ಕನ್ನಡಪ್ರಭ ವಾರ್ತೆ ವಿಜಯಪುರಬೆಂಗಳೂರಿನಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ-೨೦೨೫ ಜಾಗತಿಕ ಹೂಡಿಕೆದಾರರ ಸಮಾವೇಶ ಅತ್ಯಂತ ಫಲಪ್ರದವಾಗಿದ್ದು, ಬೆಂಗಳೂರನ್ನು ಹೊರತುಪಡಿಸಿ ಉತ್ತರ ಕರ್ನಾಟಕ ಭಾಗಕ್ಕೆ ಅತೀ ಹೆಚ್ಚು ಬಂಡವಾಳ ಹೂಡಿಕೆಗೆ ಆದ್ಯತೆ ನೀಡಲಾಗಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಒಟ್ಟು ₹10.27 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ವಿವಿಧ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ 6 ಲಕ್ಷ ಉದ್ಯೋಗ ಸೃಷ್ಟಿಯಾಗಲಿವೆ. ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗಕ್ಕೆ ಶೇ.45 ರಷ್ಟು ಬಂಡವಾಳ ಹರಿದು ಬಂದಿದೆ ಎಂದರು.
ತವರು ಜಿಲ್ಲೆಗೆ ಮಹತ್ವದ ಕಾಣಿಕೆ:
ವಿಜಯಪುರದಲ್ಲಿ ಸರಿಸುಮಾರು 42 ಸಾವಿರ ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆ ಇದೆ. ಶೇ. 80ರಷ್ಟು ವಿಜಯಪುರದಲ್ಲಿಯೇ ಸ್ಥಳಗುರುತಿಸಲಾಗಿದೆ. ಸುಜ್ಞಾನ್ ಎನರ್ಜಿ ಲಿಮಿಟೆಡ್‌ನಿಂದ 21950 ಕೋಟಿ ವೆಚ್ಚದಲ್ಲಿ 3000 ಮೆಗಾ ವ್ಯಾಟ್‌ನ ಪವನ ವಿದ್ಯುತ್ಘ ಟಕ ಸ್ಥಾಪಿಸಲಾಗುತ್ತಿದ್ದು, ಇದರಿಂದ 4200 ಜನರಿಗೆ ಉದ್ಯೋಗ ಸಿಗಲಿದೆ ಎಂದರು.
ವಿಂಗ್ಸ್ ಅಗ್ರಿಕಲ್ಟರ್ ಪ್ರೈವೆಟ್ ಲಿಮಿಟೆಡ್‌ನವರು 350 ಕೋಟಿ ವೆಚ್ಚದಲ್ಲಿ ಕಷಿ ಸಂಸ್ಕರಣೆ ಘಟಕ ಸ್ಥಾಪಿಸು ೧೦.೨೭ ಲಕ್ಷ ಕೋಟಿ ಬಂಡವಾಳದಲ್ಲಿ ಬೆಂಗಳೂರು ಹೊರತುಪಡಿಸಿ (ಬಿಹಾಂಡ್ ಬೆಂಗಳೂರು) ಇತರೇ ಜಿಲ್ಲೆಗಳಲ್ಲಿ ಶೇ.೭೫ ರಷ್ಟು ಬಂಡವಾಳ ಹೂಡಿಕೆಯಾಗಲಿದೆ. ಸುಮಾರು ೪೨ ಸಾವಿರ ಕೋಟಿ ಬಂಡವಾಳದ ಕೈಗಾರಿಕೆಗಳು ವಿಜಯಪುರ ಜಿಲ್ಲೆಯಲ್ಲಿಯೇ ಸ್ಥಾಪನೆಯಾಗಲಿವೆ. ಅದರಲ್ಲಿ ೩೪ ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಈಗಾಗಲೇ ಸ್ಥಳ ಕೂಡ ಗುರುತಿಸಲಾಗಿದೆ. ಇದರಿಂದ ಸುಮಾರು ೧೫ ಸಾವಿರ ಯುವಕರಿಗೆ ವಿಜಯಪುರದಲ್ಲಿ ಉದ್ಯೋಗ ದೊರೆಯಲಿದೆ. ಕೇವಲ ಟ್ರೈಲರ್ ಆಗಿದೆ ಎನ್ನುವ ಮೂಲಕ ಜಿಲ್ಲೆಗೆ ದೊಡ್ಡ ಹೂಡಿಕೆದಾರರನ್ನು ಕರೆತರುವ ಮುನ್ಸೂಚನೆ ನೀಡಿದರು.ನನ್ನ ಅವಧಿಯಲ್ಲಿಯೇ ವಿಜಯಪುರ ಜಿಲ್ಲೆಯಲ್ಲಿ ಕನಿಷ್ಠ ೧ ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡುವ ಗುರಿ ಹಾಕಿಕೊಂಡಿದ್ದೇನೆ. ಜಿಲ್ಲೆಯಲ್ಲಿ ನೀರು, ಭೂಮಿ, ವಿದ್ಯುತ್ ಹಾಗೂ ಮಾನವ ಸಂಪನ್ಮೂಲ ಎಲ್ಲವೂ ಇದೆ. ಹಾಗಾಗಿ ಇಲ್ಲೇ ಹೂಡಿಕೆ ಮಾಡಲು ವಿವಿಧ ಕಂಪನಿಗಳ ಜೊತೆಗೆ ಮಾತುಕತೆ ನಡೆಸಿ ಹೆಚ್ಚಿನ ಉದ್ಯೋಗ ಸೃಷ್ಟಿ ಮಾಡುವ ಎಲ್ಲ ಪ್ರಯತ್ನಗಳು ನಡೆಯುತ್ತಿದೆ ಎಂದರು.