ಕನ್ನಡಪ್ರಭ ವಾರ್ತೆ ಪಾಂಡವಪುರ
ಬಳಿಕ ಮಾತನಾಡಿದ ಡಾ.ಎನ್.ಎಸ್.ಇಂದ್ರೇಶ್, ಐತಿಹಾಸಿಕ ಕೆರೆತೊಣ್ಣೂರು ಗ್ರಾಮದ ಕೆರೆಪಕ್ಕದ ಬೆಟ್ಟದ ಮೇಲಿರುವ ಐತಿಹಾಸಿಕ ಹುತ್ತದ ತಿಮ್ಮಪ್ಪ ದೇವಸ್ಥಾನವು ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಜತೆಗೂಡಿ ಜೀರ್ಣೋದ್ಧಾರ ಮಾಡುತ್ತಿದ್ದಾರೆ. ಗ್ರಾಮಸ್ಥರ ಮನವಿಗೆ ಸ್ಪಂದಿಸಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ವೈಯಕ್ತಿಕವಾಗಿ 5 ಲಕ್ಷ ರು. ನೀಡಿದ್ದೇನೆ ಎಂದರು.
ಗ್ರಾಮಸ್ಥರು ಜೊತೆಗೂಡಿ ದೇವಸ್ಥಾನ ಜೀರ್ಣೋದ್ಧಾರಗೊಳಿಸಿ ಭಕ್ತರು, ದಾನಿಗಳು ನೀಡುವ ಹಣವನ್ನು ಸಂಗ್ರಹಿಸಿ ದೇವಸ್ಥಾನ ನಿರ್ಮಾಣ ಮಾಡಬೇಕು. ಹಣ ಸಾಲದೆ ಇದ್ದರೆ ಮತ್ತಷ್ಟು ಸಹಕಾರ ನೀಡುತ್ತೇನೆ. ಗ್ರಾಮಸ್ಥರು ಆತಂಕ ಪಡುವುದು ಬೇಡ. ದೇವಸ್ಥಾನದ ನಿರ್ಮಾಣದ ಕೆಲಸ ಬರದಿಂದ ಸಾಗಲಿ ಎಂದು ಹಾರೈಸಿದರು.ಇದೇ ವೇಳೆ ಡಾ.ಎನ್.ಎಸ್.ಇಂದ್ರೇಶ್ ಅವರು ದೇವಸ್ಥಾನ ನಿರ್ಮಾಣಕ್ಕೆ ನೀಡಿದ ಸಹಕಾರಕ್ಕಾಗಿ ಗ್ರಾಮಸ್ಥರು ಅಭಿನಂದಿಸಿದರು. ಬಿಜೆಪಿ ತಾಲೂಕು ಅಧ್ಯಕ್ಷ ನೀಲನಹಳ್ಳಿ ಧನಂಜಯ್ ಸೇರಿದಂತೆ ಗ್ರಾಮಸ್ಥರು, ಮುಖಂಡರು ಹಾಜರಿದ್ದರು.
ಮಂಡ್ಯ: ನಗರದ ಗಾಂಧಿ ಭವನದಲ್ಲಿ ನಡೆದ ತಾಲೂಕಿನ ಹೊಳಲು ಗ್ರಾಮದ ಸ್ಪಂದನ ಇಂಟರ್ ನ್ಯಾಷನಲ್ ಸ್ಕೂಲ್‌ನ ಶಾಲಾ ವಾರ್ಷಿಕೋತ್ಸವದಲ್ಲಿ ಮಕ್ಕಳ ನೃತ್ಯ ಪ್ರದರ್ಶನ ಗಮನ ಸೆಳೆಯಿತು.ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಹೊಳಲು ಗ್ರಾಪಂ ಅಧ್ಯಕ್ಷೆ ರಮ್ಯಾ ಚೇತನ್ ಮಾತನಾಡಿ, ಸ್ಕೂಲ್ ನಲ್ಲಿ ಕಡಿಮೆ ದರದಲ್ಲಿ ಶಿಕ್ಷಣ ನೀಡುವ ಮೂಲಕ ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡಿರುವುದು ಮಾದರಿಯಾಗಿದೆ ಎಂದರು.