ಹೊಸ ವರ್ಷಕ್ಕೆ 46 ಮಂದಿ ಐಎಎಸ್‌ ಅಧಿಕಾರಿಗಳಿಗೆ ಬಡ್ತಿ

KannadaprabhaNewsNetwork | Published : Dec 31, 2023 1:30 AM

ಸಾರಾಂಶ

46 ಮಂದಿ ಐಎಎಸ್‌ ಅಧಿಕಾರಿಗಳಿಗೆ ಬಡ್ತಿ ನೀಡಿ, ಜ.1 ರಿಂದ ಅನ್ವಯವಾಗುವಂತೆ ರಾಜ್ಯ ಸರ್ಕಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶದಲ್ಲಿ ತಿಳಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಸರ್ಕಾರ 46 ಮಂದಿ ಐಎಎಸ್‌ ಅಧಿಕಾರಿಗಳಿಗೆ ಬಡ್ತಿ ನೀಡಿ ಆದೇಶಿಸಿದ್ದು, ಜ.1 ರಿಂದ ಅನ್ವಯವಾಗುವಂತೆ ಬಡ್ತಿ ಅನ್ವಯವಾಗಲಿದೆ. ಆದರೆ ಇವರ ಹುದ್ದೆಗಳಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಬಡ್ತಿ ಆದೇಶದಲ್ಲಿ ತಿಳಿಸಿದೆ.ಪ್ರಧಾನ ಮಂತ್ರಿಗಳ ಹೆಚ್ಚುವರಿ ಕಾರ್ಯದರ್ಶಿ ಅರವಿಂದ ಶ್ರೀವತ್ಸವ ಅವರಿಗೆ ಅದೇ ಹುದ್ದೆಯಲ್ಲಿ ಪೇ ಮ್ಯಾಟ್ರಿಕ್ಸ್‌ನ ಮುಂದಿನ ಹಂತಕ್ಕೆ ಬಡ್ತಿ ನೀಡಲಾಗಿದೆ.

ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಹಾಗೂ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್‌ ಅವರಿಗೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಎಂ.ಎಸ್. ಶ್ರೀಕರ ಅವರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಬಡ್ತಿ ನಿಡಲಾಗಿದೆ.ಇತರೆ ಐಎಎಸ್‌ ಅಧಿಕಾರಿಗಳ ಬಡ್ತಿ: ಶಿಕ್ಷಣ ಇಲಾಖೆ ಆಯುಕ್ತರಾದ ಬಿ.ಬಿ. ಕಾವೇರಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಖ್ಯ ಮೌಲ್ಯಮಾಪನ ಅಧಿಕಾರಿ ಸುಷ್ಮಾ ಗೋಡಬೋಲೆ ಸೇರಿದಂತೆ ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ದೀಪ್ತಿ ಆದಿತ್ಯ ಕಾನಡೆ, ಉಪಮುಖ್ಯಮಂತ್ರಿಗಳ ಕಾರ್ಯದರ್ಶಿ ಪಿ. ರಾಜೇಂದ್ರ ಚೋಳನ್, ಉಜ್ವಲ್‌ ಕುಮಾರ್ ಘೋಷ್, ಎಂ. ದೀಪಾ, ಟಿ.ಎಚ್‌.ಎಂ ಕುಮಾರ್, ಎಸ್‌.ಬಿ. ಶೆಟ್ಟೆಣ್ಣವರ್, ಜಿ. ಅಭಿರಾಮ್‌ ಶಂಕರ್‌, ಸಿಂಧೂ ಬಿ ರೂಪೇಶ್, ಎಂ. ಕುರ್ಮಾ ರಾವ್‌, ಡಾ. ಆರ್‌. ರಾಗಪ್ರಿಯ, ಪಿ. ಅನಿರುದ್ಧ ಶ್ರವಣ್‌, ಪೊಮ್ಮಲ ಸುನಿಲ್‌ ಕುಮಾರ್, ರಾಣಿ ಕೊರ್ಲಪಾಟಿ, ಬಿ.ಶರತ್, ಸಿ.ಎನ್‌. ಸುಧೀಂದ್ರ, ಟಿ.ಕೆ. ಸ್ವರೂಪ, ಎಂ.ಎಸ್. ದಿವಾಕರ, ಬಿ. ಫೌಂಜಿಯಾ ತರನ್ನಮ್, ಜಿ.ಲಕ್ಷ್ಮಿಕಾಂತ್‌ ರೆಡ್ಡಿ, ಟಿ. ಭೂಬಾಲನ್‌, ಕೆ. ನಿತೀಶ್, ಕೆ. ಲಕ್ಷ್ಮಿಪ್ರಿಯ, ಮೊಹಮ್ಮದ್‌ ರೋಷನ್, ಡಾ.ಬಿ. ಸುಶೀಲ, ಶಿಲ್ಪಾ ಶರ್ಮಾ, ಕೆ. ನಾಗೇಂದ್ರ ಪ್ರಸಾದ್, ಡಾ.ಕುಮಾರ, ಟಿ. ವೆಂಕಟೇಶ್, ಅನ್ಮೋಲ್ ಜೈನ್, ಲ್ಯಾವಿಶ್ ಅರ್ಡಿಯಾ, ರಿಷಿ ಆನಂದ್, ಎಚ್.ಎಸ್‌. ಕೀರ್ತನಾ, ಅಲಿ ಅಕ್ರಮ್‌ ಶಾ, ಗಿಟ್ಟೆ ಮಾಧವ್‌ ವಿಠ್ಠಲರಾವ್, ಶಿಂಧೆ ಅವಿನಾಶ್ ಸಂಜೀವನ್‌, ಎನ್‌. ರೇವಂತ, ರುಚಿ ಬಿಂದಾಲ್‌ ಹಾಗೂ ಶಿಕ್ಷಣದ ಸಲುವಾಗಿ ರಜೆಯಲ್ಲಿರುವ ಖುಷ್ಬು ಚೌಧರಿ, ರಾಂ ದೀಪ್‌ ಚೌಧರಿ ಅವರಿಗೆ ಮುಂದಿನ ಶ್ರೇಣಿಗೆ ಬಡ್ತಿ ಕಲ್ಪಿಸಲಾಗಿದೆ.

Share this article