ಶಂಕರ ಭಾರತಿ ಗೋಶಾಲೆಗೆ ₹5 ಲಕ್ಷ ಹಣ

KannadaprabhaNewsNetwork |  
Published : Jun 18, 2025, 11:49 PM IST
೧೮ಬಿಹೆಚ್‌ಆರ್ ೩: ಬಾಳೆಹೊನ್ನೂರು ಸಮೀಪದ ಹುಯಿಗೆರೆಯ ಶಂಕರಭಾರತಿ ಗೋ ಶಾಲೆಯ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ರೂ.೫ ಲಕ್ಷ ಹಣವನ್ನು ಶೃಂಗೇರಿ ಶಾರದಾ ಪೀಠದಿಂದ ಜಗದ್ಗುರು ಶ್ರೀ ವಿಧುಶೇಖರ ಭಾರತಿ ತೀರ್ಥ ಮಹಾ ಸ್ವಾಮೀಜಿ ನೀಡಿದರು.  | Kannada Prabha

ಸಾರಾಂಶ

ಬಾಳೆಹೊನ್ನೂರು, ಹುಯಿಗೆರೆಯ ಶಂಕರಭಾರತಿ ಗೋ ಶಾಲೆಗೆ ಹೆಚ್ಚುವರಿ ಕಟ್ಟಡ, ಗೋದಾಮು ನಿರ್ಮಾಣಕ್ಕೆ ಶೃಂಗೇರಿ ಶಾರದಾ ಪೀಠದಿಂದ ₹5 ಲಕ್ಷ ಹಣವನ್ನು ಆಶೀರ್ವಾದ ರೂಪದಲ್ಲಿ ನೀಡಲಾಗಿದೆ ಎಂದು ಗೋಶಾಲೆ ಮುಖ್ಯಸ್ಥ ಪ್ರವೀಣ್ ಖಾಂಡ್ಯ ತಿಳಿಸಿದ್ದಾರೆ.

ಶ್ರೀ ವಿಧುಶೇಖರ ಭಾರತಿ ತೀರ್ಥರಿಂದ ಪ್ರವೀಣ್ ಖಾಂಡ್ಯ ಸ್ವೀಕಾರ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಹುಯಿಗೆರೆಯ ಶಂಕರಭಾರತಿ ಗೋ ಶಾಲೆಗೆ ಹೆಚ್ಚುವರಿ ಕಟ್ಟಡ, ಗೋದಾಮು ನಿರ್ಮಾಣಕ್ಕೆ ಶೃಂಗೇರಿ ಶಾರದಾ ಪೀಠದಿಂದ ₹5 ಲಕ್ಷ ಹಣವನ್ನು ಆಶೀರ್ವಾದ ರೂಪದಲ್ಲಿ ನೀಡಲಾಗಿದೆ ಎಂದು ಗೋಶಾಲೆ ಮುಖ್ಯಸ್ಥ ಪ್ರವೀಣ್ ಖಾಂಡ್ಯ ತಿಳಿಸಿದ್ದಾರೆ.ಹುಯಿಗೆರೆಯ ಶಂಕರಭಾರತಿ ಗೋ ಶಾಲೆ ಕಳೆದ ಎರಡೂವರೆ ವರ್ಷದಿಂದ ಗೋವುಗಳ ಸಂರಕ್ಷಣೆ ಕೆಲಸ ಮಾಡಿಕೊಂಡು ಬರುತ್ತಿದ್ದು, ಶಾರದಾ ಪೀಠದ ಉಭಯ ಜಗದ್ಗುರುಗಳ ಆಶೀರ್ವಾದದಿಂದ ಈಗಾಗಲೇ 2 ಸೂರು ನಿರ್ಮಿಸಿದ್ದು, ಇದೀಗ ಗೋ ಶಾಲೆ ಹೆಚ್ಚುವರಿ ಕಟ್ಟಡ ಹಾಗೂ ಗೋದಾಮಿಗೆ ₹5 ಲಕ್ಷ ವನ್ನು ಜಗದ್ಗುರು ಶ್ರೀ ವಿಧುಶೇಖರ ಭಾರತಿ ತೀರ್ಥ ಸ್ವಾಮೀಜಿ ನೀಡಿದ್ದಾರೆ.

ಗೋಶಾಲೆಯಲ್ಲಿ ಪ್ರಸ್ತುತ 200ಕ್ಕೂ ಹೆಚ್ಚು ಗೋವುಗಳನ್ನು ಸಲಹುತ್ತಿದ್ದು, ಸಮಾಜ ನಮ್ಮ ಮೇಲೆ ವಿಶ್ವಾಸವಿಟ್ಟು ಪ್ರೋತ್ಸಾಹ ನೀಡುತ್ತಿದೆ. ಗೋಶಾಲೆ ಪ್ರತಿ ಬೆಳವಣಿಗೆಯಲ್ಲಿ ಖುದ್ದು ಶ್ರೀಮಠದ ಹಿರಿಯರಾದ ಕೃಷ್ಣಮೂರ್ತಿ ಪರಿಶೀಲಿಸಿ ಮಾರ್ಗದರ್ಶನ ನೀಡುತ್ತಿದ್ದಾರೆ. ಹಿಂದೂ ಸಮಾಜದ ಸಹಕಾರದೊಂದಿಗೆ ಗೋಮಾತೆ ಸಂರಕ್ಷಣೆ ಕೆಲಸ ಮಾಡಲಾಗುತ್ತಿದೆ. ಗೋವು ಕೇವಲ ಭಾವನಾತ್ಮಕ ಧಾರ್ಮಿಕ ನಂಬಿಕೆ ಅಲ್ಲ. ವೈಜ್ಞಾನಿಕವಾಗಿ ಪರಿಸರಕ್ಕೆ ಅತ್ಯಂತ ಅಗತ್ಯವಾದ ಜೀವಿ, ರೈತರ ಬೆನ್ನೆಲುಬು. ಇಂದಿನ ಬಹುತೇಕ ಪರಿಸರ ಸಮಸ್ಯೆಗಳಿಗೆ ಗೋವು ಉತ್ತರ ನೀಡುವ ಸಾಮರ್ಥ್ಯ ಹೊಂದಿದೆ. ಹಾಗಾಗಿ ಸ್ವಾರ್ಥ ಭಾವ ಬಿಟ್ಟು ಗೋವನ್ನು ಸಂರಕ್ಷಣೆ ಮಾಡಬೇಕಿದೆ. ಸಮಾಜದಲ್ಲಿ ಗೋವು ಮಾತೆಯಾಗಬೇಕು ಹೊರತು ಅನಾಥವಾಗಬಾರದು. ಗೋವು ದೇಶದ ಸಂಪತ್ತು ಆಗಬೇಕೆ ಹೊರತು, ವ್ಯಾಪಾರದ ವಸ್ತುವಾಗಬಾರದು. ಶ್ರೀ ಶಂಕರರು ಹೇಳಿದಂತೆ ಜಗತ್ತಿಗೆಲ್ಲ ಯಾರು ತಾಯಿ ಎಂದರೆ ಗೋವು ಮಾತೆಯಾಗಿ ಪೂಜಿತಳು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು. ೧೮ಬಿಹೆಚ್‌ಆರ್ ೩:

ಬಾಳೆಹೊನ್ನೂರು ಸಮೀಪದ ಹುಯಿಗೆರೆಯ ಶಂಕರಭಾರತಿ ಗೋ ಶಾಲೆಯ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ₹೫ ಲಕ್ಷ ಹಣವನ್ನು ಶೃಂಗೇರಿ ಶಾರದಾ ಪೀಠದಿಂದ ಜಗದ್ಗುರು ಶ್ರೀ ವಿಧುಶೇಖರ ಭಾರತಿ ತೀರ್ಥ ಸ್ವಾಮೀಜಿ ನೀಡಿದರು. ಗೋ ಶಾಲೆ ಮುಖ್ಯಸ್ಥ ಪ್ರವೀಣ್ ಖಾಂಡ್ಯ, ಶೃತಿ ಪ್ರವೀಣ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ