ಕುಂದಗೋಳದಲ್ಲಿ ವಾಡಿಕೆಗಿಂತ 47ರಷ್ಟು ಹೆಚ್ಚು ಮಳೆ: ಶಾಸಕ ಎಂ.ಆರ್‌. ಪಾಟೀಲ

KannadaprabhaNewsNetwork |  
Published : Dec 04, 2024, 12:30 AM IST
54 | Kannada Prabha

ಸಾರಾಂಶ

ಅತಿ ಮಳೆಯಿಂದ ಬೆಳೆ ಹಾನಿಯಾಗಿದೆ. ಬಿದ್ದ ಮನೆಗೆ ಕೇವಲ ₹ 6500 ನೀಡುತ್ತಿದ್ದು ₹ 5 ಲಕ್ಷಕ್ಕೆ ಏರಿಸಬೇಕು.

ಕುಂದಗೋಳ:

ತಾಲೂಕಿನಲ್ಲಿ ವಾಡಿಕೆಗಿಂತ ಶೇ. 47ರಷ್ಟು ಹೆಚ್ಚು ಮಳೆಯಾಗಿ ಹೆಚ್ಚಿನ ಬೆಳೆ ನಷ್ಟವಾಗಿದೆ. ಆದರೆ, ಅಧಿಕಾರಿಗಳು ಬರೀ 800 ಹೆಕ್ಟೇರ್‌ ಸರ್ವೇ ಮಾಡಿದ್ದರು. ಇದೀಗ ಮರು ಸಮೀಕ್ಷೆ ನಡೆಸಿದಾಗ 1800 ಹೆಕ್ಟೇರ್‌ನಲ್ಲಿ ಬೆಳೆಹಾನಿಯಾಗಿದೆ. ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಶಾಸಕ ಎಂ.ಆರ್‌. ಪಾಟೀಲ ತಿಳಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅತಿ ಮಳೆಯಿಂದ ಬೆಳೆ ಹಾನಿಯಾಗಿದೆ. ಬಿದ್ದ ಮನೆಗೆ ಕೇವಲ ₹ 6500 ನೀಡುತ್ತಿದ್ದು ₹ 5 ಲಕ್ಷಕ್ಕೆ ಏರಿಸಬೇಕು ಎಂದು ಒತ್ತಾಯಿಸಿದರು.

ಪಿಆರ್‌ಡಿ ಹಾಗೂ ಪಿಡಬ್ಲ್ಯೂಡಿ ಇಲಾಖೆ ವರದಿ ತರಿಸಿಕೊಂಡು ಸಂಶಿ-ಅತ್ತಿಗೇರಿ ದಾರಿ ಪಕ್ಕದ ಬ್ರಿಡ್ಜ್‌ಗಾಗಿ ₹ 1 ಕೋಟಿ ಅನುದಾನ, ಸಂಶಿ-ಗುಡಗೇರಿ ರಸ್ತೆಗೆ ₹ 5 ಕೋಟಿ, ಸಂಶಿ-ರಾಮಗೇರಿ ರಸ್ತೆಗೆ ₹ 6 ಕೋಟಿ, ಸಂಶಿ-ಚಾಕಲಬ್ಬಿ ರಸ್ತೆ ಮಾರ್ಗದ ಬ್ರಿಡ್ಜ್‌ಗಾಗಿ 4 ಕೋಟಿ, ನೂಲ್ವಿ ಕ್ರಾಸ್‌ ಬಳಿ ನಿರ್ಮಾಣ ಮಾಡಲು ಹೊಸ್ ಬ್ರೀಡ್ಜ್‌ಗಾಗಿ ₹ 12.50 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಪಟ್ಟಣದ ಪಶು ಚಿಕಿತ್ಸಾಲಯದ ಟೆಕ್ಸಿಶಿಯನ್ ಲ್ಯಾಬ್‌ ಹೈಟೆಕ್‌ಗಾಗಿ ₹ 12 ಲಕ್ಷ ಅನುದಾನ ಬಿಡುಗಡೆ ಮಾಡಿಸಿದ್ದೇನೆ ಎಂದರು.

ಜನಸಂಖ್ಯೆ ಒಳಗೊಂಡಂತೆ ಅನುದಾನ ಬಿಡುಗಡೆ ಆಗಬೇಕೆಂದರೆ ಕೆಲ ಮಾನದಂಡಗಳಿರುತ್ತವೆ. ಈ ಮಾನದಂಡಗಳಿಗೆ ಅನುಗುಣವಾಗಿ ಹಿಂದುಳಿದ ಜನಾಂಗಕ್ಕೆ, ನಿವಾಸಿಗಳ ಸಮಸ್ಯೆಗಳ ಪರಿಹಾರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ವರದಿ ತಯಾರಿಸಿ ಪಟ್ಟಣಕ್ಕೆ ಆಗಮಿಸಿದ್ದ ಹಣಕಾಸು ಆಯೋಗದ ಅಧ್ಯಕ್ಷರಿಗೆ ವರದಿ ಸಲ್ಲಿಸಲಾಗಿದೆ ಎಂದು ಶಾಸಕರು ತಿಳಿಸಿದರು.

ಈ ವೇಳೆ ಪಪಂ ಸದಸ್ಯರಾದ ಗಣೇಶ ಕೋಕಾಟೆ, ಹನುಮಂತಪ್ಪ ರಣತೂರ, ವಾಗೀಶ ಗಂಗಾಯಿ, ಪ್ರವೀಣ ಬಡ್ನಿ, ಹನುಮಂತಪ್ಪ ಮೇಲಿನಮನಿ, ದಿಲೀಪ್‌ ಕಲಾಲ, ಬಸವರಾಜ ಕೊಪ್ಪದ, ಬಿ.ಟಿ. ಗಂಗಾಯಿ, ಮಾಲತೇಶ ಶ್ಯಾಗೋಟಿ, ಬಸವರಾಜ ಬಾಳಿಕಾಯಿ, ಶೇಖಣ್ಣ ಬಾಳಿಕಾಯಿ, ಪೃಥ್ವಿರಾಜ ಕಾಳಿ, ಸತೀಶ ಪಾಟೀಲ, ‌ಸಿದ್ದು ಧಾರವಾಡಶೇಟ್ರ, ವಾಗೀಶ ಮಣಕಟ್ಟಿಮಠ, ಗಿರೀಶ್ ಗದಗಿನ ಸೇರಿದಂತೆ ಅನೇಕರಿದ್ದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ