ನಗರದ ಮೂಲ ಸೌಕರ್ಯ ಅಭಿವೃದ್ಧಿ, ಸ್ವಚ್ಛತೆ, ಸಂಚಾರ ವ್ಯವಸ್ಥೆ ,ದಸರಾ ಆಚರಣೆ ಹಾಗೂ ವ್ಯಾಪಾರ-ಉದ್ಯಮಗಳಿಗೆ ಅನುಕೂಲಕರ ಆಡಳಿತ ಒದಗಿಸುವ ನಗರ ಪಾಲಿಕೆಯ ಎಲ್ಲಾ ನಿರ್ಧಾರಗಳಿಗೆ ತಮ್ಮ ಸಂಸ್ಥೆಯು ಸಂಪೂರ್ಣ ಸಹಕಾರ ನೀಡಲು ಬಹಳ ಸಂತೋಷವಾಗುತ್ತದೆ
ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ ಅವರನ್ನು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಪದಾಧಿಕಾರಿಗಳು ಸನ್ಮಾನಿಸಿದರು.ಮೈಸೂರು ವಿವಿ ಕುಲಸಚಿವರಾಗಿದ್ದ ಹಿರಿಯ ಕೆಎಎಸ್ ಅಧಿಕಾರಿ ಎಂ.ಕೆ. ಸವಿತಾ ಅವರನ್ನು ಸೋಮವಾರ ಭೇಟಿಯಾದ ಎಂಸಿಸಿಐ ಅಧ್ಯಕ್ಷ ಡಾ.ಕೆ.ಬಿ. ಲಿಂಗರಾಜು ಅವರ ತಂಡವು ಆತ್ಮೀಯವಾಗಿ ಅಭಿನಂದಿಸಿತು.ಈ ವೇಳೆ ಮಾತನಾಡಿದ ಡಾ.ಕೆ.ಬಿ. ಲಿಂಗರಾಜು ಅವರು, ನಗರದ ಮೂಲ ಸೌಕರ್ಯ ಅಭಿವೃದ್ಧಿ, ಸ್ವಚ್ಛತೆ, ಸಂಚಾರ ವ್ಯವಸ್ಥೆ ,ದಸರಾ ಆಚರಣೆ ಹಾಗೂ ವ್ಯಾಪಾರ-ಉದ್ಯಮಗಳಿಗೆ ಅನುಕೂಲಕರ ಆಡಳಿತ ಒದಗಿಸುವ ನಗರ ಪಾಲಿಕೆಯ ಎಲ್ಲಾ ನಿರ್ಧಾರಗಳಿಗೆ ತಮ್ಮ ಸಂಸ್ಥೆಯು ಸಂಪೂರ್ಣ ಸಹಕಾರ ನೀಡಲು ಬಹಳ ಸಂತೋಷವಾಗುತ್ತದೆ ಎಂದರು.ಮೈಸೂರಿಗೆ ತಮ್ಮಂತಹ ದಕ್ಷ ಅಧಿಕಾರಿಗಳ ಅವಶ್ಯಕತೆ ಇದ್ದು, ತಮ್ಮ ಆಡಳಿತ ಅವಧಿಯಲ್ಲಿ ನಮ್ಮ ಸಂಸ್ಥೆಯಿಂದ ಎಲ್ಲಾ ಬಗೆಯ ಸಹಕಾರ ನೀಡುವುದಾಗಿ ಆಶ್ವಾಸನೆ ನೀಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ನೂತನ ಆಯುಕ್ತರು ಹರ್ಷ ವ್ಯಕ್ತಪಡಿಸಿದರು.ಈ ವೇಳೆ ಸಂಸ್ಥೆ ಉಪಾಧ್ಯಕ್ಷ ಆರ್. ಆನಂದ್, ಗೌರವ ಖಜಾಂಚಿ ಆರ್. ಅಶೋಕ್, ಗೌರವ ಜಂಟಿ ಕಾರ್ಯದರ್ಶಿ ವಿನೋದ್ ಜೈನ್, ಕಾರ್ಯಕಾರಿ ಸಮಿತಿ ಸದಸ್ಯ ಶ್ಯಾಮಸುಂದರ್, ಎಂ.ಸಿ. ಬನ್ಸಾಲಿ, ಕೆ. ರಮೇಶ್ ಮತ್ತು ಮಹಿಳಾ ವಿಭಾಗದ ಜಂಟೀ ಕಾರ್ಯದರ್ಶಿ ಶಶಿಕಲಾ ಅಶೋಕ್ ಹಾಗೂ ಜಯಶ್ರೀ ಸಚ್ಚಿದಾನಂದ ಮೂರ್ತಿ ಇದ್ದರು.