ಬ್ಯಾಡಗಿ ನ್ಯಾಯವಾದಿಗಳ ಸಂಘವು ಪಟ್ಟಣದಲ್ಲಿ ಪಕ್ಷಾತೀತವಾಗಿ ಕಾರ್ಯನಿರ್ವಹಿಸುತ್ತಿದೆ. ಸಾರ್ವತ್ರಿಕ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಾಮಾಜಿಕ ಕಳಕಳಿ ಹೊಂದಿದೆ
ಬ್ಯಾಡಗಿ: ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ವಕೀಲರ ಕಲ್ಯಾಣ ನಿಧಿ ಟ್ರಸ್ಟ್‌ಗೆ ಪ್ರತಿವರ್ಷ ₹5 ಲಕ್ಷ ಅನುದಾನ ನೀಡುವುದಾಗಿ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು. ಬುಧವಾರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ನಿರ್ಮಿಸಿದ ವಾಹನ ನಿಲುಗಡೆ ಶೆಲ್ಟರ್ ಉದ್ಘಾಟನಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ನ್ಯಾಯವಾದಿಗಳ ಸಂಘವು ಪಟ್ಟಣದಲ್ಲಿ ಪಕ್ಷಾತೀತವಾಗಿ ಕಾರ್ಯನಿರ್ವಹಿಸುತ್ತಿದೆ. ಸಾರ್ವತ್ರಿಕ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಾಮಾಜಿಕ ಕಳಕಳಿ ಹೊಂದಿದೆ ಎಂದರು.ನಮ್ಮದೂ ಹೊಣೆಗಾರಿಕೆ ಇದೆ: ನ್ಯಾಯಾಲಯಗಳ ಅವರಣದಲ್ಲಿ ಬೇಕು ಬೇಡಗಳು ಸೇರಿದಂತೆ ಇಡೀ ಆವರಣದ ನಿರ್ವಹಣೆ ವಿಚಾರದಲ್ಲಿ ನಮ್ಮದೂ ಜವಾಬ್ದಾರಿ ಇದೆ. ಈ ನಿಟ್ಟಿನಲ್ಲಿ ವಕೀಲರ ಸಂಘದ ನೆಲಮಹಡಿ(ಗ್ರೌಂಡ ಫ್ಲೋರ್) ಕಟ್ಟಡ ಸೋರುತ್ತಿದೆ ಎಂಬ ಮಾಹಿತಿ ಲಭ್ಯವಿದ್ದು, ಮೊದಲ ಮಹಡಿ(ಫಸ್ಟ್ ಫ್ಲೋರ್) ನಿರ್ಮಾಣಕ್ಕೆ ಬೇಡಿಕೆಯನ್ನೂ ಇಟ್ಟಿದ್ದಾರೆ. ಬರುವ ದಿನಗಳಲ್ಲಿ ಇದನ್ನೂ ಪರಿಗಣಿಸಿ ಮೊದಲ ಮಹಡಿ ಕಟ್ಟಡ ನಿರ್ಮಾಣಕ್ಕೆ ಮುಂದಾಗುವುದಾಗಿ ತಿಳಿಸಿದರು.ಇನ್ನಷ್ಟು ಅನುದಾನ ಬೇಕು: ಇದಕ್ಕೂ ಮುನ್ನ ಶೆಲ್ಟರ್ ಉದ್ಘಾಟಿಸಿದ ಜಿಲ್ಲಾ ಸತ್ರ ನ್ಯಾಯಾಧೀಶರಾದ ಶ್ರೀ ಜಿ.ಎಲ್. ಲಕ್ಷ್ಮೀನಾರಾಯಣ ಮಾತನಾಡಿ, ವಾಹನ ನಿಲುಗಡೆ ಶೆಲ್ಟರ ನಿರ್ಮಿಸಿದ್ದು ಸ್ವಾಗತಾರ್ಹ. ನ್ಯಾಯಾಲಯದ ಆವರಣಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಆಡಳಿತಾರೂಢ ಸರ್ಕಾರಗಳು ಬದ್ಧತೆ ತೋರಿಸಬೇಕಾಗಿದೆ. ಜಿಲ್ಲೆಯ ಬಹಳಷ್ಟು ನ್ಯಾಯಾಲಯಗಳು ಮಳೆಗಾಲದಲ್ಲಿ ಸೋರುತ್ತಿರುವ ಕುರಿತು ಮಾಹಿತಿ ಇದ್ದು, ಇದೇ ಕಾರಣಕ್ಕೆ ಕಟ್ಟಡದ ಚಾವಣಿಗಳನ್ನು ಸುರಕ್ಷಿತಗೊಳಿಸಬೇಕು ಮತ್ತು ಈಗಿರುವ ಶೆಲ್ಟರ್ ಜತೆಗೆ ಇನ್ನಷ್ಟು ವಾಹನಗಳ ನಿಲುಗಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಜಿ. ಶಿವಳ್ಳಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಮೋದ್ ಮುತಾಲಿಕ ದೇಸಾಯಿ, ಬ್ಯಾಡಗಿ ಹಿರಿಯ ದಿವಾಣಿ ನ್ಯಾಯಾಧೀಶರಾದ ಅಮೂಲ್ ಜೆ. ಹಿರೇಕುಡಿ, ದಿವಾಣಿ ನ್ಯಾಯಾಧೀಶರಾದ ಸುರೇಶ್ ವಗ್ಗನವರ ಉಪಸ್ಥಿತರಿದ್ದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಂಕರ್ ಬಾರ್ಕಿ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಬಿ.ಜಿ. ಹಿರೇಮಠ ಕಾರ್ಯದರ್ಶಿ ಎಂ.ಪಿ. ಹಂಜಗಿ ಸಹ ಕಾರ್ಯದರ್ಶಿ ಎನ್.ಬಿ. ಬಳೆಗಾರ ಹಾಗೂ ಹಿರಿಯ ವಕೀಲರಾದ ಪಿ.ಆರ್. ಮಠದ, ವಿ.ಎಸ್. ಕಡಗಿ ಎಫ್.ಎಂ. ಮುಳುಗುಂದ, ಪ್ರಭು ಶೀಗಿಹಳ್ಳಿ, ಎಂ.ಜೆ. ಮುಲ್ಲಾ, ರಾಜು ಶಿಡೇನೂರ, ಭಾರತಿ ಕುಲ್ಕರ್ಣಿ ಸೇರಿದಂತೆ ನ್ಯಾಯವಾದಿಗಳ ಸಂಘದ ಸದಸ್ಯರು ಹಾಗೂ ನ್ಯಾಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.