44.53 ಕೋಟಿ ಒಡತಿ ಡಾ.ಪ್ರಭಾ ಮಲ್ಲಿಕಾರ್ಜುನ

KannadaprabhaNewsNetwork | Published : Apr 13, 2024 1:06 AM

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯೆ, ಎಸ್‌.ಎಸ್‌. ಕೇರ್ ಟ್ರಸ್ಟ್‌ನ ಡಾ.ಪ್ರಭಾ ಮಲ್ಲಿಕಾರ್ಜುನ ₹44.53 ಕೋಟಿ ಆಸ್ತಿ ಒಡತಿಯಷ್ಟೇ ಅಲ್ಲ, ₹97.28 ಲಕ್ಷ ಸಾಲ ಸಹ ಹೊಂದಿದ್ದಾರೆ.

- 97.28 ಲಕ್ಷ ಸಾಲ ಹೊಂದಿರುವ ಕಾಂಗ್ರೆಸ್ ಅಭ್ಯರ್ಥಿ - - -

ಕನ್ನಡಪ್ರಭ ವಾರ್ತೆ, ದಾವಣಗೆರೆ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯೆ, ಎಸ್‌.ಎಸ್‌. ಕೇರ್ ಟ್ರಸ್ಟ್‌ನ ಡಾ.ಪ್ರಭಾ ಮಲ್ಲಿಕಾರ್ಜುನ ₹44.53 ಕೋಟಿ ಆಸ್ತಿ ಒಡತಿಯಷ್ಟೇ ಅಲ್ಲ, ₹97.28 ಲಕ್ಷ ಸಾಲ ಸಹ ಹೊಂದಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ, ಹಿರಿಯ ಕೈಗಾರಿಕೋದ್ಯಮಿ ಎಸ್.ಎಸ್. ಮಲ್ಲಿಕಾರ್ಜುನ್‌ ಅವರ ಪತ್ನಿವಾಗಿರುವ ಡಾ.ಪ್ರಭಾ ಅವರ ಬಳಿ ₹67,566 ನಗದು, ವಿವಿಧ ಬ್ಯಾಂಕ್‌ಗಳಲ್ಲಿ ₹13,76,105 ಠೇವಣಿ ಹೊಂದಿದ್ದಾರೆ. ಷೇರು, ಡಿಬೆಂಚರ್‌ ಇತರೆಡೆ ₹2,65,20,500 ಬಂಡವಾಳ ಹೂಡಿಕೆ ಮಾಡಿದ್ದಾರೆ.

ಒಟ್ಟು ₹1.80 ಕೋಟಿ ಮೌಲ್ಯದ 3189.528 ಗ್ರಾಂ ಚಿನ್ನಾಭರಣ, 5.976 ಗ್ರಾಂ ಇತರೇ ಆಭರಣಗಳಿವೆ. ಬೆಳ್ಳಿ ಆಭರಣಗಳು ಯಾವುದೂ ಇಲ್ಲ. ₹10,23,009 ಮೌಲ್ಯದ ಇತರೆ ಆಸ್ತಿ ಡಾ.ಪ್ರಭಾರ ಹೆಸರಿಗೆ ಇವೆ. ₹1.54 ಕೋಟಿ ಮೌಲ್ಯದ 47.11 ಎಕರೆ ಕೃಷಿ ಭೂಮಿ, ₹16.1 ಲಕ್ಷ ಮೌಲ್ಯದ 11,050 ಚದರಡಿ ಕೃಷಿಯೇತರ ಭೂಮಿ ಒಡತಿ. 34484 ಚದರಡಿ ಮನೆ ಜೊತೆಗೆ 2500 ಚದರ ಅಡಿ ಬಿಲ್ಡ್ ಏರಿಯಾ ಡಾ.ಪ್ರಭಾ ಅವರ ಹೆಸರಿನಲ್ಲಿದೆ.

ವೈಯಕ್ತಿಕವಾಗಿ ಯಾವುದೇ ಆಸ್ತಿ ತಮ್ಮದು ಇಲ್ಲ ಎಂದು ಡಾ.ಪ್ರಭಾ ಮಲ್ಲಿಕಾರ್ಜುನ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಅವಿಭಕ್ತ ಕುಟುಂಬದ ಹಿನ್ನೆಲೆಯಲ್ಲಿ ತಮಗೆ 2018-19ರಲ್ಲಿ ₹6,05,320, 2019-20ರಲ್ಲಿ ₹6,48,080, 2020-21ರಲ್ಲಿ ₹7,18,300, 2021-22ರಲ್ಲಿ ₹7,84,740, 2022-23ರಲ್ಲಿ ₹8,40,600 ಆಸ್ತಿ ದೊರೆತಿದೆ. ಒಟ್ಟು ₹44,53,14,286 ಮೌಲ್ಯದ ಚರ ಮತ್ತು ಸ್ಥಿರಾಸ್ತಿ ಮಾಹಿತಿಯನ್ನು ಡಾ.ಪ್ರಭಾ ಮಲ್ಲಿಕಾರ್ಜುನ ಪ್ರಮಾಣ ಪತ್ರದಲ್ಲಿ ಸಲ್ಲಿಸಿದ್ದಾರೆ.

- - -

(ಫೋಟೋ: -ಡಾ.ಪ್ರಭಾ ಮಲ್ಲಿಕಾರ್ಜುನ, ಕಾಂಗ್ರೆಸ್‌ ಅಭ್ಯರ್ಥಿ)

Share this article