ಕೆಎ 12 ನೋಂದಣಿ ಸಂಖ್ಯೆಯ 5 ಅಶ್ವಮೇಧ ಬಸ್ ಸಂಚಾರ ಆರಂಭ

KannadaprabhaNewsNetwork |  
Published : Oct 12, 2024, 12:07 AM IST
ಚಿತ್ರ : 10ಎಂಡಿಕೆ4 : ಅಶ್ವಮೇಧ ಬಸ್ ಸಂಚಾರಕ್ಕೆ ಚಾಲನೆ ನೀಡಿದ ಶಾಸಕರಾದ ಡಾ.ಮಂತರ್ ಗೌಡ. | Kannada Prabha

ಸಾರಾಂಶ

ರಾಜ್ಯ ರಸ್ತೆ ಸಾರಿಗೆ ನಿಗಮದ ಕೆಎ12ರಿಂದ ಆರಂಭವಾಗುವ ನೋಂದಣಿ ಸಂಖ್ಯೆ ಹೊಂದಿದ ಐದು ನೂತನ ಅಶ್ವಮೇಧ ಬಸ್‌ಗಳಿಗೆ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ನಗರದ ಕೆಎಸ್‌ಆರ್‌ಟಿಸಿ ಘಟಕದಲ್ಲಿ ಗುರುವಾರ ಚಾಲನೆ ನೀಡಿದರು. ದಸರಾ ವಿಶೇಷ ಸಂದರ್ಭವಾಗಿ ಅಂತರ್‌ ಜಿಲ್ಲೆಗೆ ಬಸ್‌ ಸಂಚಾರ ಕಲ್ಪಿಸಲಾಗುವುದು. ದಸರಾ ನಂತರ ಕೊಡಗು ಜಿಲ್ಲೆಯಲ್ಲಿ ಬಸ್ ಸಂಚರಿಸಲಿದೆ ಎಂದು ಡಾ.ಮಂತರ್ ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಜ್ಯ ರಸ್ತೆ ಸಾರಿಗೆ ನಿಗಮದ ಕೆಎ12ರಿಂದ ಆರಂಭವಾಗುವ ನೋಂದಣಿ ಸಂಖ್ಯೆ ಹೊಂದಿದ ಐದು ನೂತನ ಅಶ್ವಮೇಧ ಬಸ್‌ಗಳಿಗೆ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ನಗರದ ಕೆಎಸ್‌ಆರ್‌ಟಿಸಿ ಘಟಕದಲ್ಲಿ ಗುರುವಾರ ಚಾಲನೆ ನೀಡಿದರು.

ದಸರಾ ವಿಶೇಷ ಸಂದರ್ಭವಾಗಿ ಅಂತರ್‌ ಜಿಲ್ಲೆಗೆ ಬಸ್‌ ಸಂಚಾರ ಕಲ್ಪಿಸಲಾಗುವುದು. ದಸರಾ ನಂತರ ಕೊಡಗು ಜಿಲ್ಲೆಯಲ್ಲಿ ಬಸ್ ಸಂಚರಿಸಲಿದೆ ಎಂದು ಡಾ.ಮಂತರ್ ಗೌಡ ಹೇಳಿದರು.

ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಇತ್ತೀಚೆಗೆ ಶನಿವಾರಸಂತೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ನಮ್ಮ ಕೊಡಗು ಜಿಲ್ಲೆಯ ಪ್ರಾದೇಶಿಕ ಸಾರಿಗೆ ನೋಂದಣಿ ಸಂಖ್ಯೆ ಆಗಬೇಕಿದೆ ಎಂದು ಮನವಿ ಮಾಡಲಾಗಿತ್ತು. ಅದರಂತೆ ಸಚಿವರು ಸ್ಪಂದಿಸಿದ್ದಾರೆ ಎಂದರು.

ಕೆಎಸ್‌ಆರ್‌ಟಿಸಿ ಬಸ್‌ಗಳು ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸಲಿವೆ. ಶಕ್ತಿ ಯೋಜನೆ ಮಹಿಳೆಯರಿಗೆ ಅವಕಾಶವಿದೆ ಎಂದು ಹೇಳಿದರು.

ಮಡಿಕೇರಿ ಪ್ರಾದೇಶಿಕ ಸಾರಿಗೆ ಸಂಬಂಧಿಸಿದಂತೆ 5 ಬಸ್‌ಗಳಿಗೂ ಒಳ್ಳೆಯ ನೋಂದಣಿ ಸಂಖ್ಯೆ ಸಿಕ್ಕಿದೆ. ಕೆಎ 12 ಎಫ್.01, 02, 03, 04, 05 ನೋಂದಣಿಯಾಗಿದೆ ಎಂದು ಶಾಸಕ ಡಾ.ಮಂತರ್ ಗೌಡ ವಿವರಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಪ್ರಮುಖರಾದ ಟಿ.ಪಿ.ರಮೇಶ್, ರಾಜೇಶ್ ಯಲ್ಲಪ್ಪ, ಚುಮ್ಮಿ ದೇವಯ್ಯ, ಪ್ರಕಾಶ್ ಆಚಾರ್ಯ, ಅಬ್ದುಲ್ ರಜಾಕ್, ನಂದಕುಮಾರ್, ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕರಾದ ಮಹಮ್ಮದ್ ಅಲಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರವಾರದಲ್ಲಿ ನಾಳೆ ರಾಷ್ಟ್ರಪತಿ ಮುರ್ಮು ಸಬ್‌ಮರೀನ್‌ ಯಾನ
ಬಿಜೆಪಿ ರಾಜ್ಯಗಳಲ್ಲಿ ಯಾಕೆ ನೌಕರಿ ಸೃಷ್ಟಿ ಆಗಿಲ್ಲ : ಸಿದ್ದರಾಮಯ್ಯ