ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಹಡಲಗೇರಿ ರಸ್ತೆ ಮಾರ್ಗದಲ್ಲಿರುವ ನಿಯೋಜಿತ ಬಸ್ ಡಿಪೋ ಸರ್ಕಾರಿ ಖುಲ್ಲಾ ಜಾಗಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದಷ್ಟೆ ಅಲ್ಲದೇ ತಾಯಂದಿರು ತಮ್ಮ ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡುವುದು, ಕೆಎಸ್‌ಆರ್‌ಟಿಸಿಗೆ ಇನ್ನಷ್ಟು ಆದಾಯ ಬರುವಂತೆ ಮಾಡಲು ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.2012ರಲ್ಲಿ ಹಳೆ ಬಸ್ ನಿಲ್ದಾಣ ನೆಲಸಮ ಮಾಡಿ ಪ್ರಸ್ತುತ ಕೆಎಸ್‌ಆರ್‌ಟಿ ಬಸ್ ನಿಲ್ದಾಣದ ನೂತನ ಕಟ್ಟಡಕ್ಕೆ ಅಂದಿನ ಸಿಎಂ ಜಗದೀಶ ಶೆಟ್ಟರ್ ಶಂಕು ಸ್ಥಾಪನೆ ನೆರವೇರಿಸಿದ್ದರು. ಸ್ಮಾರ್ಟ್‌ಸಿಟಿ ಅಡಿ ಹೈಟೆಕ್ ಟಚ್ ಹಾಗೂ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಯಿತು. ಬಳಿಕ 2016ರಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೂತನ ಬಸ್ ನಿಲ್ದಾಣ ಲೋಕಾರ್ಪಣೆಗೊಳಿಸಿ ಪ್ರಯಾಣಿಕರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಲಾಗಿತ್ತು ಎಂದರು.ಅಧಿಕಾರ ಶಾಶ್ವತವಲ್ಲ, ನಾವು ಮಾಡಿದ ಅಭಿವೃದ್ಧಿ ಕಾರ್ಯಗಳು ಶಾಶ್ವತ. ಹೀಗಾಗಿ ನನ್ನ ಅಧಿಕಾರದ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಪಟ್ಟಣದಲ್ಲಿರುವ ಬಸ್ ನಿಲ್ದಾಣ ಮತ್ತಷ್ಟು ಅಭಿವೃದ್ಧಿ ಹೊಂದಿ ಜನರಿಗೆ ಇನ್ನಷ್ಟು ಅನುಕೂಲವಾಬೇಕೆಂಬ ಆಸೆಯಿಂದ ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ತಂದಿದ್ದೇನೆ. ಈ ಅನುದಾನದಲ್ಲಿ ಬಸ್ ನಿಲ್ದಾಣ ಹೊಸ ಸ್ಪರ್ಶ ಪಡೆಯುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಎನ್‌ಡಬ್ಲ್ಯುಕೆಎಸ್‌ಆರ್‌ಟಿಸಿ ಡಿಸಿ ನಾರಾಯಣಪ್ಪ ಕುರುಬರ, ಎಂಜಿನಿಯರ್ ಮಲ್ಲಿಕಾರ್ಜುನ ಬಿರಾದಾರ ಕಾಂಗ್ರೆಸ್ ಮುಖಂಡ ಗೋಪಿ ಮಡಿವಾಳರ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.ಜನರ ಸಮಸ್ಯೆ ಅರಿತ ಶಾಸಕ:
ಬಸ್ ನಿಲ್ದಾಣ 2.20 ಗುಂಟೆ, ಡಿಪೋ 3 ಎಕರೆ 14 ಗುಂಟೆ ವಿಸ್ತೀರ್ಣ ಹೊಂದಿದೆ. ಆದರೆ, ಬಸ್ ನಿಲ್ದಾಣ ಸ್ಥಳಾವಕಾಶ ಕಡಿಮೆವಿರುವ ಕಾರಣ ಬಂದು-ಹೋಗುವ ಬಸ್‌ಗಳಿಗೆ ತೀವ್ರ ತೊಂದರೆ ಉಂಟಾಗುತ್ತಿತ್ತು. ನಿಲ್ದಾಣದ ನೆಲಹಾಸು ಸಿಸಿ ರಸ್ತೆಯೂ ಸಂಪೂರ್ಣ ಒಡೆದ ಹಾಳಾಗಿ ಬಸ್ ನಿಲುಗಡೆಗೆ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿತ್ತು. ರಾಜ್ಯಕ್ಕೆ ಅಧಿಕ ಆದಾಯ ತಂದು ಕೊಡುವ ಬಸ್ ನಿಲ್ದಾಣದ ಈ ಪರಿಸ್ಥಿತಿ ಅರಿತ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್. ನಾಡಗೌಡ(ಅಪ್ಪಾಜಿ) ಬಸ್ ನಿಲ್ದಾಣ ನವೀಕರಣಕ್ಕೆ ಸರ್ಕಾರದಿಂದ ₹5 ಕೋಟಿ ಅನುದಾನ ತಂದು ಹೊಸ ಸ್ಪರ್ಶ ನೀಡುತ್ತಿದ್ದಾರೆ. ಇನ್ನೂ ಹೊಸ ಡಿಪೋ ನಿರ್ಮಾಣಕ್ಕೆ ಪಣತೊಟ್ಟು ಅದಕ್ಕೆ ಶ್ರಮಿಸುತ್ತಿದ್ದಾರೆ. ನಾಡಗೌಡ ಅವರ ಜನಪರ ಕಾಳಜಿ ಜನ ಮೆಚ್ಚುಗೆ ಗಳಿಸಿದೆ. ನಾಡಗೌಡರು ನಮ್ಮ ಶಾಸಕರಾಗಿದ್ದು ನಮ್ಮ ಭಾಗ್ಯ ಎಂಬುವುದು ಜನರ ಮನದಾಳದ ಮಾತು.ಬೆಳೆಯುತ್ತಿರುವ ಪಟ್ಟಣಕ್ಕೆ ಹೊಸ ಡಿಪೋ ಅವಶ್ಯಕವಾಗಿದೆ. ಹೀಗಾಗಿ ಹಡಲಗೇರಿ ರಸ್ತೆ ಮಾರ್ಗದಲ್ಲಿ ಹೊಸ ಡಿಪೋ ನಿರ್ಮಾಣ ಮಾಡಲು ಪ್ರಯತ್ನಗಳು ನಡೆದಿವೆ. ಈ ನಿಟ್ಟಿನಲ್ಲಿ ಈಗಾಗಲೇ ₹5 ಕೋಟಿ ಅನುದಾನ ಬಿಡುಗಡೆಗೊಂಡಿದ್ದು, ಇದಕ್ಕಾಗಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಈಗಿರುವ ಡಿಪೋದಲ್ಲಿ ಬೇಕಾಬಿಟ್ಟಿ ಬಳಸಲಾಗುತ್ತಿದೆ. ಅದೇಲ್ಲವನ್ನೂ ತೆರವುಗೊಳಿಸಿ ಗ್ಯಾರೇಜ್ ಹಾಗೂ ಚೇಂಬರ್ ಸೇರಿದಂತೆ ಇತರೆ ಅಗತ್ಯ ಕೋಠಡಿಗಳನ್ನು ಒಂದೇ ಕಡೆ ನಿರ್ಮಿಸಿ ಇನ್ನಷ್ಟು ಬಸ್‌ಗಳ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸುವುದು ಜತೆಗೆ ಹೂದೋಟವನ್ನೂ ಕೂಡ ನಿರ್ಮಿಸಲಾಗುವ ಮೂಲಕ ಮುಂದಿನ ದಿನಗಳಲ್ಲಿ ಬಸ್ ಹಾಗೂ ಟ್ರಾಫಿಕ್ ಸಮಸ್ಯೆ ಸೇರಿದಂತೆ ಎಲ್ಲವೂ ನಿಲ್ದಾಣವನ್ನು ಹೈಟೆಕ್ ಮಾದರಿ ನಿರ್ಮಿಸಲಾಗುವುದು.
-ಸಿ.ಎಸ್.ನಾಡಗೌಡ(ಅಪ್ಪಾಜಿ), ಶಾಸಕರು.