5 ವಿದ್ಯಾರ್ಥಿಗಳಿಗೆ ಬ್ಲಾಕ್‌ಬೆಲ್ಟ್ ಪ್ರದಾನ

KannadaprabhaNewsNetwork |  
Published : Oct 07, 2025, 02:00 AM IST
ನಗರದ ಇಂಡಿಯನ್ ಕರಾಟೆ ಕ್ಲಬ್, ಜಿಲ್ಲಾ ಕ್ರೀಡಾ ಕರಾಟೆ ಸಂಘಟನೆಯ 5 ವಿದ್ಯಾರ್ಥಿಗಳಿಗೆ ಬ್ಲಾಕ್ ಬೆಲ್ಟ್ ಪ್ರದಾನ ಮಾಡಲಾಯಿತು.  | Kannada Prabha

ಸಾರಾಂಶ

ನಗರದ ಇಂಡಿಯನ್ ಕರಾಟೆ ಕ್ಲಬ್, ಜಿಲ್ಲಾ ಕ್ರೀಡಾ ಕರಾಟೆ ಸಂಘಟನೆಯ 5 ವಿದ್ಯಾರ್ಥಿಗಳಿಗೆ ಬ್ಲಾಕ್ ಬೆಲ್ಟ್ ಪ್ರದಾನ ಮಾಡಲಾಯಿತು. ಡಾ.ಜೆ.ಟಿ.ಸಿಮಂಡ್ಸ್ ಹಾಲ್‌ನಲ್ಲಿ ಕರಾಟೆಯ ಬೆಲ್ಟ್ ಪರೀಕ್ಷೆ ನಡೆಯಿತು. ಈ ಪರೀಕ್ಷೆಯಲ್ಲಿ ಒಟ್ಟು 152 ಕಲರ್ ಬೆಲ್ಟ್ ಕರಾಟೆಪಟುಗಳು ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ನಗರದ ಇಂಡಿಯನ್ ಕರಾಟೆ ಕ್ಲಬ್, ಜಿಲ್ಲಾ ಕ್ರೀಡಾ ಕರಾಟೆ ಸಂಘಟನೆಯ 5 ವಿದ್ಯಾರ್ಥಿಗಳಿಗೆ ಬ್ಲಾಕ್ ಬೆಲ್ಟ್ ಪ್ರದಾನ ಮಾಡಲಾಯಿತು. ಡಾ.ಜೆ.ಟಿ.ಸಿಮಂಡ್ಸ್ ಹಾಲ್‌ನಲ್ಲಿ ಕರಾಟೆಯ ಬೆಲ್ಟ್ ಪರೀಕ್ಷೆ ನಡೆಯಿತು. ಈ ಪರೀಕ್ಷೆಯಲ್ಲಿ ಒಟ್ಟು 152 ಕಲರ್ ಬೆಲ್ಟ್ ಕರಾಟೆಪಟುಗಳು ಭಾಗವಹಿಸಿದ್ದರು.

ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಟಾಪ್ ಐದು ಬ್ಲಾಕ್ ಬೆಲ್ಟ್ ವಿದ್ಯಾರ್ಥಿಗಳಾದ ಸಮರ್ಥ ನೆಸರೇಕರ, ಸಂಜನಾ ನೆಸರೇಕರ, ಕಾರ್ತಿಕ ವಡ್ಜೆ, ಅನುಶ್ರೀ ಮನವಾಡ್ಕರ ಮತ್ತು ಅಕುಲ ಖೋತ ಇವರಿಗೆ ಬ್ಲಾಕ್ ಬೆಲ್ಟ್ ನೀಡಲಾಯಿತು. ಈ ಕಾರ್ಯಕ್ರಮವು ಮುಖ್ಯ ಅತಿಥಿಗಳಾಗಿ ಮಹೇಶ ಚೌಗುಲೆ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳು ಎ.ಎ.ಜೂನೇಡಿ ಪಟೇಲ ಇನ್ನಿತರರು ಭಾಗವಹಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳು ಮಾತನಾಡಿ, ಪ್ರತಿಯೊಬ್ಬ ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಬೆಳಗಾವಿ ನಗರದಲ್ಲಿ ನಡೆಯುವಂತ ಕರಾಟೆ, ಕಬ್ಬಡಿ ಮತ್ತು ಇನ್ನಿತರ ಕ್ರೀಡಾ ಚಟುವಟಿಕೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಪಾಲ್ಗೊಂಡು ಯಶಸ್ಸನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಈ ಒಂದು ಅಸೋಸಿಯನ್ ವತಿಯಿಂದ ನಿಮಗೆ ಒಂದು ಸರ್ಟಿಫಿಕೆಟ್‌ದಿಂದ ಉದ್ಯೋಗದಲ್ಲಿ ಮೀಸಲಾತಿ ಹೊಂದಿರುತ್ತಿರಿ. ಅದೇ ರೀತಿಯಾಗಿ ಮುಂದೆ ನಮ್ಮದೇ ಇಲಾಖೆಯಿಂದ ರಾಜ್ಯಮಟ್ಟದ ಕರಾಟೆ ಕಾಂಪಿಟಿಷನ್‌ನ್ನು ಆಯೋಜನೆ ಮಾಡುತ್ತೇವೆ ಎಂದು ತಿಳಿಸಿದರು.

ಈ ಎಲ್ಲ ವಿದ್ಯಾರ್ಥಿಗಳು ಕಳದೆಂಟು ವರ್ಷಗಳಿಂದ ಚವ್ಹಾಟ ಗಲ್ಲಿಯ ಕರಾಟೆ ಕ್ಲಾಸ್‌ನಲ್ಲಿ ನಿರಂತರ ಅಭ್ಯಾಸ ಮಾಡುತ್ತಿದ್ದಾರೆ. ಇವರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪದಕಗಳನ್ನು ಪಡೆದಿದ್ದಾರೆ. ಈ ಶ್ರಮದ ಫಲವಾಗಿ ಇಂಡಿಯನ್ ಕರಾಟೆ ಕ್ಲಬ್ ಹಾಗೂ ಬೆಳಗಾವಿ ಜಿಲ್ಲಾ ಕ್ರೀಡಾ ಕರಾಟೆ ಸಂಘಟನೆಯ ಅಧ್ಯಕ್ಷ ಗಜೆಂದ್ರ ಕಾಕತೀಕರ ಅವರಿಂದ ಬ್ಲಾಕ್ ಬೆಲ್ಟ್, ಪ್ರಮಾಣಪತ್ರ ಹಾಗೂ ಸ್ಮೃತಿಚಿಹ್ನೆ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳ ಪೋಷಕರಿಗೂ ಶಾಲು, ಶ್ರೀಫಲ ಮತ್ತು ಪುಷ್ಪಗುಚ್ಛ ನೀಡಿ ಸನ್ಮಾನಿಸಲಾಯಿತು. ಈ ಐದು ಬ್ಲಾಕ್ ಬೆಲ್ಟ್ ವಿದ್ಯಾರ್ಥಿಗಳಿಗೆ ಕರಾಟೆ ತರಬೇತುದಾರ ಪ್ರಭಾಕರ ಕಿಲ್ಲೆಕರ ಮತ್ತು ಪರಶುರಾಮ ಕಾಕತೀ ಅವರ ಮಾರ್ಗದರ್ಶನ ದೊರೆಯುತ್ತಿದೆ.

PREV

Recommended Stories

ಸಮೀಕ್ಷೆ ವೇಳೆ ಬೀದಿ ನಾಯಿ ದಾಳಿಯಿಂದ ಶಿಕ್ಷಕಿ ಗಂಭೀರ
ಸೆಂಟ್ ಸ್ಪ್ರೇ ಮಾಡಿ ಹಸುವಿನ ಬಾಲಕ್ಕೆ ಬೆಂಕಿ ಹಚ್ಚಿದ ಬಾಲಕ