ರಾಮನಗರ: ಒಂದೇ ಹೆಸರು ಮತ್ತು ಭಾವಚಿತ್ರಗಳಲ್ಲಿ ಹೋಲಿಕೆ (ಡೆಮಾಗ್ರಫಿಕಲ್ ಸಿಮಿಲರ್ ಎಂಟ್ರಿ) ಇದ್ದು ಎರಡೆರಡು ಕಡೆ ಮತದಾರರ ಗುರುತಿನ ಚೀಟಿ ಹೊಂದಿರುವ ಸುಮಾರು 57,417 ಮತದಾರರನ್ನು ಜಿಲ್ಲಾಡಳಿತ ಪತ್ತೆ ಮಾಡಿದೆ.
ಅತಿ ಹೆಚ್ಚು ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ 14,237 ಮತದಾರರು, ಅತಿ ಕಡಿಮೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ 12,681 ಮತದಾರರ ಹೆಸರು ಎರಡೆರೆಡು ಕಡೆ ಮತದಾರರ ಪಟ್ಟಿಯಲ್ಲಿ ನಮೂದಾಗಿದೆ. ಉಳಿದಂತೆ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ 16,341 ಮತದಾರರು ಹಾಗೂ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ 14,158 ಮತದಾರರ ಹೆಸರು ಎರಡು ಕಡೆ ಮತದಾರರ ಪಟ್ಟಿಯಲ್ಲಿದೆ.
ಬೇರೆ ಜಿಲ್ಲೆಗಳ ಮತದಾರ ಪಟ್ಟಿಯಲ್ಲೂ ಹೆಸರು :ಪ್ರತಿ ಬಾರಿ ಯಾವುದೇ ಚುನಾವಣೆ ಎದುರಾದಾಗ ಎರಡೆರಡು ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ, ಒಂದು ಕಡೆ ಮಾತ್ರ ಉಳಿಸಿಕೊಂಡು ಮತ್ತೊಂದು ಕಡೆ ಡಿಲೀಟ್ ಮಾಡಿಸುವಂತೆ ಚುನಾವಣಾ ಆಯೋಗ ಸೂಚನೆ ನೀಡುತ್ತಿತ್ತು. ಆದಾಗ್ಯೂ ಎಷ್ಟೋ ಜನರು ಎರಡೆರಡು ಸ್ಥಳಗಳಲ್ಲಿ ವೋಟರ್ ಐಡಿಗಳನ್ನು ಪಡೆದಿದ್ದಾರೆ.
ಈಗ ಜಿಲ್ಲಾಡಳಿತದ ಅಧೀನದಲ್ಲಿರುವ ಚುನಾವಣಾ ಶಾಖೆಯ ಅಧಿಕಾರಿಗಳು ಡಬಲ್ ಎಂಟ್ರಿ ಇರುವ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿದೆ. ಈ ಮತದಾರರು ಸ್ವಂತ ಗ್ರಾಮದಲ್ಲಿ ಮತದಾನ ಪಟ್ಟಿಯಲ್ಲಿ ಹೆಸರಿದ್ದು, ಬೇರೊಂದು ಬೂತ್ , ವಿಧಾನಸಭಾ ಕ್ಷೇತ್ರ ಹಾಗೂ ಬೇರೆ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಲ್ಲಿಯೂ ನೆಲೆಸಿ ಅಲ್ಲೂ ಕೂಡ ಮತದಾನ ಪಟ್ಟಿಯಲ್ಲಿ ಹೆಸರು ಸೇರಿಸಿ ಮತದಾನ ಮಾಡುತ್ತಿದ್ದವರು ಸೇರಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ, ಅಂತಹ ಮತದಾರರಿಗೆ ವೋಟರ್ ಲಿಸ್ಟ್ ನ ಪ್ರತಿಯನ್ನು ಅಂಚೆ ಮೂಲಕ ಕಳುಹಿಸುತ್ತಿದೆ.
ಚುನಾವಣಾ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ಸಹ ಉದ್ದೇಶಪೂರಕವಾಗಿ ಮತದಾರರ ಪಟ್ಟಿಯ ಇನ್ನೊಂದು ಭಾಗ ಅಥವಾ ವಿಧಾನಸಭಾ ಕ್ಷೇತ್ರದ ಪಟ್ಟಿಯಲ್ಲಿ ಹೆಸರು ಸೇರಿಸಿದಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆ-1951 ಸೆಕ್ಷನ್ 31ರ ಪ್ರಕಾರ ಒಂದು ವರ್ಷ ಜೈಲು ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದು ಚುನಾವಣಾ ಶಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.
1 ವರ್ಷದಲ್ಲಿ 12,773 ಮತದಾರರ ಸೇರ್ಪಡೆ:
ಮಾಗಡಿ ಕ್ಷೇತ್ರದಲ್ಲಿ ಸಲ್ಲಿಕೆಯಾದ 6526 ಅರ್ಜಿಗಳ ಪೈಕಿ 4014, ರಾಮನಗರ ಕ್ಷೇತ್ರದಲ್ಲಿ 5454 ಅರ್ಜಿಗಳ ಪೈಕಿ 3044, ಕನಕಪುರ ಕ್ಷೇತ್ರದಲ್ಲಿ 3924 ಅರ್ಜಿಗಳ ಪೈಕಿ 2566 ಹಾಗೂ ಚನ್ನಪಟ್ಟಣ ಕ್ಷೇತ್ರದಲ್ಲಿ 4666 ಅರ್ಜಿಗಳ ಪೈಕಿ 3149 ಅರ್ಜಿಗಳು ಸ್ವೀಕೃತಗೊಂಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿದೆ.
1733 ಮತದಾರರ ಹೆಸರು ಡಿಲಿಟ್:
ಮಾಗಡಿ ಕ್ಷೇತ್ರದಲ್ಲಿ 2360 ಅರ್ಜಿಗಳ ಪೈಕಿ 593, ರಾಮನಗರ ಕ್ಷೇತ್ರದಲ್ಲಿ 1868 ಅರ್ಜಿಗಳ ಪೈಕಿ 482, ಕನಕಪುರ ಕ್ಷೇತ್ರದಲ್ಲಿ 1485 ಅರ್ಜಿಗಳ ಪೈಕಿ 366 ಹಾಗೂ ಚನ್ನಪಟ್ಟಣ ಕ್ಷೇತ್ರದಲ್ಲಿ 1688 ಅರ್ಜಿಗಳ ಪೈಕಿ 292 ಅರ್ಜಿಗಳನ್ನು ಪುರಸ್ಕರಿಸಲಾಗಿದೆ.
ಬಾಕ್ಸ್ .............ವರ್ಗಾವಣೆ - ತಿದ್ದುಪಡಿಗೆ 53,238 ಅರ್ಜಿಗಳು :
ಒಂದು ವರ್ಷದಲ್ಲಿ ವರ್ಗಾವಣೆ ಮತ್ತು ತಿದ್ದುಪಡಿಗೆ ನಮೂನೆ-8 ರಲ್ಲಿ ಸಲ್ಲಿಕೆಯಾದ 53,238 ಅರ್ಜಿಗಳ ಪೈಕಿ 45,619 ಅರ್ಜಿಗಳನ್ನು ಪುರಸ್ಕರಿಸಲಾಗಿದೆ.ಮಾಗಡಿ ಕ್ಷೇತ್ರದಲ್ಲಿ 17,193 ಅರ್ಜಿಗಳಲ್ಲಿ 13,933, ರಾಮನಗರ ಕ್ಷೇತ್ರದಲ್ಲಿ 12,108 ಅರ್ಜಿಗಳ ಪೈಕಿ 10,966, ಕನಕಪುರ ಕ್ಷೇತ್ರದಲ್ಲಿ 7528 ಅರ್ಜಿಗಳಲ್ಲಿ 6270 ಹಾಗೂ ಚನ್ನಪಟ್ಟಣ ಕ್ಷೇತ್ರದಲ್ಲಿ 16,409 ಅರ್ಜಿಗಳ ಪೈಕಿ 14,450 ಅರ್ಜಿಗಳನ್ನು ಪುರಸ್ಕರಿಸಿ ವರ್ಗಾವಣೆ ಮತ್ತು ತಿದ್ದುಪಡಿ ಮಾಡಲಾಗಿದೆ.
ಬಾಕ್ಸ್..........ಕ್ಷೇತ್ರಒಂದೇ ಬೂತ್‌ನಲ್ಲಿ ಎರಡು ಕಡೆ ಹೆಸರಿರುವ ಮತದಾರರುಒಂದೇ ಕ್ಷೇತ್ರದಲ್ಲಿ ಬೇರೆ ಬೇರೆ ಬೂತ್‌ನಲ್ಲಿ ಹೆಸರಿರುವ ಮತದಾರರುಬೇರೆ ಜಿಲ್ಲೆ, ರಾಜ್ಯಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಸರಿರುವ ಮತದಾರರುಒಟ್ಟು ಡಿಎಸ್‌ಇ ಮತದಾರರು
ಮಾಗಡಿ22622315,89216,341ರಾಮನಗರ11313013,99414,237
ಕನಕಪುರ18417813,79614,158ಚನ್ನಪಟ್ಟಣ27124712,16312,681
ಒಟ್ಟು79477855,84557,41724ಕೆಆರ್ ಎಂಎನ್ 3.ಜೆಪಿಜಿ
ಚುನಾವಣಾ ಆಯೋಗದ ಚಿಹ್ನೆ.