅನಿತಾ ಗುಲಾಬಚಂದ ಕಟಾರಿಯಾ ಅವರ ಜನ್ಮ ದಿನದ ಅಂಗವಾಗಿ ಅವರನ್ನು ಸನ್ಮಾನಿಸಲಾಯಿತು. ವೇದಿಕೆ ಮೇಲೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಸುನಿಲ ಹನಮಣ್ಣವರ, ಕಟಾರಿಯಾ ಫೌಂಡೇಶನ್ ರಾಷ್ಟ್ರೀಯ ಅಧ್ಯಕ್ಷ ಲಲಿತ ಸಂಘವಿ ಕಟಾರಿಯಾ, ಆದಾಯ ಇಲಾಖೆ ನಿವೃತ್ತ ಆಯುಕ್ತ ನರೇಂದ್ರ ಜೈನ, ಸಂತೋಷ ನರೇಂದ್ರ ಜೈನ, ಜಿತೋ ಕೆಕೆಜಿ ವಲಯ ಚೇರಮನ್‌ ಪ್ರವೀಣ ಭಾಫನಾ, ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ ಸೇರಿ ಮೊದಲಾದವರು ಉಪಸ್ಥಿತರಿದ್ದರು.ಮಾಜಿ ಶಾಸಕ ಸಂಜಯ ಪಾಟೀಲ ವಂದಿಸಿದರು. ಅಂಕಿತ ಖೋಡಾ ನಿರೂಪಿಸಿದರು.-------ಕೋಟ್‌ಭಗವಾನ ಮಹಾವೀರರು ತಮ್ಮ ಸಂಪೂರ್ಣ ಜೀವನವನ್ನು ಮನುಷ್ಯರ ಕಲ್ಯಾಣಕ್ಕಾಗಿ ಮೀಸಲಿಟ್ಟು, ವಿಶ್ವದ ಶಾಂತಿಗೆ ಶ್ರಮಿಸಿದರು. ಅದರಂತೆ 12ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರು ಎಲ್ಲ ಜಾತಿ,‌ಮತ, ಪಂಥಗಳನ್ನು ಮೀರಿ ಅನುಭವ ಮಂಟಪದಲ್ಲಿ ಸಮಾನತೆಯ ಉದ್ಘೋಷ ಮಾಡಿದರು. ಇಂತಹ ಮಹಾಪುರುಷರು ತೋರಿದ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕು. ಇಂದು ನನ್ನನ್ನು ಸನ್ಮಾನಿಸಿ ಗೌರವಿಸಿದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ.ಡಾ.ಪ್ರಭಾಕರ ಕೋರೆ, ಪದ್ಮಶ್ರೀ ಪುರಸ್ಕೃತರು