ನಗರದ ಶೇ.50ರಷ್ಟು ತ್ಯಾಜ್ಯರಿಸೈಕ್ಲಿಂಗ್: ಮಹೇಶ್ವರ ರಾವ್

KannadaprabhaNewsNetwork |  
Published : Mar 10, 2026, 02:45 AM IST
ಸ್ವಚ್ಛ ಸರ್ವೇಕ್ಷಣಾ–2025–26ರ ರಾಯಭಾರಿಗಳ ನಿಯೋಜನೆ ಕಾರ್ಯಕ್ರಮದಲ್ಲಿ ನಟ ಅನಿರುದ್ಧ, ಮಂಜಮ್ಮ ಜೋಗತಿ, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್, ಬಿ.ಎಸ್.ಡಬ್ಲ್ಯೂ.ಎಂ.ಎಲ್ ಸಿಇಒ ಕರೀಗೌಡ ಮತ್ತಿತರರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ನಗರದ ಶೇ.45-50ರಷ್ಟು ತ್ಯಾಜ್ಯ ರಿಸೈಕ್ಲಿಂಗ್ ಆಗುತ್ತಿದೆ. ಮುಂದೆ ಇದನ್ನು ಇನ್ನಷ್ಟು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಶೇ.45-50ರಷ್ಟು ತ್ಯಾಜ್ಯ ರಿಸೈಕ್ಲಿಂಗ್ ಆಗುತ್ತಿದೆ. ಮುಂದೆ ಇದನ್ನು ಇನ್ನಷ್ಟು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಹೇಳಿದ್ದಾರೆ.

ಸೋಮವಾರ ಟೌನ್‌ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಸ್ವಚ್ಛ ಸರ್ವೇಕ್ಷಣಾ–2025–26’ಕ್ಕೆ ರಾಯಭಾರಿಗಳಾಗಿ ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿ ಸೇರಿದಂತೆ ಐವರನ್ನು ನಿಯೋಜಿಸಿ ಮಾತನಾಡಿದ ಅವರು, ತ್ಯಾಜ್ಯವನ್ನು ವಿವಿಧ ರೀತಿಯಲ್ಲಿ ಮರುಬಳಕೆ ಮಾಡುವ ಮೂಲಕ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಈ ಸಂಬಂಧ ಮುಂದಿನ 3–4 ವರ್ಷಗಳಲ್ಲಿ ತ್ಯಾಜ್ಯ ನಿರ್ವಹಣೆಯಲ್ಲಿ ಪರಿಣಾಮಕಾರಿ ಬದಲಾವಣೆಗಳನ್ನು ತರಲಾಗುವುದು ಎಂದರು.ಹಸಿ ತ್ಯಾಜ್ಯವನ್ನು ಮೂಲದಲ್ಲಿಯೇ ಗೊಬ್ಬರವಾಗಿಸುವುದು, ಪ್ಲಾಸ್ಟಿಕ್ ಅನ್ನು ವಿದ್ಯುತ್ ಘಟಕಗಳಿಗೆ ಕಳುಹಿಸುವುದು, ಕಡಿಮೆ ಮೌಲ್ಯದ ಪ್ಲಾಸ್ಟಿಕ್ ಅನ್ನು ಸಿಮೆಂಟ್ ಕಾರ್ಖಾನೆಗಳಿಗೆ ಕಳುಹಿಸುವ ಮೂಲಕ ಇ.ಪಿ.ಆರ್ ಕ್ರೆಡಿಟ್ ಪಡೆಯಲಾಗುತ್ತಿದೆ. ಇದೇ ಮಾದರಿಯಲ್ಲಿ ವಿವಿಧ ಕಾರ್ಯಗಳಿಗೆ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ಮರುಬಳಕೆ ಮಾಡುವ ಮೂಲಕ ಲ್ಯಾಂಡ್‌ ಫಿಲ್‌ಗೆ ಕಳುಹಿಸುವ ಪ್ರಮಾಣವನ್ನು ಕ್ರಮೇಣ ಕಡಿಮೆ ಮಾಡಲು ಪ್ರಯತ್ನಗಳು ನಡೆದಿವೆ ಎಂದು ಆಯುಕ್ತರು ತಿಳಿಸಿದರು.ಲ್ಯಾಂಡ್‌ಫಿಲ್‌ಗೆ ಹೋಗುವ ಕಾಂಪ್ಯಾಕ್ಟರ್‌ಗಳ ಸಂಖ್ಯೆ 400 ರಿಂದ 260ಕ್ಕೆ ಇಳಿಕೆಯಾಗಿದೆ. ರಾಜಾಜಿನಗರದಲ್ಲಿ ಶೇ.95ರಷ್ಟು ಕಸ ವಿಂಗಡಣೆ ಆಗುತ್ತಿದೆ. ಕಸ ಕಡಿಮೆ ವಿಂಗಡಣೆ ಆಗುತ್ತಿರುವ ಪ್ರದೇಶಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ನಾಗರಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ ಎಂದು ಮಹೇಶ್ವರ ರಾವ್ ಹೇಳಿದರು.

ಜಿಬಿಎ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ನಾಗರಿಕರು, ಮೇಲ್ವಿಚಾರಕರು ಹಾಗೂ ಪೌರಕಾರ್ಮಿಕರು ಸೇರಿದಂತೆ 10 ಮಂದಿಯನ್ನು ಸ್ವಚ್ಛತಾ ಚಾಂಪಿಯನ್ ಆಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬಿ.ಎಸ್.ಡಬ್ಲ್ಯೂ.ಎಂ.ಎಲ್ ಸಿಇಒ ಕರೀಗೌಡ ಉಪಸ್ಥಿತರಿದ್ದರು.ಸ್ವಚ್ಛ ಸರ್ವೇಕ್ಷಣಾ ಅಭಿಯಾನಕ್ಕೆ

5 ಗಣ್ಯರು ರಾಯಭಾರಿಗಳುಸ್ವಚ್ಛ ಸರ್ವೇಕ್ಷಣಾ 2025–26ರ ರಾಯಭಾರಿಗಳಾಗಿ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ, ಚಲನಚಿತ್ರ ನಟ ಅನಿರುದ್ಧ ಜಟ್ಕರ್, ಇಂಡಿಯಾ ರೈಸಿಂಗ್ ಟ್ರಸ್ಟ್‌ನ ಮುಖ್ಯಸ್ಥ ಅರುಣ್ ಪೈ, ಸಮಾಜ ಸೇವಕ ಕೆ.ಎಂ. ನಾಗರಾಜ್, ಲೆಟ್ಸ್ ಬಿ ದಿ ಚೇಂಜ್ ಸಂಸ್ಥೆಯ ಮುಖ್ಯಸ್ಥ ಅನಿರುದ್ಧ್ ದತ್ ಹಾಗೂ ಸಾಮಾಜಿಕ ಕಾರ್ಯಕರ್ತ ಅಭಿಲಾಶ್ ನಾಯರ್ ಅವರನ್ನು ರಾಯಭಾರಿಗಳಾಗಿ ನೇಮಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

1 ಅಪಘಾತಕ್ಕೆ 4 ಪ್ರಮಾಣ ಪತ್ರ: ಕೋರ್ಟ್‌ ದಿಗ್ಭ್ರಮೆ
ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ ಮುಂಚೂಣಿಗೆ: ಮಂಜುನಾಥ್