ಬ್ಯಾಡಗಿ: ಕನ್ನಡಪರ ಸಂಘಟನೆಗಳ ಹೋರಾಟದ ಫಲವಾಗಿ ನಾಡು, ನುಡಿ, ಜಲ, ನೆಲ ಸಂರಕ್ಷಣೆಯಾಗುತ್ತಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಹನುಮಂತ ಬೋವಿ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ) ಬಣ ಕಲ್ಲೇದೇವರ ಗ್ರಾಮ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಅನ್ಯಭಾಷಿಕರಿಂದ ತತ್ತರಿಸಿದ್ದ ಬೆಂಗಳೂರಿನಲ್ಲಿ ಈಗ ಎಲ್ಲೆಡೆ ಕನ್ನಡ ನಾಮಫಲಕಗಳು ರಾರಾಜಿಸುತ್ತಿದ್ದು, ನಮ್ಮೆಲ್ಲರ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ಹೇಳಿದರು.ರಾಜ್ಯದ ಎಲ್ಲ ನಾಮಫಲಕಗಳಲ್ಲಿ ಶೇ. 60 ಕನ್ನಡ ಪದಗಳನ್ನು ಕಡ್ಡಾಯವಾಗಿ ಬಳಕೆ ಮಾಡಬೇಕೆಂಬ ಕಾನೂನು ಜಾರಿಗೆ ತಂದಿರುವ ರಾಜ್ಯ ಸರ್ಕಾರ, ಅದನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿತ್ತು. ಇದರ ವಿರುದ್ಧ ಬೀದಿಗಿಳಿದಿದ್ದ ಕನ್ನಡ ಪರ ಸಂಘಟನೆಗಳು ನಡೆಸಿದ ವ್ಯವಸ್ಥಿತ ಹೋರಾಟದಿಂದ ಬೆಂಗಳೂರಿನ ಪ್ರತಿಯೊಂದು ಸ್ಥಳದಲ್ಲಿಯೂ ಕನ್ನಡ ನಾಮಫಲಕಗಳು ರಾರಾಜಿಸುತ್ತಿವೆ ಎಂದರು.ಗ್ರಾಮ ಘಟಕದ ಗೌರವಾಧ್ಯಕ್ಷರಾಗಿ ಲತಾ ಈರಪ್ಪ ಚೂರಿ, ಅಧ್ಯಕ್ಷರಾಗಿ ಚನ್ನಬಸಪ್ಪ ಹೆಬ್ಬಾಳ, ಉಪಾಧ್ಯಕ್ಷರಾಗಿ ಕಲ್ಲಪ್ಪ ಲೆಂಕಪ್ಪನವರ, ರೈತ ಘಟಕದ ಅಧ್ಯಕ್ಷರಾಗಿ ಪರಮೇಶ್ ಮುಧೋಣ್ಣನವರ, ಕಾರ್ಮಿಕ ಘಟಕದ ಅಧ್ಯಕ್ಷರಾಗಿ ರಾಘವೇಂದ್ರ ಗುಂಡೇನಹಳ್ಳಿ, ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಶಂಭು ಕಾಕೋಳ, ಆಟೋ ಚಾಲಕರ ವಿಭಾಗಕ್ಕೆ ಕಲ್ಲಪ್ಪ ಫಕೀರಪ್ಪ ಗುಂಡೇನಹಳ್ಳಿ, ಮಹಿಳಾ ಘಟಕದ ಅಧ್ಯಕ್ಷರಾಗಿ ದ್ಯಾಮವ್ವ ಕಲ್ಲಪ್ಪ ಮುದೋಣ್ಣನವರ, ಉಪಾಧ್ಯಕ್ಷರಾಗಿ ವಿದ್ಯಾ ಕಂಡಮ್ಮನವರ, ಕಾರ್ಯದರ್ಶಿಯಾಗಿ ಕಲ್ಲವ್ವ ಗುಂಡೇನಳ್ಳಿ, ಖಜಾಂಚಿಯಾಗಿ ಬಸಮ್ಮ ಸಾವೂರ, ಪ್ರಧಾನ ಕಾರ್ಯದರ್ಶಿಯಾಗಿ ಕವಿತಾ ಭರಡಿ, ಸಂಘಟನಾ ಕಾರ್ಯದರ್ಶಯಾಗಿ ಗಿರಿಜಮ್ಮ ಹುಲ್ಮನಿ, ಪತ್ರಿಕಾ ಕಾರ್ಯದರ್ಶಿಯಾಗಿ ಗೀತಾ ಕನಕಪ್ಪನವರ, ಸಹ ಕಾರ್ಯದರ್ಶಿಯಾಗಿ ಕರಿಯವ್ವ ಮೇಗೇರಿ ಆಯ್ಕೆಯಾದರು. ಇನ್ನುಳಿದಂತೆ ಹನುಮಕ್ಕ ಲೆಂಕಪ್ಪನವರ, ಕಾವೇರಿ ಮುದುಕಮ್ಮನವರ, ಪಾರವ್ವ ಚೂರಿ, ಕಲಾವತಿ ಮುದಕಮ್ಮನವರ, ಹನುಮವ್ವ ಸೊಟ್ಟಮ್ಮನವರ, ಮಂಜಮ್ಮ ಚಿಕ್ಕಮಠ, ಕಲಾವತಿ ಹುಲಿಗೆಮ್ಮನವರ, ಲಕ್ಷ್ಮಿ ನೇಕಾರ, ಈರಮ್ಮ ಹಡಪದ ಅವರನ್ನು ವಿವಿಧ ಘಟಕಗಳಿಗೆ ನೇಮಕ ಮಾಡಲಾಯಿತು.
ಕರವೇ ಘಟಕದ ಮೌಲಾಲಿ ಎರಿಮನಿ, ನೂರಅಹ್ಮದ್ ಲಕ್ಷ್ಮೇಶ್ವರ, ಮಾದೇವಪ್ಪ ಹೆಡಿಗ್ಗೊಡ, ರಮೇಶ್ ಸುಂಕದ ಬಾಹುಬಲಿ ಜೈನರ, ಶರಣ್ ಕುಮಾರ್ ಹಂಚಿನಮನಿ, ಯುವರಾಜ ನವಲಗುಂದ, ಪ್ರಕಾಶ್ ಕೆಮ್ಮಣಕೆರೆ ಪ್ರಭು ಪಾಟೀಲ, ಶಾರದಮ್ಮ ಕರೆಯಣ್ಣನವರ, ಚೌಡಮ್ಮ ಬಣಕಾರ, ರೇಣುಕಾ ಬಡಕಣ್ಣನವರ, ಅಮೃತ್ ಮಜ್ಜಗಿ, ಅಶೋಕ್ ಗದಗ, ಕಿರಣ್ ಶಿವಮೊಗ್ಗ, ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.