ಶ್ರೀರಾಮ ಭಕ್ತರ 500 ವರ್ಷಗಳ ಕನಸು ನನಸಾಗಿದೆ

KannadaprabhaNewsNetwork | Published : Jan 1, 2024 1:15 AM

ಸಾರಾಂಶ

ಖಾವಿ ಎಂದರೆ ಸಾಧು ಸಂತರು, ಖಾಕಿ ಎಂದರೆ ದೇಶ ಕಾಯುವ ವೀರ ಯೋಧರು, ಖಾದಿ ಎಂದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಂದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಕಾವಿ, ಖಾಕಿ, ಖಾದಿ ಹಾಗೂ ರಾಮನ ಭಕ್ತರ ಸಹಕಾರದಿಂದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಲು ಸಾಧ್ಯವಾಗಿದೆ. 2024ರ ಜನವರಿ 22 ರಂದು ರಾಮನ ಮೂರ್ತಿ ಪ್ರತಿಷ್ಠಾಪನೆಗೆ ಸಿದ್ದತೆ ನಡೆದಿದ್ದು ಅತೀವ ಸಂತಸ ತಂದಿದೆ ಎಂದು ಗುಂಡಕನಾಳ ಹಿರೇಮಠದ ಶ್ರೀ ಷ.ಬ್ರ.ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು ನುಡಿದರು.

ಭಾನುವಾರ ಸ್ಥಳೀಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹಾಗೂ ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ಅಯ್ಯೋಧ್ಯೆಯಿಂದ ಆಗಮಿಸಿದ ಮಂತ್ರಾಕ್ಷತೆ ಹಾಗೂ ಕಲಷಗಳ ಭವ್ಯ ಶೋಭಾಯಾತ್ರೆಯ ಕುರಿತು ಜರುಗಿದ ಶ್ರೀ ರಾಮ ಧರ್ಮಸಭೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಖಾವಿ ಎಂದರೆ ಸಾಧು ಸಂತರು, ಖಾಕಿ ಎಂದರೆ ದೇಶ ಕಾಯುವ ವೀರ ಯೋಧರು, ಖಾದಿ ಎಂದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಂದರು. ಇಡೀ ದೇಶದ ಶ್ರೀರಾಮ ಭಕ್ತರ ೫೦೦ ವರ್ಷಗಳ ಕನಸು ನನಸಾಗಿದೆ. ಅಯ್ಯೋಧ್ಯೆಯಿಂದ ತರಲಾದ ಅಕ್ಷತೆಗಳನ್ನು ಪ್ರತಿ ಗ್ರಾಮ, ಪಟ್ಟಣಗಳ ಪ್ರತಿ ಮನೆಗೂ ಮುಟ್ಟಿಸುವ ಕಾರ್ಯ ನಡೆಯಲಿದೆ ಎಂದರು.

ಶ್ರೀ ಶಿವಭವಾನಿ ಮಂದಿರದ ಅರ್ಚಕ ಸಂತೋಷ ಭಟ್ ಜೋಶಿ, ಜ್ಯೋತಿಷ್ಯ ರತ್ನ ಚಬನೂರ ಹಿರೇಮಠದ ಶ್ರೀರಾಮಲಿಂಗಯ್ಯ ಸ್ವಾಮಿ, ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ ಹಿಪ್ಪರಗಿ ಮಾತನಾಡಿದರು ಶ್ರೀ ಖಾಸ್ಗತೇಶ್ವರ ಮಠದಲ್ಲಿ ಮಂತ್ರಾಕ್ಷತೆಗೆ ಮಹಾ ಪೂಜೆ ನಡೆಯಿತು. ಮಂತ್ರಾಕ್ಷತೆ ಮತ್ತು ಕಲಷಗಳೊಂದಿಗೆ ಶ್ರೀರಾಮಚಂದ್ರನ ಭಾವಚಿತ್ರದ ಮಹಾ ರಥದ ಭವ್ಯ ಮೆರವಣಿಗೆಯ ಶೋಭಾಯಾತ್ರೆ ಹಾಗೂ ಪಲ್ಲಕ್ಕಿ ಉತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ವಿಠ್ಠಲ ಮಂದಿರಕ್ಕೆ ಆಗಮಿಸಿ ಧರ್ಮ ಸಭೆಯಾಗಿ ಮಾರ್ಪಟ್ಟಿತು.

ಈ ವೇಳೆ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ. ಮುರುಘೇಶ ವಿರಕ್ತಮಠ, ವೇ. ಶ್ರೀಧರ ಜೋಶಿ, ಸುಧೀರ ದೇಶಪಾಂಡೆ, ವಿಶ್ವ ಹಿಂದೂ ಪರಿಷತ್‌ನ ಚಂದ್ರಶೇಖರ ದೊಡಮನಿ, ಪ್ರಮೋದ ಅಗರವಾಲಾ, ಜೈಸಿಂಗ್ ಮೂಲಿಮನಿ, ಕಕ್ಕು ರಂಗ್ರೇಜ್, ರಾಜು ಹಂಚಾಟೆ, ಕಾಶಿನಾಥ ಮುರಾಳ, ಮಾನಸಿಂಗ್ ಕೊಕಟನೂರ, ಎಂ.ಎಸ್.ಸರಶೆಟ್ಟಿ, ಕಾಶಿನಾಥ ಸಜ್ಜನ, ತಮ್ಮಣ್ಣ ದೇಶಪಾಂಡೆ, ಸಂಬಾಜಿ ವಾಡಕರ, ವಿಠ್ಠಲ ಮೋಹಿತೆ, ರಾಘವೇಂದ್ರ ಮಾನೆ, ಶಶಿಧರ ಡಿಸಲೆ, ರಾಜು ಅಲ್ಲಾಪೂರ, ಶ್ರೀನಿವಾಸ ಸೋನಾರ, ಅಶೋಕ ಬಳಗಾನೂರ, ನಾಗೇಶ ದೇಶಪಾಂಡೆ, ಕಾಶಿನಾಥ ಅರಳಿಚಂಡಿ, ಯಲ್ಲು ಧಾಯಪುಲೆ, ಶ್ರೀಮತಿ ಶಿವಮ್ಮ ಬಿರಾದಾರ, ಭೋರಮ್ಮ ಕುಂಬಾರ, ಮಠಾಧೀಶರು, ಗುರುಗಳು, ಅರ್ಚಕರು, ಸಾಮಾಜಿಕ ಕಾರ್ಯಕರ್ತರು, ವಿಶ್ವ ಹಿಂದೂ ಪರಷತ್‌ನ ಕಾರ್ಯಕರ್ತರು, ವಿವಿಧ ಸಮಾಜಗಳ ಮಹಿಳಾ ಮಂಡಳದವರು ಇದ್ದರು. ಶಿಕ್ಷಕ ಸಂಗಮೇಶ ಪಾಲ್ಕಿ ನಿರೂಪಿಸಿ ವಂದಿಸಿದರು.

ಕೋಟ್:

ಕಾವಿ, ಖಾಕಿ, ಖಾದಿ ಹಾಗೂ ರಾಮನ ಭಕ್ತರ ಸಹಕಾರದಿಂದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಲು ಸಾಧ್ಯವಾಗಿದೆ. 2024ರ ಜನವರಿ 22 ರಂದು ರಾಮನ ಮೂರ್ತಿ ಪ್ರತಿಷ್ಠಾಪನೆಗೆ ಸಿದ್ದತೆ ನಡೆದಿದ್ದು ಅತೀವ ಸಂತಸ ತಂದಿದೆ. ಇಡೀ ದೇಶದ ಶ್ರೀರಾಮ ಭಕ್ತರ ೫೦೦ ವರ್ಷಗಳ ಕನಸು ನನಸಾಗಿದೆ. ಅಯ್ಯೋಧ್ಯೆಯಿಂದ ತರಲಾದ ಅಕ್ಷತೆಗಳನ್ನು ಪ್ರತಿ ಗ್ರಾಮ, ಪಟ್ಟಣಗಳ ಪ್ರತಿ ಮನೆಗೂ ಮುಟ್ಟಿಸುವ ಕಾರ್ಯ ನಡೆಯಲಿದೆ. ಗುಂಡಕನಾಳ ಹಿರೇಮಠದ ಶ್ರೀ ಷ.ಬ್ರ.ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು

Share this article