ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅಲ್ಪ ಸಂಖ್ಯಾತ ಕಾಲೋನಿಗಳ ಸಮಗ್ರ ಅಭಿವೃದ್ಧಿ ಹಾಗೂ ಮೂಲಭೂತ ಸೌಲಭ್ಯಕ್ಕೆ ರಾಜ್ಯ ೫ ಕೋಟಿ ರು. ಅನುದಾನ ಮಂಜೂರು ಮಾಡಿದೆ.೨೦೨೩-೨೪ ನೇ ಸಾಲಿನಲ್ಲಿ ಸರ್ಕಾರದ ಆದೇಶ ಸಂಖ್ಯೆ ಎಂ.ಡಬ್ಲ್ಯೂಡಿ/೫೫೮/ಎಂಡಿಎಸ್/೨೦೨೩ ರೀತ್ಯ ೫೦೦ ಲಕ್ಷ ರು. ಮಂಜೂರು ಮಾಡಿದ್ದು, ಸದರಿ ಕಾಮಗಾರಿ ಕೈಗೆತ್ತಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಕಳೆದ ಜೂ.೬ ರಂದು ಪತ್ರ ಬರೆದಿದ್ದಾರೆ.
ಪಟ್ಟಣದ ೬ ನೇ ವಾರ್ಡಿನ ಚಾ.ನಗರ ಮುಖ್ಯ ರಸ್ತೆಯಿಂದ ಪೈಜುರ್ ರಹಮಾನ್ ಮನೆ ತನಕ ೨೫ ಲಕ್ಷ, ಮಹದೇವಪ್ರಸಾದ್ ನಗರದ ಇಬ್ರಾಹಿಂ ಮನೆಯಿಂದ ರಶೀದ್ ಮನೆ ತನಕ, ರಿಯಾಜ್ ಮನೆಯಿಂದ ಬಾಬು ಮನೆ ತನಕ, ಖೈಸರ್ ಮನೆಯಿಂದ ಆಶೀಪ್ ಮನೆ ತನಕ, ಇರ್ಫಾನ್ ಮನೆಯಿಂದ ಜಮೀರ್ ಮನೆ ತನಕ, ಹಬೀಬುಲ್ಲಾ ಮನೆಯಿಂದ ಮಸೀದಿ ತನಕ ತಲಾ ೨೫ ಲಕ್ಷ, ೨ ನೇ ವಾರ್ಡಿನ ಮಹಮ್ಮದ್ ಮನೆಯಿಂದ ಅಶ್ವಕ್ ಅಹಮದ್ ಮನೆ, ಅನೀಸ್ ಮನೆಯಿಂದ ಇಮ್ರಾನ್ ಮನೆ ತನಕ ತಲಾ ೨೫ ಲಕ್ಷ,೩ ನೇ ವಾರ್ಡಿನ ಬಿಲಾಲ್ ಮಸೀದಿಯಿಂದ ನಿಸಾರ್ ಮನೆ,ನಿಸಾರ್ ಮನೆಯಿಂದ ಜಾಫರ್ ಮನೆ, ಅಂಗನವಾಡಿಯಿಂದ ಖಲೀಲುಲ್ಲ ಮನೆ ತನಕ ತಲಾ ೨೫ ಲಕ್ಷ, ೧ ನೇ ವಾರ್ಡಿನ ಇರ್ಫಾನ್ ಮನೆಯಿಂದ ಖಾಲಿ ನಿವೇಶನ, ಅಬ್ದುಲ್ ರಜಾಕ್ ಮನೆಯಿಂದ ಜಮೀರ್ ಮನೆ, ಸದಾಖತುಲ್ಲಾ ಮನೆಯಿಂದ ಮನ್ಸೂರ್ ಮನೆ, ಅನ್ವರ್ ಪಾಶ ಮನೆಯಿಂದ ಕಾಶಿಫ್ ಮನೆ, ಮನ್ಸೂರ್ ಮನೆಯಿಂದ ಸುಹೇಲ್ ಮನೆ, ಅಂಗನವಾಡಿಯಿಂದ ಕೌಶರ್ ಮನೆ, ಡ್ರೈವರ್ ಹನೀಪ್ ಮನೆಯಿಂದ ಫೌಜಿಯ ಮನೆ ತನಕ ತಲಾ ೨೫ ಲಕ್ಷ ಅನುದಾನದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ ನಿರ್ಮಾಣವಾಗಲಿವೆ.ಪಟ್ಟಣದ ಜೊತೆಗೆ ತಾಲೂಕಿನ ತೆರಕಣಾಂಬಿ ಗ್ರಾಮದ ಮುಖ್ಯ ರಸ್ತೆಯಿಂದ ಮಸೀದಿ ತನಕ ಹಾಗೂ ತಾಲೂಕಿನ ಕಗ್ಗಳದಹುಂಡಿ ಗ್ರಾಮದ ಅಫ್ಜಲ್ ಪಾಶ ಮನೆಯಿಂದ ಸಗೀರ್ ಅಹಮದ್ ಮನೆ ತನಕ ತಲಾ ೨೫ ಲಕ್ಷದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ ನಿರ್ಮಾಣವಾಗಲಿವೆ.
ಪಟ್ಟಣದ ಮಹದೇವಪ್ರಸಾದ್ ನಗರಕ್ಕೆ ಅತೀ ಹೆಚ್ಚು ಕಾಮಗಾರಿಗೆ ಅನುದಾನವನ್ನು ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಅವರು ನೀಡಿದ್ದಾರೆ. ಅತೀ ಹೆಚ್ಚಾಗಿ ಅಲ್ಪ ಸಂಖ್ಯಾತರಿದ್ದರೂ ಕಡಿಮೆ ಅನುದಾನ ಹಂಚಿಕೆ ಮಾಡಿದ್ದಾರೆ. ಅನುದಾನ ಹಂಚಿಕೆಯಲ್ಲಿ ಶಾಸಕರು ತಾರತಮ್ಯ ಮಾಡಿದ್ದಾರೆ. -ಹೀನಾ ಕೌಶರ್, ಪುರಸಭೆ ಸದಸ್ಯರು