- ಮುತ್ತಿನಕೊಪ್ಪ, ಶೃಂಗೇರಿ, ತೀರ್ಥಹಳ್ಳಿಯ ನೂತನ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಘಟಕ ಉದ್ಘಾಟನೆ
ಈ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸದಾಗಿ 45 ಸೀನಿಯರ್ ಚೇಂಬರ್ ಘಟಕ ಪ್ರಾರಂಬಿಸಿದ್ದೇವೆ ಎಂದು ಸೀನಿಯರ್ ಚೇಂಬರ್ ನ್ಯಾಷನಲ್ ಪ್ರೆಸಿಡೆಂಟ್ ಎಂ.ಆರ್.ಜಯೇಶ್ ತಿಳಿಸಿದರು.
ತಾಲೂಕಿನ ಗಡಿಭಾಗದ ಮೃಗವಧೆಯ ಎಲೆಮನೆ ರೀಟ್ರೀಟ್ ನಲ್ಲಿ ನರಸಿಂಹರಾಜಪುರ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಆಶ್ರಯದಲ್ಲಿ ಮುತ್ತಿನಕೊಪ್ಪ ಸೀನಿಯರ್ ಚೇಂಬರ್, ಶೃಂಗೇರಿ ಸೀನಿಯರ್ ಚೇಂಬರ್ ಹಾಗೂ ತೀರ್ಥಹಳ್ಳಿ ಮಹಿಳಾ ತುಂಗಾ ಸೀನಿಯರ್ ಛೇಂಬರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಈ ವರ್ಷ 700 ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ ದಾಖಲೆ ಸೃಷ್ಠಿಸಿದ್ದೇನೆ. ಒಂದೇ ದಿನ ಒಂದೇ ವೇದಿಕೆಯಲ್ಲಿ 3 ಘಟಕಗಳನ್ನು ಪ್ರಾರಂಭಿಸುತ್ತಿರುವುದು ಅತ್ಯಂತ ಸಂತಸದ ಕ್ಷಣ. ಈಗಾಗಲೇ ಪ್ರಾರಂಭವಾದ ನೂತನ ಘಟಕಗಳು ಯಶಸ್ವಿಯಾಗಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ. ನರಸಿಂಹರಾಜಪುರ ಸೀನಿಯರ್ ಚೇಂಬರ್ ಈ ವರ್ಷ ಅತಿ ಹೆಚ್ಚು ಕಾರ್ಯಕ್ರಮ ಮಾಡಿ ದಾಖಲೆ ಸೃಷ್ಠಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಈ ಬಾರಿ ಯುವಕರಿಗೋಸ್ಕರ ಹಲವಾರು ಶಾಲಾ, ಕಾಲೇಜುಗಳಲ್ಲಿ ಯೂತ್ ಘಟಕ ಪ್ರಾರಂಭಿಸಲಿದ್ದೇವೆ. ಈಗಾಗಲೇ ರಾಷ್ಟ್ರೀಯ ಸಮ್ಮೇಳನ ಸಹ ಯಶಸ್ವಿಯಾಗಿ ನೆರವೇರಿಸಿದ್ದೇವೆ. ಈ ಸಾಧನೆಗೆ ಸೀನಿಯರ್ ಚೇಂಬರ್ ಅಧ್ಯಕ್ಷರು ಪದಾಧಿಕಾರಿಗಳು, ಸದಸ್ಯರ ಸಹಕಾರವೇ ಕಾರಣ ಎಂದರು.
ಸಭೆ ಅಧ್ಯಕ್ಷತೆಯನ್ನು ರಾಷ್ಟ್ರೀಯ ಸೀನಿಯರ್ ಚೇಂಬರ್ ಜಿ ಅಂಡ್ ಡಿ ಕೋ ಆರ್ಡಿನೇಟರ್ ಸೂರ್ಯನಾರಾಯಣ್ ವಹಿಸಿದ್ದರು. ರಾಷ್ಟ್ರೀಯ ಸೀನಿಯರ್ ಚೇಂಬರ್ ನಿಕಟ ಪೂರ್ವ ಅಧ್ಯಕ್ಷ ಚಿತ್ರಕುಮಾರ್, ಸೆಕ್ರಟರಿ ಜನರಲ್ ವಾಸುದೇವನ್, ರಾಷ್ಟ್ರೀಯ ವೈಸ್ ಪ್ರೆಸಿಡೆಂಟ್ ಗಳಾದ ಸಿದ್ದಲಿಂಗಯ್ಯ, ಸುರೇಖ ಮುರಳಿಧರ್, ಖಜಾಂಚಿ ಸಂಪತ್, ನ್ಯಾಷನಲ್ ಕೋ ಆರ್ಡನೇಟರ್ ಗಳಾದ ಡಾ.ಶಿವಕುಮಾರ್, ಪುಷ್ಪ ಶೆಟ್ಟಿ, ಕಾನೂನು ಸಲಹೆಗಾರ ಟಿ.ಎನ್.ಜಗದೀಶ್, ನ್ಯಾಷನಲ್ ಡೈರೆಕ್ಟರ್ ನಿಶಾದ್ ಗೋಪಿನಾಥ್, ನರಸಿಂಹರಾಜಪುರ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಅಧ್ಯಕ್ಷ ಎಸ್.ಎಸ್.ಜಗದೀಶ್, ತೀರ್ಥಹಳ್ಳಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಅಧ್ಯಕ್ಷ ಕಿರಣಕುಮಾರ್, ಕೊಪ್ಪ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಅಧ್ಯಕ್ಷ ದುರ್ಗೇಶ್ ಇದ್ದರು.