ಕನ್ನಡಪ್ರಭ ವಾರ್ತೆ ದಾವಣಗೆರೆ
ಕೃಷಿ ಕಾರ್ಮಿಕರ ಹುಡುಕಿ, ಅವರಿಗೆ ಹೆಚ್ಚಿನ ಕೂಲಿ ಕೊಟ್ಟು ಕೃಷಿ ಮಾಡಬೇಕಾದ ಪರಿಸ್ಥಿತಿ ಇಂದಿನದು. ಹೀಗಿರುವಾಗ ಮೆಕ್ಕೆಜೋಳದ ಹೊಲದಲ್ಲಿ ಟ್ರ್ಯಾಕ್ಟರ್ ಮೂಲಕ 5 ಎಡೆಕುಂಟೆ ಹೊಡೆಯುವ ಮೂಲಕ ತಾಲೂಕಿನ ಗುಮ್ಮನೂರು ಗ್ರಾಮದ ಪೂಜಾರ ರಾಜು ಮತ್ತು ಕುಟುಂಬ ಕೂಲಿ ಹಣ ಉಳಿತಾಯದ ದಾರಿ ಕಂಡುಕೊಂಡು ಗಮನ ಸೆಳೆದಿದೆ.ಗುಮ್ಮನೂರು ರೈತ ಪೂಜಾರ ರಾಜು ತಮ್ಮ ಹೊಲದಲ್ಲಿ ಟ್ರ್ಯಾಕ್ಟರ್ ಮೂಲಕ 5 ಎಡೆ ಕುಂಟೆ ಹೊಡೆದು, ಉಳುಮೆ ಮಾಡಿದ್ದಾರೆ. ಪ್ರಸ್ತುತ ಡೀಸೆಲ್ ದರ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಬಿತ್ತನೆ ಬೀಜ, ಗೊಬ್ಬರ, ಕೂಲಿ ಕಾರ್ಮಿಕರ ದರ ಹೆಚ್ಚಳ ಹೀಗೆ ಎಲ್ಲದರ ಬೆಲೆ ಏರಿಕೆ ಆಗುತ್ತಲೇ ಇದೆ. ಬೇಸಾಯದ ದರವೂ ₹2500 ಇದೆ. ಒಂದು ದಿನ ಬೇಸಾಯಕ್ಕೆ ಅಷ್ಟು ಹಣ ಕೊಡಬೇಕಾದ ಅನಿವಾರ್ಯತೆ ರೈತರದು. ಹಾಗಾಗಿ, ರಾಜು ಪೂಜಾರ ಕುಟುಂಬ ಟ್ರ್ಯಾಕ್ಟರ್‌ನಲ್ಲಿ ತಮ್ಮ ಹೊಲಯದಲ್ಲಿ ಎಡೆ ಕುಂಟೆ ಹೊಡೆದು ಹಣ ಉಳಿಸಿದೆ. ಹೀಗೆ ಟ್ಯಾಕ್ಟರ್ ಬಳಸಿ 10ರಿಂದ 15 ಎಕರೆ ಎಡೆ ಕುಂಟೆ ಹೊಡೆಯಬಹುದು ಎಂದು ರಾಜು ಪೂಜಾರ ವಿಶ್ವಾಸದಿಂದ ಹೇಳಿದ್ದಾರೆ.
ಹೊಲದಲ್ಲಿ ಬೀಜ ಹಾಕಿದ ನಂತರ ಬೀಜ ಮೊಳೆಯೊಕೆ ಒಡೆದು ಸಸಿಗಳು ಹುಟ್ಟಿರುತ್ತವೆ. ಈ ಸಂದರ್ಭ ಕಳೆ ಬೆಳೆಯದಿರಲು, ಬೆಳೆದ ಬೆಳೆ ಹುಲುಸಾಗಿ ಬೆಳೆಯಲು ಎಡೆಕುಂಟೆ ಪದ್ಧತಿ ಅನುಸರಿಸಲಾಗುತ್ತದೆ. ಈ ರೀತಿಯ ಕೃಷಿ ಕಾರ್ಯಗಳಿಗೆ ಕೂಲಿಯಾಗಳುಗಳು ಅನಿವಾರ್ಯ. ಈಗಿನ ಪರಿಸ್ಥಿತಿಯಲ್ಲಿ ದುಡ್ಡು ಕೊಟ್ಟರೂ ಕೂಲಿಗಳು ಸಿಗುವುದಿಲ್ಲ. ಸಿಕ್ಕರೆ ಅವರ ಕೂಲಿ ದರ ಗಗನಕ್ಕೇರಿರುತ್ತದೆ. ಹೀಗಾಗಿ ಕೆಲವು ರೈತರಂತೂ ಹೊಲದಲ್ಲಿ ಉಳುಮೆ ಮಾಡುವುದನ್ನೇ ಕೈ ಬಿಟ್ಟಿರುವ ನಿದರ್ಶನಗಳಿವೆ.ಇಂಥ ಸಂದರ್ಭದಲ್ಲಿ ಗುಮ್ಮನೂರು ಯುವ ರೈತ ಪೂಜಾರ ರಾಜು ಟ್ರ್ಯಾಕ್ಟರ್ ಬಳಸಿ ಎಡೆ ಕುಂಟೆ ಹೊಡೆದು ಕೃಷಿ ಮಾಡಿರುವ ಉಪಾಯ ಇತರೆ ರೈತರಿಗೆ ಮಾದರಿಯಾಗಿದೆ.