ಉದ್ಘಾಟನೆ.
ಪಟ್ಟಣದ ಪ್ರೌಢಶಾಲಾ ವಿಭಾಗದ ನೂತನ ಕಟ್ಟಡ ನಿರ್ಮಾಣಕ್ಕೆ ₹5 ಕೋಟಿ ಅನುದಾನ ಮಂಜೂರಾಗಿದ್ದು ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣವಾಗಲಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಶುಕ್ರವಾರ ಪಟ್ಟಣದ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿವೇಕ ಯೋಜನೆಯಡಿ ನೆಲ ಅಂತಸ್ತು ಮೊದಲನೇ ಅಂತಸ್ತಿನ ನಾಲ್ಕು ಕೊಠಡಿಗಳ ನೂತನ ಕಟ್ಟಡವನ್ನು ₹125 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದ್ದು ಹಾಗೂ ನಬಾರ್ಡ್ ಯೋಜನೆ ಅಡಿ ನೆಲ ಅಂತಸ್ತು ಮೊದಲನೇ ಅಂತಸ್ತು ನಾಲ್ಕು ಕೊಠಡಿಗಳು 158 ಲಕ್ಷ ರೂ ವೆಚ್ಚದಲ್ಲಿ ಎರಡು ಕಟ್ಟಡಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.ನಾನು ಇದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಯಾಗಿದ್ದು ಈಗ ಶಾಸಕನಾಗಿ ಕಾಲೇಜಿಗೆ ಎರಡು ನೂತನ ಕಟ್ಟಡಗಳನ್ನು ಕೊಡುಗೆಯಾಗಿ ನೀಡಲಾಗಿದೆ. ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳು ತಮ್ಮ ಕನಸನ್ನು ಕಟ್ಟಿಕೊಂಡು ವಿದ್ಯಾಭ್ಯಾಸಕ್ಕಾಗಿ ಕಾಲೇಜಿಗೆ ಬರುತ್ತಾರೆ. ಇದೊಂದು ಜ್ಞಾನ ಮಂದಿರವಾಗಿದೆ ಮುಂದೂ ಸಹ ಈ ಕಾಲೇಜಿನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಬರಲಿದ್ದಾರೆ ಅವರಿಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ದೊರಕಿಸುವುದು ನಮ್ಮ ಕರ್ತವ್ಯವಾಗಿದೆ. ಒಟ್ಟಾರೆಯಾಗಿ ಎರಡು ಕಟ್ಟಡಗಳಿಗೆ 283 ಲಕ್ಷ ರೂ ನೀಡಲಾಗಿದೆ ಇನ್ನು ಹೆಚ್ಚಿನ ಅಭಿವೃದ್ಧಿ ಆಗಬೇಕಿದ್ದು, ವಿಜ್ಞಾನ ವಿಭಾಗದವರಿಗೆ ಲ್ಯಾಬಿನ ಸಮಸ್ಯೆ ಇದ್ದಿತ್ತು ಈಗ ಮೂರು ಲ್ಯಾಬಿಗೆ ಹೆಚ್ಚಿನ ಹೊತ್ತು ನೀಡಲಾಗಿದೆ ಇದು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು
ಪ್ರೌಢಶಾಲಾ ವಿಭಾಗದ ನೂತನ ಕಟ್ಟಡ ನಿರ್ಮಾಣಕ್ಕಾಗಿ 5 ಕೋಟಿ ರೂ ಅನುದಾನ ಮಂಜೂರಾಗಿದ್ದು ನಾಲ್ಕು ಅಂತಸ್ತಿನ ಕಟ್ಟಡ ವಾಗಲಿದೆ.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಎಇಇ ಬಸವರಾಜನಾಯ್ಕ, ಕಾಲೇಜಿನ ಪ್ರಿನ್ಸಿಪಾಲ್ ತವರಾಜು. ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಗುತ್ತಿಗೆದಾರರಾದ ಕಂಸಾಗರ ಶೇಖರಪ್ಪ. ಗಿರೀಶ್. ಪ್ರಸನ್ನ ಮತ್ತಿತರರು ಇದ್ದರು.