ಹಿರಣ್ಯಕೇಶಿ ನದಿಯಿಂದ ಘಟಪ್ರಭಾ ನದಿಗೆ 16 ಸಾವಿರ ಕ್ಯುಸೆಕ್‌ ನೀರು : 5 ಸೇತುವೆ ಜಲಾವೃತ; ಸಂಚಾರ ಅಸ್ತವ್ಯಸ್ತ

KannadaprabhaNewsNetwork |  
Published : Jul 22, 2024, 01:25 AM ISTUpdated : Jul 22, 2024, 12:20 PM IST
ಮೂಡಲಗಿ:  ತಾಲೂಕಿನ ಸುಣಧೋಳಿ ಸೇತುವೆ ಜಲಾವೃತ ಸಂಚಾರ ಸ್ಥಗಿತ. | Kannada Prabha

ಸಾರಾಂಶ

ಹಿರಣ್ಯಕೇಶಿ ನದಿಯಿಂದ ಘಟಪ್ರಭಾ ನದಿಗೆ ಸುಮಾರು 16 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿರುವುದರಿಂದ ಮೂಡಲಗಿ ತಾಲೂಕಿನ ಐದು ಸೇತುವೆಗಳು (ಬ್ರೀಡ್ಜ್‌ ಕಂ ಬ್ಯಾರೇಜ್) ಭಾನುವಾರ ಮುಳುಗಡೆಗೊಂಡು, ಸಂಚಾರ ಸ್ಥಗಿತಗೊಂಡಿದೆ.

  ಮೂಡಲಗಿ :  ಹಿರಣ್ಯಕೇಶಿ ನದಿಯಿಂದ ಘಟಪ್ರಭಾ ನದಿಗೆ ಸುಮಾರು 16 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿರುವುದರಿಂದ ಮೂಡಲಗಿ ತಾಲೂಕಿನ ಐದು ಸೇತುವೆಗಳು (ಬ್ರೀಡ್ಜ್‌ ಕಂ ಬ್ಯಾರೇಜ್) ಭಾನುವಾರ ಮುಳುಗಡೆಗೊಂಡು, ಸಂಚಾರ ಸ್ಥಗಿತಗೊಂಡಿದೆ.

ತಾಲೂಕಿನ ವಡೇರಹಟ್ಟಿ-ಉದಗಟ್ಟಿ, ಸುಣಧೋಳಿ-ಮೂಡಲಗಿ, ಹುಣಶ್ಯಾಳ-ಕಮಲದಿನ್ನಿ, ಹುಣಶ್ಯಾಳ ಪಿವೈ-ಮುನ್ಯಾಳ, ಡವಳೇಶ್ವರ- ಮಹಾಲಿಂಗಪುರ, ಅವರಾದಿ-ನಂದಗಾವ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಬಂದ್‌ ಆಗಿದ್ದು, ಜನರು ಪರದಾಡುವಂತಾಗಿದೆ.

ನದಿ ತೀರದ ಗ್ರಾಮಗಳ ಜನರಲ್ಲಿ ನದಿ ದಡದಕ್ಕೆ ತೇರಳದಂತೆ ಮೂಡಲಗಿ ತಾಲೂಕು ಆಡಳಿತ ಡಂಗೂರ ಸಾರಿಸಿದೆ. ಸುಣಧೋಳಿ ಸೇತುವೆಗೆ ಮೂಡಲಗಿ ತಹಸೀಲ್ದಾರ್‌ ಮಹಾದೇವ ಸನಮುರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುಜಾಂಗ್ರತೆಯಾಗಿ ಸೇತುವೆಯ ದಡದ ಎರಡು ಬದಿಯಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!