ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಶ್ರೀಚಾಮುಂಡೇಶ್ವರಿ ವಿದ್ಯುತ್ ನಿಗಮದಿಂದ ನಾಡಪ್ರಭು ಕೆಂಪೇಗೌಡರ 516ನೇ ಜಯಂತ್ಯುತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಕಚೇರಿ ಆವರಣದಲ್ಲಿ ನಡೆದ ಜಯಂತೋತ್ಸವಕ್ಕೆ ಸೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಕೆ.ಎನ್.ಶಿವಕುಮಾರ್ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅಭಿಯಂತರ ಶಿವಕುಮಾರ್, ಇಡೀ ಜಗತ್ತಿನಲ್ಲಿ ಬೆಂಗಳೂರು ವೇಗವಾಗಿ ಬೆಳೆಯಲು ಕೆಂಪೇಗೌಡರ ದೂರ ದೃಷ್ಟಿ ಕಾರಣ. ಬೆಂಗಳೂರು ನಿರ್ಮಾಣದಲ್ಲಿ ಕೆಂಪೇಗೌಡರು 5 ಅಂಶಗಳನ್ನು ಸೇರಿಸಿಕೊಂಡು ಕೋಟೆ, ಪೇಟೆ, ಉದ್ಯಾನ, ಗುಡಿ.ಕೆರೆ ಇವುಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿದ್ದರು ಎಂದರು.ಗ್ರಾಮೀಣ ಯುವಕರು ಬೆಂಗಳೂರಿಗೆ ಬಂದು ನೆಲೆಸಿ ಜೀವನ ಕಟ್ಟಿಕೊಂಡಿದ್ದಾರೆ. ಐಟಿ,ಬಿಟಿಯಲ್ಲೂ ಬೆಂಗಳೂರು ಮುಂಚೂಣಿಗೆ ಬರಲು ಕೆಂಪೇಗೌಡರ ದೂರ ದೃಷ್ಟಿ ತ್ವ ಕಾರಣವಾಗಿದೆ. ಹೀಗಾಗಿ ಅವರ ಹೆಸರು ಅಜರಾಮರವಾಗಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್. ರಮೇಶ್, ಪ್ರದೀಪ್ ಕುಮಾರ್, ಮೋಹನ್, ಸಹಾಯಕ ಎಂಜಿನಿಯರ್ ಅನಿತಾ, ನಾಗಾಭಿಷೇಕ್, ಲೆಕ್ಕಾಧಿಕಾರಿಗಳಾದ ಸುನಿತಾ, ರವಿಚಂದ್ರ, ವಿದ್ಯುತ್ ಪ್ರಸರಣ ನಿಗಮದ ಕಾರ್ಯಕಾರಿ ಸಮಿತಿ ಸದಸ್ಯರಾದ ಮಹದೇವ, ರಾಮಚಂದ್ರ, ಸ್ಥಳೀಯ ಸಮಿತಿ ಸದಸ್ಯರಾದ ಕೆ.ಎ.ಸುರೇಶ, ಶ್ರೀಧರ, ಸುಜಿತ್ ಕುಮಾರ್,ವೆಂಕಟೇಶ, ವಾಸುದೇವ, ಗಿರೀಶ್ ಹಾಗೂ ಸೆಸ್ಕಾಂ ಸಿಬ್ಬಂದಿ ಮತ್ತು ಗುತ್ತಿಗೆದಾರರು ಭಾಗವಹಿಸಿದ್ದರು.
ಮಾದಹಳ್ಳಿಯಲ್ಲಿ ಕೆಂಪೇಗೌಡರ ಜಯಂತಿಮಳವಳ್ಳಿ: ತಾಲೂಕಿನ ಮಾದಹಳ್ಳಿ ಮುಖ್ಯ ರಸ್ತೆ ಬಳಿಯ ಗ್ರಾಮಸ್ಥರು ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸಲಾಯಿತು.
ಗ್ರಾಪಂ ಮಾಜಿ ಸದಸ್ಯ ಎಂ.ಜಿ.ರಮೇಶ್ ಮಾತನಾಡಿ, ಕೆಂಪೇಗೌಡರ ಆದರ್ಶವನ್ನು ಪ್ರತಿಯೊಬ್ಬರು ಪಾಲಿಸಬೇಕು. ಅವರ ಸೇವೆಗಳನ್ನು ಸ್ಮರಿಸಬೇಕು. ಅವರಂತೆ ಕೆಲಸ ಮಾಡಲು ಕಾರ್ಯ ಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.ಈ ವೇಳೆ ಗ್ರಾಪಂ ಸದಸ್ಯ ಅಭಿಲಾಷ್ ಗೌಡ, ಸಹಕಾರ ಸಂಘದ ಅಧ್ಯಕ್ಷ ಆನಂದ್, ಮುಖಂಡರಾದ ಮಹೇಶ್, ದೇವರಾಜು, ಎಂ.ಪಿ.ರಾಜು, ಎಂ.ಪಿ.ಉಮೇಶ್, ಮೊಗಣ್ಣ, ಚಿಕ್ಕಣ್ಣ, ಕೆಂಪೇಗೌಡ, ಸುರೇಶ್, ಅಭಿ, ಗಿರೀಶ್, ಬಸವರಾಜು, ಪ್ರಕಾಶ್ ಸೇರಿದಂತೆ ಇತರರು ಇದ್ದರು.