60 ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ

KannadaprabhaNewsNetwork |  
Published : May 28, 2025, 12:18 AM IST
27ಕೆಕೆಆರ್1:ಕೊಪ್ಪಳ ಜಿಲ್ಲೆಯ ಜಿಲ್ಲೆಯ ಯಲಬುರ್ಗಾ  ತಾಲೂಕಿನ  ಮಕ್ಕಳ್ಳಿ ಗ್ರಾಮದಲ್ಲಿ  11.95 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೂತನ ಅಂಗನವಾಡಿ ಕೇಂದ್ರದ ಉದ್ಘಾಟನೆ ಜರುಗಿತು.  | Kannada Prabha

ಸಾರಾಂಶ

ಯಲಬುರ್ಗಾ ತಾಲೂಕಿನಾದ್ಯಂತ 60 ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಶಾಸಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಆಡಳಿತದಲ್ಲಿ ಸಂಪೂರ್ಣ ಕಟ್ಟಡಕ್ಕೆ ದೊರಕಿಸುವ ಮೂಲಕ ಮಕ್ಕಳಿಗೆ ಪೌಷ್ಟಿಕ ಆಹಾರ, ಮಕ್ಕಳು ಬೌದ್ಧಿಕ ಮಟ್ಟ ಬೆಳೆಯಲು ಸಹಕಾರ ನೀಡಬೇಕೆಂದು ಯಲಬುರ್ಗಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೇಟದಪ್ಪ ಮಾಳೆಕೊಪ್ಪ ಶಾಸಕ ಬಸವರಾಜ ರಾಯರಡ್ಡಿಗೆ ಮನವಿ ಮಾಡಿದರು.

ಕೊಪ್ಪಳ(ಯಲಬುರ್ಗಾ):

ಯಲಬುರ್ಗಾ ತಾಲೂಕಿನ ಮಕ್ಕಳ್ಳಿ ಗ್ರಾಮದಲ್ಲಿ ₹ 11.95 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಅಂಗನವಾಡಿ ಕೇಂದ್ರವನ್ನು ಯಲಬುರ್ಗಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೇಟದಪ್ಪ ಮಾಳೆಕೊಪ್ಪ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, 1975ರಿಂದ ಈ ವರೆಗೆ ಮಕ್ಕಳ್ಳಿ ಗ್ರಾಮದಲ್ಲಿ ಸ್ವಂತ ಅಂಗನವಾಡಿ ಕಟ್ಟಡವಿರಲಿಲ್ಲ. ಅನ್ನ, ಅಕ್ಷರ, ಆವಿಷ್ಕಾರ ಇದ್ದರೆ ಮಾತ್ರ

ಯಶಸ್ಸು ಸಾಧಿಸಲು ಸಾಧ್ಯ. ಅಂಗನವಾಡಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಯೋಜನೆ ಜಾರಿಗೆ ತಂದಿದ್ದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂದರು.

ತಾಲೂಕಿನಾದ್ಯಂತ 60 ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಶಾಸಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಆಡಳಿತದಲ್ಲಿ ಸಂಪೂರ್ಣ ಕಟ್ಟಡಕ್ಕೆ ದೊರಕಿಸುವ ಮೂಲಕ ಮಕ್ಕಳಿಗೆ ಪೌಷ್ಟಿಕ ಆಹಾರ, ಮಕ್ಕಳು ಬೌದ್ಧಿಕ ಮಟ್ಟ ಬೆಳೆಯಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ತಾಲೂಕು ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕ ಹನಮಂತಗೌಡ ಪೊಲೀಸ್‌ಪಾಟೀಲ್ ಮಾತನಾಡಿ, ಅಂಗನವಾಡಿ, ಶಾಲೆಗಳಿಗೆ ಶೌಚಾಲಯ ಕಟ್ಟಿಸಲು ಸಹಕಾರ ನೀಡಬೇಕು. ಮಕ್ಕಳ ಕಲಿಕೆಗೆ ಸಿದ್ಧತೆ ಮಾಡಿಕೊಡಬೇಕು. ಶಾಲೆಗಳ ಬೇಡಿಕೆಗೆ ಅನುಗುಣವಾಗಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಾವೂ ಕೆಲಸ ಮಾಡಿ ಕೊಡಲು ಸಿದ್ಧರಿದ್ದೇವೆ ಎಂದರು.

ತಾಲೂಕ ಪಂಚಾಯಿತಿ ಸಹಾಯಕ ನಿರ್ದೇಶಕ ಫಕೀರಪ್ಪ ಕಟ್ಟಿಮನಿ, ನೀಲಪ್ಪ ಹೊಸ್ಮನಿ ಮಾತನಾಡಿದರು. ಮುರಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯಮನಪ್ಪ ಮಾಳಿ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ್ಳಿಯ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಿಡಿಒ ಪುಷ್ಪಲತಾ ಮಾಲಿಪಾಟೀಲ್, ಸದಸ್ಯೆ ಪುಷ್ಪಾವತಿ ಕರೆಕುರಿ, ವಜ್ರಬಂಡಿ ಮೇಲ್ವಿಚಾರಕಿ ಗಂಗಾ ಮೇಟಿ, ಲಿಂಗರಾಜ ಹೊಸ್ಮನಿ, ನೀಲಪ್ಪ ಹೊಸ್ಮನಿ, ದುರಗಪ್ಪ ಮಕ್ಕಳ್ಳಿ, ಶೇಖರಗೌಡ ಮಾಲಿಪಾಟೀಲ್, ಮುದಿಯಪ್ಪ ಕರೆಕುರಿ, ಗವಿಸಿದ್ದಪ್ಪ ಹಿರೇಮಠ, ಸಂಗಪ್ಪ ಹುಣಶಿಹಾಳ, ಅಂಗನವಾಡಿ ಕೇಂದ್ರದ ಶಿಕ್ಷಕಿಯರಾದ ವಿಜಯಲಕ್ಷ್ಮಿ ದುರಗಪ್ಪ ಮಕ್ಕಳ್ಳಿ, ಶೋಭಾ ಚಿತ್ತರಗಿಮಠ, ಸುಜಾತ ಹಡಪದ, ಆಶಾ ಕಾರ್ಯಕರ್ತೆ ಗೀತಾ ಪೊಪಾ ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ