ಗೊಂಡಾ-ಗೋರಖ್ಪುರ ಭಾಗದಲ್ಲಿ ಎಂಜಿನಿಯರಿಂಗ್ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಯಶವಂತಪುರ–ಗೋರಖ್ಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲಿನ (12592) ಮಾರ್ಗವನ್ನು ಬದಲಾಯಿಸಲಾಗಿದೆ.
ಬೆಂಗಳೂರು: ಗೊಂಡಾ-ಗೋರಖ್ಪುರ ಭಾಗದಲ್ಲಿ ಎಂಜಿನಿಯರಿಂಗ್ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಯಶವಂತಪುರ–ಗೋರಖ್ಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲಿನ (12592) ಮಾರ್ಗವನ್ನು ಬದಲಾಯಿಸಲಾಗಿದೆ.
ಮಾರ್ಚ್ 2 ಮತ್ತು 9 ರಂದು ಬದಲಾವಣೆ
ಮಾರ್ಚ್ 2 ಮತ್ತು 9 ರಂದು ಯಶವಂತಪುರದಿಂದ ಹೊರಡುವ ರೈಲು ಗೊಂಡಾ ಜಂಕ್ಷನ್, ಬರ್ಹ್ನಿ ಮತ್ತು ಗೋರಖ್ಪುರ ಜಂಕ್ಷನ್ ಮಾರ್ಗವಾಗಿ ಸಂಚರಿಸಲಿವೆ.
ಮಂಕಾಪುರ ಜಂಕ್ಷನ್ ಮತ್ತು ಓರ್ವಾರಾ ನಿಲ್ದಾಣಗಳಲ್ಲಿ ನಿಲ್ಲುವುದಿಲ್ಲ
ಮಾರ್ಗ ಬದಲಾವಣೆಯಿಂದಾಗಿ, ಈ ರೈಲು ತನ್ನ ನಿಗದಿತ ನಿಲ್ದಾಣಗಳಾದ ಮಂಕಾಪುರ ಜಂಕ್ಷನ್ ಮತ್ತು ಓರ್ವಾರಾ ನಿಲ್ದಾಣಗಳಲ್ಲಿ ನಿಲ್ಲುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.