ಶಾಸಕ ಪ್ರದೀಪ್ ಈಶ್ವರ್ ಭಾರೀ ಬೊಗಳೆ ದಾಸಯ್ಯ. ಅಧಿಕಾರಕ್ಕೆ ಬಂದು ಮೂರು ವರ್ಷಗಳಗುತ್ತಿದ್ದರೂ ಯಾವ ಭರವಸೆಗಳನ್ನು ಈಡೇರಿಸಿಲ್ಲ ಎಂದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಶಾಸಕ ಪ್ರದೀಪ್ ಈಶ್ವರ್ ನಾನೊಬ್ಬ ಅನಾಥ ಎಂದು ಹೇಳಿಕೊಂಡು ಗೆದ್ದು ಬಂದು ಮೂರು ವರ್ಷವಾಗುತ್ತಿದ್ದರೂ ನೀಡಿದ ಭರವಸೆ ಒಂದು ಈಡೇರಿಸಿಲ್ಲ. ಎಚ್.ಎನ್. ವ್ಯಾಲಿ ನೀರಿನ ಮೂರನೇ ಹಂತದ ಶುದ್ಧೀಕರಣಕ್ಕೆ ಚಕಾರ ಎತ್ತಿಲ್ಲ. ಭ್ರಷ್ಟಾಚಾರದಿಂದ ಗಬ್ಬೆದ್ದು ಹೋಗಿರುವ ಸರ್ಕಾರಿ ಆಸ್ಪತ್ರೆ ಶುಚಿಗೊಳಿಸಿ ಕೆಲಸ ಮಾಡುತ್ತಿಲ್ಲ. ಅಪಘಾತದಲ್ಲಿ ಮೃತರಾದ ಕುಟುಂಬದವರಿಗೂ ಸಿಎಂ ಪರಿಹಾರ ಹಣ ಕೊಡಿಸಿಲ್ಲ. ಶಾಸಕರಾಗಿದ್ದೀರಿ, ಶಾಸಕರ ಕೆಲಸ ಮಾಡಿ ಎಂದು ರೈತ ಜನಸೇನಾ ಸಮಿತಿ ಅಧ್ಯಕ್ಷೆ ಸಿ.ಎನ್.ಸುಷ್ಮಾ ಶ್ರೀನಿವಾಸ್ ಎಚ್ಚರಿಕೆ ನೀಡಿದರು

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತ ಭವನದಲ್ಲಿ ಮಂಗಳವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಶಾಸಕ ಪ್ರದೀಪ್ ಈಶ್ವರ್ ಭಾರೀ ಬೊಗಳೆ ದಾಸಯ್ಯ. ಅಧಿಕಾರಕ್ಕೆ ಬಂದು ಮೂರು ವರ್ಷಗಳಗುತ್ತಿದ್ದರೂ ಯಾವ ಭರವಸೆಗಳನ್ನು ಈಡೇರಿಸಿಲ್ಲ ಎಂದರು.

ಪ್ರದೀಪ್‌ ಈಶ್ವರ್‌ ನಾನೊಬ್ಬ ಅನಾಥ ಎಂದು ಹೇಳಿಕೊಂಡು ಅಂಬೇಡ್ಕರ್‌ ಪೋಟೊ ಹಿಡಿದು ಶಾಸಕರಾಗಿ ಗೆದ್ದರು. ಈಗ ಜಿಲ್ಲಾ ಕೇಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ನಡೀತಿರೋ ಲಂಚಾವತಾರ ನಿಲ್ಲಿಸಿಲ್ಲ. ಬೆಂಗಳೂರು ಕೊಳಚೆ ನೀರಿನ ಮೂರನೇ ಹಂತದ ಶುದ್ಧೀಕರಣ ಮಾಡುವ ಬಗ್ಗೆ ವಿಧಾನಸೌಧದಲ್ಲಿ ಒಂದಿ ದಿನವೂ ಮಾತನಾಡಿಲ್ಲ. ಅಜ್ಜವಾರ ಗೇಟಲ್ಲಿ ಆಫಘಾತವಾಗಿ ಬೀದಿ ಪಲಾದ ನಾಲ್ಕು ಜನರ ಕುಟುಂಬಗಳಿಗೆ ಸಿಎಂ ಪರಿಹಾರ ನಿದಿಯಿಂದ 5 ಲಕ್ಷ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿ ಬಂದಿರಿ, ಅಪಘಾತದಲ್ಲಿ ಮೃತನಾದವನ ಪತ್ನಿ ಇಂಜಿನಿಯರಿಂಗ್ ಓದುತಿದ್ದ ವಿದ್ಯಾರ್ಥಿನಿಗೆ ಡಿಸಿ ಕಚೇರಿಯಲ್ಲಿ ಕೆಲಸ ಗ್ಕೊಡಿಸುತ್ತೇನೆ ಎಂದು ಆ ಕೆಡೆ ತಿರುಗಿಯೂ ನೋಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಕೊಳಚೆ ನೀರಿನ ಮೂರನೇ ಹಂತದ ಶುದ್ಧೀಕರಣ ಮಾಡಿಸುವ ಬಗ್ಗೆ ಸರ್ಕಾರದಲ್ಲಿ ಮಾತನಾಡಿ, ಅನುದಾನ ಒದಗಿಸದಿದ್ದರೆ ಒಂದು ತಿಂಗಳು ಗಡವು ನೀಡುತಿದ್ದೇವೆ. ಅದರೊಳಗೆ ಅದಕ್ಕೊಂದು ಪರಿಹಾರ ಕಾಣಿಸದಿದ್ರೆ ಕರ್ನಾಟಕ ಜನಸೇನಾ ದಿಂದ ಬೇರೆ ತರದ ಹೋರಾಟ ಕೈಗೆತ್ತಿ ಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ನೆಲಮಂಗಲ ಶಾಸಕ ಶ್ರೀನಿವಾಸ್ ಎಚ್‌.ಎನ್ ವ್ಯಾಲಿ ನೀರನ್ನು ಬೇಡವೆಂದು ಹೇಳಿದ್ದಾರೆ. ಹಾಗೆಯೇ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಕೂಡ ಇದೇ ನಿಲುವು ವ್ಯಕ್ತಪಡಿಸಿದ್ದಾರೆ. ಆದರೆ ನಮ್ಮ ಕ್ಷೇತ್ರದ ಶಾಸಕ ಮಾತ್ರ ಕನಿಷ್ಠ ಮಟ್ಟದಲ್ಲೂ ಈ ಬಗ್ಗೆ ಮಾತನಾಡಿಲ್ಲ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಜನಸೇನಾ ಪದಾಧಿಕಾರಿಗಳಾದ ಸುಧಾಕರ್, ಅರುಣ್, ನರೇಶ್, ನರಸಿಂಹಮೂರ್ತಿ, ಪ್ರವೀಣ್, ಮಹೇಶ್ ಹಾಗೂ ಕೆ.ವಿ.ನರಸಿಂಹರಾಜು, ಮತ್ತಿತರರು ಇದ್ದರು.

ಸಿಕೆಬಿ-4 ಸುದ್ದಿಗೋಷ್ಟಿಯಲ್ಲಿ ಸಿ.ಎನ್.ಸುಷ್ಮಾ ಶ್ರೀನಿವಾಸ್ ಮಾತನಾಡಿದರು.