473 ಕೋಟಿ ತೆರಿಗೆ ಬಾಕಿ: ವಿಧಾನಸೌಧ, ರಾಜಭವನಕ್ಕೆ ಬೀಗ ಹಾಕಲು ಒತ್ತಾಯ

KannadaprabhaNewsNetwork |  
Published : Apr 01, 2026, 03:45 AM IST
NR Ramesh 

ಸಾರಾಂಶ

ದೊಡ್ಡ ಮಟ್ಟದ ತೆರಿಗೆ ಬಾಕಿ ಉಳಿಸಿಕೊಂಡಿರುವ ಸರ್ಕಾರಿ ಕಟ್ಟಡಗಳಾದ ವಿಧಾನಸೌಧ, ವಿಕಾಸಸೌಧ, ರಾಜಭವನ ಸೇರಿದಂತೆ ಇನ್ನಿತರ ಕಟ್ಟಡಗಳಿಗೆ ಒಂದು ದಿನವಾದರೂ ಬೀಗ ಹಾಕಿ ಎಚ್ಚರಿಕೆ ನೀಡಬೇಕು ಎಂದು ಬಿಬಿಎಂಪಿ ಪ್ರತಿಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಒತ್ತಾಯಿಸಿದ್ದಾರೆ.

  ಬೆಂಗಳೂರು ದೊಡ್ಡ ಮಟ್ಟದ ತೆರಿಗೆ ಬಾಕಿ ಉಳಿಸಿಕೊಂಡಿರುವ ಸರ್ಕಾರಿ ಕಟ್ಟಡಗಳಾದ ವಿಧಾನಸೌಧ, ವಿಕಾಸಸೌಧ, ರಾಜಭವನ ಸೇರಿದಂತೆ ಇನ್ನಿತರ ಕಟ್ಟಡಗಳಿಗೆ ಒಂದು ದಿನವಾದರೂ ಬೀಗ ಹಾಕಿ ಎಚ್ಚರಿಕೆ ನೀಡಬೇಕು ಎಂದು ಬಿಬಿಎಂಪಿ ಪ್ರತಿಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಒತ್ತಾಯಿಸಿದ್ದಾರೆ. ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, 2008-09 ರ ಸಾಲಿನಿಂದಲೂ ವಿಧಾನಸೌಧ, ವಿಕಾಸಸೌಧ, ಬಹು ಮಹಡಿ ಕಟ್ಟಡ, ಕುಮಾರಕೃಪ ಅತಿಥಿ ಗೃಹ ಹಾಗೂ ರಾಜ ಭವನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಚಿವಾಲಯಗಳು ಕೋಟ್ಯಂತರ ರು. ತೆರಿಗೆ ಬಾಕಿ ಉಳಿಸಿಕೊಂಡಿವೆ. ಈ ಕಟ್ಟಡಗಳ ಮುಖ್ಯಸ್ಥರಿಗೆ ಡಿಮ್ಯಾಂಡ್ ನೋಟಿಸ್ ಜಾರಿ ಮಾಡಬೇಕು. ತೆರಿಗೆ ಪಾವತಿಸದಿದ್ದರೆ ಬೀಗ ಹಾಕಬೇಕು ಎಂದು ಹೇಳಿದ್ದಾರೆ.

ಕೋಟ್ಯಂತರ ರು. ಬಾಕಿ ಉಳಿಸಿಕೊಂಡಿರುವ ಸರ್ಕಾರಿ ಕಟ್ಟಡಗಳನ್ನು ಬಿಟ್ಟು 50,000 ರು.ಯಿಂದ ಐದಾರು ಲಕ್ಷ ರು. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ಆಸ್ತಿಗಳನ್ನು ಹರಾಜು ಹಾಕುವ ಮೂಲಕ ಜಿಬಿಎ ತುಘಲಕ್ ದರ್ಬಾರ್ ನಡೆಸುತ್ತಿದೆ ಎಂದು ಕಿಡಿಕಾರಿದರು.

ನಗರದ ಬೃಹತ್ ಟೆಕ್‌ ಪಾರ್ಕ್, ಬಿಸಿನೆಸ್ ಪಾರ್ಕ್, ಐಟಿ ಬಿಟಿ ಕಂಪನಿಗಳು, ಮಾಲ್, ಮಲ್ಟಿಪ್ಲೆಕ್ಸ್, ಕೈಗಾರಿಕಾ ಕಟ್ಟಡಗಳು, ತಾರಾ ಹೋಟೆಲ್‌ಗಳು ಮತ್ತು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಸಹ ಕೋಟ್ಯಾಂತರ ರೂಪಾಯಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿವೆ ಎಂದು ಹೇಳಿದರು. 

ನೋಟಿಸ್ ನೀಡಿದ್ದ ಅಧಿಕಾರಿ:

ಬಿಬಿಎಂಪಿಯ ಪೂರ್ವ ವಲಯ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಸ್ನೇಹಲ್ ಅವರು ಕಳೆದ ವರ್ಷ ಮಾರ್ಚ್‌ನಲ್ಲಿ ರಾಜ್ಯ ಸರ್ಕಾರದ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಡಿಮ್ಯಾಂಡ್ ನೋಟಿಸ್ ಜಾರಿ ಮಾಡಿ ಎಂಟೂವರೆ ಕೋಟಿ ರು. ಬಾಕಿ ತೆರಿಗೆ ಪಾವತಿಸಲು ಸೂಚಿಸಿದ್ದರು ಎಂದು ರಮೇಶ್ ತಿಳಿಸಿದ್ದಾರೆ.

ಪ್ರಮುಖ ಸರ್ಕಾರಿ ಕಟ್ಟಡಗಳಿಂದ ಬರಬೇಕಿರುವ ಬಾಕಿವಲಯದ ಹೆಸರುಬಾಕಿ ತೆರಿಗೆ

- ಪೂರ್ವ ವಲಯ- ₹ 246,39,35,893 - ಯಲಹಂಕ ವಲಯ- ₹ 67,48,61,705

- ರಾಜರಾಜೇಶ್ವರಿ ನಗರ ವಲಯ- ₹ 57,52,26,762- ಮಹದೇವಪುರ ವಲಯ-₹ 39,13,28,272- ದಕ್ಷಿಣ ವಲಯ-₹ 33,70,92,101- ಬೊಮ್ಮನಹಳ್ಳಿ ವಲಯ- ₹ 5,68,26,095- ದಾಸರಹಳ್ಳಿ ವಲಯ- ₹ 4,17,70,123- ಪಶ್ಚಿಮ ವಲಯ- ₹ 3,61,06,346ಪ್ರಮುಖ ಸರ್ಕಾರಿ ಕಟ್ಟಡಗಳ ಬಾಕಿ, ಕಟ್ಟಡದ ಹೆಸರು,ಬಾಕಿ ಮೊತ್ತ

- ವಿಕಾಸಸೌಧ- ₹ 4,24,28,393- ಬಹು ಮಹಡಿ ಕಟ್ಟಡ (ಎಂ.ಎಸ್. ಬಿಲ್ಡಿಂಗ್)- ₹ 3,38,65,524- ಕುಮಾರ ಕೃಪ ಅತಿಥಿ ಗೃಹ- ₹ 3,01,27,355- ವಿಧಾನಸೌಧ- ₹ 2,15,28,345- ರಾಜ ಭವನ ₹ 1,89,97,265- ವಿಕಾಸಸೌಧ ಕ್ಯಾಂಟೀನ್- ₹ 17,65,698- ವಿಧಾನಸೌಧ ಕ್ಯಾಂಟೀನ್- ₹ 7,40,506

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬೆಂಗಳೂರಲ್ಲೊಂದು ಮಹಾ ಸೈಬರ್‌ ಸುಲಿಗೆ : ರಾಜ್ಯದ ದೊಡ್ಡ ಡಿಜಿಟಲ್‌ ಅರೆಸ್ಟ್‌
ಅವಶ್ಯಕತೆ ಇದ್ದರೆ ರಾಜ್ಯಸಭೆಗೆ ಗೌಡರು ಹೋಗುವ ಬಗ್ಗೆ ಬಿಜೆಪಿ ತೀರ್ಮಾನಿಸುತ್ತೆ: ಎಚ್ಡಿಕೆ