ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಗೆ ಅರ್ಧ ತೊಲೆ ಬಂಗಾರ ಬಹುಮಾನ!

KannadaprabhaNewsNetwork |  
Published : Feb 05, 2026, 03:00 AM IST
ಶಿಗ್ಗಾಂವಿ ತಾಲೂಕಿನ ಹನುಮರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಜ್ಯೋತಿ ಸೋ. ಶಿಗ್ಗಾಂವ ಅವರಿಗೆ ಗೋಪಾಲಕೃಷ್ಣ ಆಡಿನ ಅರ್ಧ ತೊಲೆ ಬಂಗಾರ ನೀಡಿದರು. | Kannada Prabha

ಸಾರಾಂಶ

ತಾವು ನೀಡಿದ್ದ ವಾಗ್ದಾನದಂತೆ ಸಣ್ಣ ವ್ಯಾಪಾರಸ್ಥ ಹಾಗೂ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಆಡಿನ ಅವರು ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಶಿಗ್ಗಾಂವಿ ತಾಲೂಕಿನ ಹನುಮರಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಗೆ ಅರ್ಧ ತೊಲೆ ಬಂಗಾರ ನೀಡಿದರು.

ಶಿಗ್ಗಾಂವಿ: ತಾವು ನೀಡಿದ್ದ ವಾಗ್ದಾನದಂತೆ ಸಣ್ಣ ವ್ಯಾಪಾರಸ್ಥ ಹಾಗೂ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಆಡಿನ ಅವರು ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ತಾಲೂಕಿನ ಹನುಮರಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಗೆ ಅರ್ಧ ತೊಲೆ ಬಂಗಾರ ನೀಡಿದರು.

ತಾಲೂಕಿನ ಹನುಮರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಶೇ. ೯೦ ಅಂಕ ಪಡೆದು ಪ್ರಥಮ ಸ್ಥಾನ ಪಡೆದ ಕಡುಬಡತನ ಕುಟುಂಬದ ಜ್ಯೋತಿ ಸೋ. ಶಿಗ್ಗಾಂವ ಅವಳಿಗೆ ನೀಡಿ, ಅಭಿನಂದಿಸಿದರು. ೨೦೨೪-೨೫ರಲ್ಲಿ ಅವರು ಬಹುಮಾನ ನೀಡುವುದಾಗಿ ವಾಗ್ದಾನ ಮಾಡಿದ್ದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಈ ಕುರಿತು ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಶಾಲೆಗೆ ಅಗತ್ಯವಿದ್ದ ಒಂದು ಗುಂಟೆ ಜಾಗ ಖರೀದಿಗೆ ಗ್ರಾಮಸ್ಥರು, ಮೇಲುಸ್ತುವಾರಿ ಸಮಿತಿ ಸದಸ್ಯರು ₹3 ಲಕ್ಷಕ್ಕೂ ಅಧಿಕ ದೇಣಿಗೆ ಸಂಗ್ರಹಿಸಿದ್ದು, ಈ ಕುರಿತು ಹರ್ಷ ವ್ಯಕ್ತಪಡಿಸಿದರು. ಶಿಕ್ಷಣಪ್ರೇಮಿ ಗುರುನಾಥ ನಿಂ. ಅಣ್ಣಿಗೇರಿ ಅವರು, ಗ್ರಾಮದ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಪೈಕಿ ಕಡುಬಡತನ ಹಿನ್ನೆಲೆಯ ೫ ವಿದಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸಿ, ಅವರ ಶೈಕ್ಷಣಿಕ ವೆಚ್ಚ ಭರಿಸುವುದಾಗಿ ಹೇಳಿದರು. ಗ್ರಾಮಸ್ಥರು ಸಿಸಿ ಕ್ಯಾಮೆರಾ, ಗ್ರೀನ್ ಬೋರ್ಡ್‌ ಮತ್ತು ಮೈಕ್ ಟ್ರ‍್ಯಾಲಿ ದೇಣಿಗೆಯಾಗಿ ನೀಡಿದ್ದಾರೆ.

ತಾಪಂ ಕಾರ್ಯನಿರ್ವಾಹಕ ಮಂಜುನಾಥ ಸಾಳುಂಕೆ, ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಅರುಣಗೌಡ ಹುಡೇದಗೌಡ್ರ, ಸವಣೂರು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಬಸವರಾಜ ಹೊಸಮನಿ, ಭೂದಾನಿ ಶಿವಾಜಿರಾವ್‌ ಶಿಂಧೆ, ತಾಪಂನ ಪ್ರಕಾಶ ಔಂದಕರ, ಎಸ್‌ಡಿಎಂಸಿ ಅಧ್ಯಕ್ಷ ರಾಜೇಶ ದೊಡ್ಡಮನಿ, ಶೇಖಪ್ಪ ನೀರಲಗಿ, ಶಿಲ್ಪಾ ಫ. ಗುಡ್ಡನಗೌಡ್ರ, ನೀಲಮ್ಮ ಆಡಿನ, ಕಮಲವ್ವ ಹ. ಪಾಟೀಲ, ರೇವಣಸಿದ್ದಪ್ಪ ಆಡಿನ, ಶಂಭನಗೌಡ ಮೇಲಿನಮನಿ, ಎ.ಡಿ. ಮುಲ್ಲಾ ಭಾಗವಹಿಸಿದ್ದರು.

ಹನುಮರಹಳ್ಳಿ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಊರ ಹಬ್ಬದಂತೆ ಸಂಭ್ರಮಿಸಿದರು. ಮುಖ್ಯ ಶಿಕ್ಷಕ ಸಂಜೀವ ಪೂಜಾರ ಸ್ವಾಗತಿಸಿದರು. ಶಕುಂತಲಾ ಸಾಲಿಮಠ ವಂದಿಸಿದರು.

ನಮ್ಮೂರು ಹನುಮರಹಳ್ಳಿ ಗ್ರಾಮದ ಮಕ್ಕಳಲ್ಲಿ ಓದುವ ಹುಮ್ಮಸ್ಸು ಮತ್ತು ಸ್ಪರ್ಧಾತ್ಮಕ ಮನೋಭಾವನೆ ಬೆಳೆದು, ದೊಡ್ಡಮಟ್ಟದಲ್ಲಿ ಗುರುತಿಸಿಕೊಂಡರೆ ನನ್ನ ಕನಸು ಸಾರ್ಥಕವಾಗುವುದು. ನನ್ನ ಕಿರಾಣಿ ದುಡಿಮೆಯಲ್ಲಿ ಹಣ ಉಳಿಸಿ, ಈ ಕಾರ್ಯಕ್ಕೆ ಮೀಸಲಿಟ್ಟೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ರೀತಿಯ ಪ್ರೋತ್ಸಾಹ ನೀಡುವ ಯೋಚನೆಯಲ್ಲಿದ್ದೇನೆ ಎಂದು ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಆಡಿನ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾದಾಪುರ ಸೋಮವಾರಪೇಟೆ ಹೋಬಳಿ ಕೇಂದ್ರದಿಂದ ಬೇರ್ಪಡಿಸಿ
ಸಮಾನತೆ ಸಾರಿದ ಮಡಿವಾಳ ಮಾಚಿದೇವ