6 ಹೋಬಳಿ ಸಮಗ್ರ ಅಭಿವೃದ್ಧಿಗೆ ಸೂಚನೆ

KannadaprabhaNewsNetwork |  
Published : Dec 03, 2025, 01:15 AM IST
ಕೊರಟಗೆರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಪಣ ತೊಟ್ಟ ಗೃಹ ಸಚಿವರು | Kannada Prabha

ಸಾರಾಂಶ

ಗೃಹ ಸಚಿವರ ಆದೇಶದಂತೆ ತಾಲೂಕಿನ ೬ ಹೋಬಳಿಯ ಕೇಂದ್ರಗಳನ್ನು ಸಮಗ್ರ ಅಭಿವೃದ್ಧಿಗಾಗಿ ತಲಾ ಎರಡುವರೆ ಕೋಟಿ ಅನುದಾನ ನೀಡಿದ್ದು, ರಸ್ತೆ ಅಗಲಿಕರಣ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದು ತುಮಕೂರು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಗೃಹ ಸಚಿವರ ಆದೇಶದಂತೆ ತಾಲೂಕಿನ ೬ ಹೋಬಳಿಯ ಕೇಂದ್ರಗಳನ್ನು ಸಮಗ್ರ ಅಭಿವೃದ್ಧಿಗಾಗಿ ತಲಾ ಎರಡುವರೆ ಕೋಟಿ ಅನುದಾನ ನೀಡಿದ್ದು, ರಸ್ತೆ ಅಗಲಿಕರಣ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದು ತುಮಕೂರು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು ತಿಳಿಸಿದರು.ತಾಲೂಕಿನ ಹೊಳವನಹಳ್ಳಿ ಕೋಳಾಲ ಹೋಬಳಿ ಕೇಂದ್ರದ ಗ್ರಾಪಂಯಲ್ಲಿ ಸದಸ್ಯರ ಸಭೆ ಮಾಡಿ ನಂತರ ಕಾಮಗಾರಿ ನಡೆಯುವ ಸ್ಥಳವನ್ನು ಪರಿಶೀಲಿಸಿ ಮಾತನಾಡಿದರು.ಈಗಾಗಲೇ ಶಾಸಕರ ನಿಧಿಗೆ ಮುಖ್ಯಮಂತ್ರಿಗಳು ೫೦ ಕೋಟಿ ರು ಅನುದಾನವನ್ನ ಬಿಡುಗಡೆ ಮಾಡಿದ್ದು, ಗೃಹ ಸಚಿವರ ಮಾರ್ಗದರ್ಶನ ಹಾಗೂ ಅವರ ಆದೇಶದಂತೆ ತಾಲೂಕಿನ ಹೊಳವನಹಳ್ಳಿ, ಕೋಳಾಲ, ಕಸಬಾ, ಪುರವಾರ, ತೋವಿನಕೆರೆ, ಚಿಕ್ಕತೊಟ್ಲುಕೆರೆ ಹೋಬಳಿ ಕೇಂದ್ರಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ಪುಟ್ಟಬಾತ್, ರಸ್ತೆ ಮಧ್ಯ ವಿನ್ಯಾಸವಾದ ವಿದ್ಯುತ್ ದೀಪ ಅಳವಡಿಸಿ ಪಟ್ಟಣದ ಮಾದರಿಯಂತೆ ಮಾಡಲು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.೫೦ ಕೋಟಿ ಅನುದಾನದಲ್ಲಿ ರಸ್ತೆ, ಆಸ್ಪತ್ರೆ, ಅಂಗನವಾಡಿ, ಶಾಲಾ ಕಾಲೇಜು ಸೇರಿದಂತೆ ಗೃಹ ಸಚಿವರ ಆಪೇಕ್ಷೆಯಂತೆ ಒಂದು ಆಸ್ಪತ್ರೆಗೆ ೬೫ ಲಕ್ಷದಂತೆ ನಮ್ಮ ಜಿಲ್ಲೆಗೆ ೧೩೫ ಹೊಸ ಆಸ್ಪತ್ರೆಗಳು ಮಂಜೂರು ಮಾಡಿದ್ದಾರೆ. ಗ್ರಾಪಂ ವ್ಯಾಪ್ತಿಗೆ ಬರುವ ಎಲ್ಲಾ ಇಲಾಖೆಯ ಕಟ್ಟಡಗಳನ್ನು ನವೀಕರಣ ಮಾಡವ ಮೂಲಕ ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ಇನ್ನೂ ೬ ತಿಂಗಳಲ್ಲಿ ಎಲ್ಲಾ ಕಾಮಗಾರಿಗಳನ್ನು ಮುಗಿಸಿ ಮಾದರಿ ಗ್ರಾಮಗಳನ್ನಾಗಿ ಮಾಡಲು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಪಣ ತೊಟ್ಟಿದ್ದು, ಗ್ರಾಪಂ ಸದಸ್ಯರು ಹಾಗೂ ಸಹಕರಿಸಿ ಎಂದರು. ರಸ್ತೆ ಅಗಲಿಕರಣ ಮೂಲಾಜಿಲ್ಲದೆ ತೆರವು ಮಾಡಿ ಕೊರಟಗೆರೆ ವಿಧಾನ ಸಭಾ ಕ್ಷೇತ್ರಕ್ಕೆ ಬರುವ ೬ ಹೋಬಳಿ ಕೇಂದ್ರದಲ್ಲಿ ಚರಂಡಿ, ರಸ್ತೆ, ಹಾಗೂ ಬೀದಿ ದೀಪ ಅಳವಡಿಸಲು ಸಾರ್ವಜನಿಕರು ಹಾಗೂ ಗ್ರಾಪಂ ಸರ್ವ ಸದಸ್ಯರು ಸಹಕರಿಸಬೇಕು. ಹೋಬಳಿ ಕೇಂದ್ರದಲ್ಲಿ ಒಂದು ಬದಿಯಲ್ಲಿ ಎಂಟುವರೆ ಮೀಟರ್ ಮತ್ತು ಇನ್ನೊಂದು ಬದಿಯಲ್ಲಿ ಎಂಟುವರೆ ಮೀಟರ್ ಅಗಲದ ರಸ್ತೆ ನಿರ್ಮಾಣ ಮಾಡಲಿದ್ದು, ರಸ್ತೆ ಅಗಲಿಕರಣ ಮಾಡುವ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿರುವ ಸಾರ್ವಜನಿಕರ ಅಗಲಿಕರಣ ಮಾಡಲು ಸಹಕರಿಸಿ. ಒಂದು ವೇಳೆ ಸಹಕಾರ ನೀಡದಿದ್ದರೆ ಮೂಲಾಜಿಲ್ಲದೆ ಅಕ್ರಮ ಕಟ್ಟಡಗಳನ್ನ ತೆರವು ಮಾಡಬೇಕಾಗುತ್ತದೆ ಇನ್ನೂ ಎರಡು ಮೂರು ದಿನಗಳಲ್ಲಿ ಮಾರ್ಕಿಂಗ್ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಜಿಪಂ ಸಿಇಒ ಪ್ರಭ ಅವರ ಜೊತೆ ಕೊರಟಗೆರೆ ಇಒ ಅಪೂರ್ವ, ಜಿಪಂ ಎಇಇ ದಯಾನಂದ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಕಾಂತರಾಜು, ನರೇಗಾ ಎಇಇ ಗುರುಮೂರ್ತಿ, ಪಿಡಬ್ಲೂಡಿ ಎಇಇ ದೀಪಕ್, ತಂಡ ಹೊಳವನಹಳ್ಳಿಯಲ್ಲಿ ನಡೆಯುವ ಕಾಮಗಾರಿ ಸ್ಥಳವನ್ನ ಪರಿಶೀಲನೆ ಮಾಡಿದರು. ಇದೆ ಸಂದರ್ಭದಲ್ಲಿ ಪಿಡಿಒ ರಂಗನಾಥ್, ಗ್ರಾಪಂ ಅಧ್ಯಕ್ಷೆ ಸುಮಿತ್ರಉಮೇಶ್ ಸದಸ್ಯರಾದ ರವಿಕುಮಾರ್, ಶಂಶಾದ್, ನಜೀರ್, ಮುಖಂಡರಾದ ರಾಮಾಂಜನಯ್ಯ, ಕುಮಾರ್, ಉಮೇಶ್, ಶಿವಣ್ಣ, ಸುರೇಶ್, ಹನುಮಂತರಾಜು ಸೇರಿದಂತೆ ಇತರರು ಇದ್ದರು. (ಚಿತ್ರ ಇದೆ)೦೨ ಕೊರಟಗೆರೆ ಚಿತ್ರ೦೧;- ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಗ್ರಾಪಂನಲ್ಲಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿದ ಜಿಪಂ ಸಿಇಒ ಪ್ರಭು .

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

10 ಪ್ಯಾರಾದಲ್ಲಿ ಕೇಂದ್ರ ವಿರುದ್ಧ ಟೀಕಾ ಪ್ರಹಾರ
ಬೇಡಿಕೆಗೆ ತಕ್ಕಷ್ಟು ಬರುತ್ತಿಲ್ಲ ಮೈಸೂರು ರೇಷ್ಮೆ ಸೀರೆ