ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥರು ಪ್ರಯಾಣಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಈ ರೀತಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವುದು ಅಕ್ಷಮ್ಯ ಅಪರಾಧ. ಪ್ರತಿ ದಿನ ಇಂತಹ ಘಟನೆಗಳು ಸಮಾಜದಲ್ಲಿ ನಡೆಯುವುದರಿಂದ ಭಯ ಮತ್ತು ಅಶಾಂತಿ ಉಂಟುಮಾಡುತ್ತವೆ.

ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಚಾಲಕ ಮೋಹನ್ ಜೀ ಭಾಗವತ್ ಅವರು ಪ್ರಯಾಣಿಸುತ್ತಿದ್ದ ವಂದೇ ಭಾರತ್ ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿರುವುದನ್ನು ಹಿಂದುಪರ ಸಂಘಟನೆಗಳ ಮುಖಂಡರು ಖಂಡಿಸಿ, ಕ್ರಮಕ್ಕೆ ಒತ್ತಾಯಿಸಿದರು.

ಪಟ್ಟಣದ ತಾಲೂಕು ಕಚೇರಿ ಮುಂಭಾಗ ಹಿಂದು ಪರ ಸಂಘಟನೆಗಳ ಮುಖಂಡ ಬೆಳಗೊಳ ಸುನೀಲ್ ನೇತೃತ್ವದಲ್ಲಿ ಕಾರ್ಯಕರ್ತರು ಸೇರಿ ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥರು ಪ್ರಯಾಣಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಈ ರೀತಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವುದು ಅಕ್ಷಮ್ಯ ಅಪರಾಧ. ಪ್ರತಿ ದಿನ ಇಂತಹ ಘಟನೆಗಳು ಸಮಾಜದಲ್ಲಿ ನಡೆಯುವುದರಿಂದ ಭಯ ಮತ್ತು ಅಶಾಂತಿ ಉಂಟುಮಾಡುತ್ತವೆ. ಹಾಗಾಗಿ ಘಟನೆಗೆ ಸಂಬಂಧಿಸಿದವರನ್ನು ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಭದ್ರತಾ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಹಿಂದುಪರ ಸಂಘಟನೆಯ ಶಿವಾನಂದ, ಶಂಕರ್, ವಿನಾಯಕ, ಶಿವು ಸೇರಿದಂತೆ ಇತರರಿದ್ದರು.ಕರೀಘಟ್ಟ ಬೆಟ್ಟದಲ್ಲಿ ಶ್ರಮದಾನ ಶಿಬಿರ

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಕರಿಘಟ್ಟ ಬೆಟ್ಟದಲ್ಲಿ ಮೈಸೂರಿನ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ 50ಕ್ಕೂ ಹೆಚ್ಚು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಕೆ.ಎಸ್‍. ಪುಟ್ಟಣ್ಣಯ್ಯ ಸ್ವರ್ಣಾರ್ಥ ಪರಿಸರ ಪ್ರೇಮಿ ರಮೇಶ್ ಮಾರ್ಗದರ್ಶನದಲ್ಲಿ ಶ್ರಮದಾನ ಶಿಬಿರ ಕಾರ್ಯಕ್ರಮ ನಡೆಸಿದರು.

ಬೆಟ್ಟದ ಮೇಲಿರುವ ಕುದುರೆ ಕಲ್ಲು ಬಳಿಯ ದಿವಂಗತ ಕೆ ಎಸ್ ಪುಟ್ಟಣ್ಣಯ್ಯನವರ ಸ್ಮರಣಾರ್ಥ ನೆಟ್ಟಿರುವ ಸುಮಾರು 200ಕ್ಕೂ ಹೆಚ್ಚು ಗಿಡಗಳ ಸುತ್ತ ಒಣ ಹುಲ್ಲನ್ನು ತೆರವುಗೊಳಿಸಿ ಬೇಸಿಗೆಯಲ್ಲಿ ಗಿಡಗಳಿಗೆ ಬೆಂಕಿ ಬೀಳದಂತೆ ಸ್ವಚ್ಛ ಮಾಡಿದರು.

ನಂತರ ಟ್ಯಾಂಕರ್ ಮೂಲಕ ನೀರು ತಂದು ಬಾಡುತ್ತಿದ್ದ ಎಲ್ಲಾ ಗಿಡಗಳಿಗೆ ನೀರುಣಿಸಿದರು.

ಶ್ರಮದಾನದ ನಂತರ ವಿದ್ಯಾರ್ಥಿಗಳೊಡನೆ ಮೈಸೂರಿನ ಪರಿಸರ ಅಧ್ಯಯನ ಬೋಧಕರಾದ ಡಾ. ಕೆ ಮಧುಸೂದನ್ ಪ್ರಕೃತಿಯ ವೈಪರಿತ್ಯಕೆ ಕಾರಣಗಳ ಕುರಿತು ಸಂವಾದ ಕಾರ್ಯಕ್ರಮ ನಡೆಸಿ ವಿದ್ಯಾರ್ಥಿಗಳಿಗೆ ಪರಿಸರದ ಮಹತ್ವದ ವಿಚಾರಗಳನ್ನು ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಕಾಲೇಜಿನ ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ ಡಾ,ಹರ್ಷ, ಎನ್‍ ಎಸ್‍ ಎಸ್‍ ಶಿಬಿರಧಿಕಾರಿ ಸಿದ್ದರಾಜು, ಹರೀಶ್ ಹಾಗೂ ಅರಣ್ಯ ಅಧಿಕಾರಿಗಳಾದ ಬಸವರಾಜು ಕೃಷ್ಣ ಇತರರು ಉಪಸ್ಥಿತರಿದ್ದರು.