ಖರ್ಗೆ ಅಭಿನಂದನಾ ಸಮಾರಂಭಕ್ಕೆ ಬಸವಕಲ್ಯಾಣದಿಂದ 5 ಸಾವಿರ ಜನ ಭಾಗಿ

KannadaprabhaNewsNetwork |  
Published : Feb 18, 2024, 01:38 AM IST
ಚಿತ್ರ 17ಬಿಡಿಆರ್55 | Kannada Prabha

ಸಾರಾಂಶ

370 (ಜೆ) ಯ ರೂವಾರಿ, ಭಾರತಿಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಅಭಿನಂದನಾ ಸಮಾರಂಭಕ್ಕೆ ಬಸವಕಲ್ಯಾಣ ತಾಲೂಕು ಕಾಂಗ್ರೆಸ್‌ವತಿಯಿಂದ ಸುಮಾರು 5 ಸಾವಿರ ಜನರು ಪಾಲ್ಗೋಳ್ಳುವರು ಎಂದು ಮಾಜಿ ಎಂಎಲ್ಸಿ ವಿಜಯಸಿಂಗ ತಿಳಿಸಿದರು.

ಬಸವಕಲ್ಯಾಣ: 370 (ಜೆ) ಯ ರೂವಾರಿ, ಭಾರತಿಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಅಭಿನಂದನಾ ಸಮಾರಂಭಕ್ಕೆ ಬಸವಕಲ್ಯಾಣ ತಾಲೂಕು ಕಾಂಗ್ರೆಸ್‌ವತಿಯಿಂದ ಸುಮಾರು 5 ಸಾವಿರ ಜನರು ಪಾಲ್ಗೋಳ್ಳುವರು ಎಂದು ಮಾಜಿ ಎಂಎಲ್ಸಿ ವಿಜಯಸಿಂಗ ತಿಳಿಸಿದರು.

ಫೆ.20ರಂದು ಬೀದರ್‌ ನಗರದಲ್ಲಿ ಹಮ್ಮಿಕೊಂಡಿರುವ ಅಭಿನಂದನಾ ಸಮಾರಂಭದ ಯಶಸ್ವಿಗಾಗಿ ಬಸವಕಲ್ಯಾಣದ ಕಿರಣ ಹೊಟೇಲ್‌ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರು ಈ ಭಾಗಕ್ಕೆ ನೀಡಿದ ಸೇವೆ ಇತಿಹಾಸ ಪುಟದಲ್ಲಿ ಉಳಿಯುವಂತಾಗಿದೆ ಎಂದರು.

ಖರ್ಗೆ ಅವರ ಅಭಿನಂದನಾ ಸಮಾರಂಭಕ್ಕೆ ಬಸವಕಲ್ಯಾಣದಿಂದ 5 ಸಾವಿರ ಜನರನ್ನು ಕರೆದುಕೊಂಡು ಹೋಗಲಾಗುವುದು ಈ ಕಾರ್ಯಕ್ರಮ ಯಶಸ್ವಿಗೆ ತಾಲೂಕಿನ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ಪದಾಧಿಕಾರಿಗಳು ಪ್ರತಿ ಗ್ರಾಮದ ಕಾಂಗ್ರೆಸ್ ಮುಖಂಡರು ಆಗಮಿಸಬೇಕೆಂದು ಕೋರಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠ ರಾಠೋಡ್ ಮಾತನಾಡಿ, ಖರ್ಗೆಯವರು ಮೂಲತಃ ಬೀದರ ಜಿಲ್ಲೆಯವರಾಗಿದ್ದು, ರಾಷ್ಟ್ರಮಟ್ಟದ ನಾಯಕರಾಗಿ ಬೆಳದಿದ್ದು ನಮಗೆಲ್ಲರಿಗೆ ಹೆಮ್ಮೆ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕರಾಗಿ ಕರ್ನಾಟಕದಲ್ಲಿ ಶಾಸಕರಾಗಿ, ಸಚಿವರಾಗಿ ಕಳೆದ 50 ವರ್ಷಗಳಿಂದ ಅವರು ಪಕ್ಷಕ್ಕಾಗಿ ಮತ್ತು ನಾಡಿಗಾಗಿ ಸೇವೆ ಸಲ್ಲಿಸಿದ್ದು, ಅಮೋಘವಾಗಿದೆ ಹೀಗಾಗಿ ಇವರ ಅಭಿನಂದನಾ ಸಭೆಯು ಯಶಸ್ವಿಗಾಗಿ ನಾವು ನಿವೆಲ್ಲರು ದುಡಿಯೋಣ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ್ ಜಾಬಶೆಟ್ಟಿ, ಹಿರಿಯ ಮುಖಂಡ ಶಾಂತಪ್ಪ ಜಿ ಪಾಟೀಲ್, ಬಾಬು ಹೊನ್ನಾನಾಯಕ್, ದಿಲೀಪ್ ಶಿಂದೆ, ರವಿ ಗಾಯಕವಾಡ, ಡಿಕೆ ದಾವೂದ್, ಏಜಾಜ ಲಾತುರೆ, ರಯಿಸ್ ಶೇಕ್, ಓಂಪ್ರಕಾಶ್ ಪಾಟೀಲ್, ಯೋಗೇಶ್ ಗುತ್ತೇದಾರ್, ಬಾಬುರಾವ್ ತುಂಬಾ, ಬಸವರಾಜ್ ಸ್ವಾಮಿ, ಜಿತೇಂದ್ರ ಶಿವರಾಂನೋರ್, ಎಂಡಿ ಮಿನಹಾಜ್ ನವಾಬ್, ಅಮಾನತ್ ಅಲಿ ಅಡ್ವಕೇಟ್, ಶಶಿಕಾಂತ್ ದುರ್ಗೆ, ಸಂತೋಷ್ ಗುತ್ತೇದಾರ್, ಶರಣು ಅಲಗುಡ್,ಆನಂದ್ ಪಾಟೀಲ್ ಕೊಹಿನೂರ್, ಸಿದ್ರಾಮ ಕಾಮಣ್ಣ, ಯುವರಾಜ್ ಭೆಂಡೆ, ಮನೋಹರ್ ಮೈಸೆ, ಮಹಿಳಾ ಕಾಂಗ್ರೆಸ್ ಪಧಾಧಿಕಾರಿಗಳಾದ ಸವಿತಾ ಕಾಂಬಳೆ, ಅನುಷಯ ಮಂಠಾಳ್ಕರ್ ಸೇರಿದಂತೆ ಅನೇಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಯಲಾಯ್ತು ಕಾಮಚಂದ್ರರಾವ್‌ ಐಪಿಎಸ್‌ ವಿಡಿಯೋಗಳ ಅಸಲಿ ಮುಖ
ಕೆಎಂಎಫ್‌ ಸ್ವೀಟ್‌ ತಯಾರಿಗೂ ಸಿಗ್ತಿಲ್ಲ ಗ್ಯಾಸ್‌!